ವಿಶ್ವಕಪ್ ನಲ್ಲಿ ಬುಮ್ರಾ ಇಲ್ಲದಿದ್ದರೆ ಏನಂತೆ. ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ಖಡಕ್ ಬೌಲರ್. ಈತನೇ ವಿಶ್ವಕಪ್ ಗೆಲ್ಲಿಸುವುದು ಬಿಡಿ.

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೋಚ್ ಹಾಗೂ ಸಪೋರ್ಟ್ ಸ್ಟಾಪ್ ಒಳಗೊಂಡಂತೆ ಭಾರತೀಯ ಕ್ರಿಕೆಟ್ ತಂಡದ ಕ್ರಿಕೆಟಿಗರು ಈಗಾಗಲೇ ಆಸ್ಟ್ರೇಲಿಯಾ ಗೆ ಕಾಲಿಟ್ಟಿದ್ದಾರೆ. ನಿಜಕ್ಕೂ ಕೂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಎನ್ನುವುದು ಭಾರತಕ್ಕೆ ಅಗ್ನಿ ಪರೀಕ್ಷೆಯಾಗಿದೆ. ವಿಶ್ವ ಕಪ್ ಆರಂಭಕ್ಕೂ ಮುನ್ನವೇ ಹಲವಾರು ತೊಂದರೆ ತಾಪತ್ರಯಗಳನ್ನು ಭಾರತೀಯ ಕ್ರಿಕೆಟ್ ತಂಡ ಎದುರಿಸಬೇಕಾಗಿ ಬಂದಿದೆ, ಅದರಲ್ಲೂ ವಿಶೇಷವಾಗಿ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರು ಇಂಜುರಿಯ ಕಾರಣದಿಂದಾಗಿ ತಂಡವನ್ನು ಸೇರಿಕೊಳ್ಳಲಾಗದೆ ಇರುವಂತಹ ಪರಿಸ್ಥಿತಿ ಸಿಲುಕಿದ್ದಾರೆ.

ತಂಡದ ಪ್ರಮುಖ ವೇಗಿ ಆಗಿದ್ದ ಬುಮ್ರಾ ಬೆನ್ನಿನ ಇಂಜುರಿಯ ಸಮಸ್ಯೆಯ ಕಾರಣದಿಂದಾಗಿ ಟೂರ್ನಿಯಿಂದಲೇ ಹೊರ ಬರಬೇಕಾಗಿ ಬಂದಿದೆ. ಇದು ಈಗ ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಸಂಕಷ್ಟದ ಪರಿಸ್ಥಿತಿ ನೀಡಬಹುದು ಎನ್ನಲಾಗುತ್ತಿದೆ. ಇದರ ನಡುವಲ್ಲಿಯೇ ಕೋಚ್ ರಾಹುಲ್ ದ್ರಾವಿಡ್ ಈ ಒಬ್ಬ ಬೌಲರ್ ಬಂದರೆ ತಂಡದ ಬೌಲಿಂಗ್ ಮತ್ತೆ ತನ್ನ ಲಯಕೆ ಮರಳಿ ವಾಪಸು ಬರಲಿದೆ ಎಂಬ ಪರೋಕ್ಷವಾದ ಭರವಸೆಯನ್ನು ನೀಡಿದ್ದಾರೆ. ಹೌದು ಭಾರತ ವಿಶ್ವ ಕಪ್ ಟೂರ್ನಮೆಂಟ್ ಪ್ರಾರಂಭ ಆಗುವುದಕ್ಕೆ ಮುನ್ನ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

shami might replace bumrah | ವಿಶ್ವಕಪ್ ನಲ್ಲಿ ಬುಮ್ರಾ ಇಲ್ಲದಿದ್ದರೆ ಏನಂತೆ. ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ಖಡಕ್ ಬೌಲರ್. ಈತನೇ ವಿಶ್ವಕಪ್ ಗೆಲ್ಲಿಸುವುದು ಬಿಡಿ.
ವಿಶ್ವಕಪ್ ನಲ್ಲಿ ಬುಮ್ರಾ ಇಲ್ಲದಿದ್ದರೆ ಏನಂತೆ. ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ಖಡಕ್ ಬೌಲರ್. ಈತನೇ ವಿಶ್ವಕಪ್ ಗೆಲ್ಲಿಸುವುದು ಬಿಡಿ. 2

ಇನ್ನು ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 23 ರಂದು ಆಡಲಿದೆ. ಸ್ಟ್ಯಾಂಡ್ ಬೈ ಆಟಗಾರರ ಲಿಸ್ಟಿನಲ್ಲಿರುವ ಮೊಹಮ್ಮದ್ ಶಮಿ ಮಹಾಮಾರಿಯಿಂದ ಚೇತರಿಸಿಕೊಳ್ಳುತ್ತಿದ್ದು ಎನ್ ಸಿ ಎ ನಲ್ಲಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದರೆ ಅತಿ ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಬಹುದಾಗಿದೆ ಎಂಬುದಾಗಿ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಆಸ್ಟ್ರೇಲಿಯಾ ನೆಲದ ಪಿಚ್ ಹಾಗೂ ಪರಿಸ್ಥಿತಿಗೆ ಹೋಲಿಸಿದರೆ ಅತ್ಯಂತ ಅನುಭವವನ್ನು ಹೊಂದಿರುವ ಹಾಗೂ ಎರಡು ಕಡೆಗಳಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಮೊಹಮ್ಮದ್ ಶಮಿ ಅವರು ತಂಡಕ್ಕೆ ಸಾಕಷ್ಟು ನೆರವನ್ನು ನೀಡಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ ಭಾರತದ ಬೌಲಿಂಗ್ ವಿಭಾಗದಲ್ಲಿ ಕೊಂಚಮಟ್ಟಿಗೆ ಸಮಾಧಾನ ಸಿಗಲಿದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.