ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಕಬ್ಜ ಸಿನಿಮಾ ಅನ್ನು ಅಮೆಜಾನ್ ಪ್ರೈಮ್ ಎಷ್ಟು ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೇ ಬಿಡುಗಡೆ ಆಗಿರುವ ಆರ್ ಚಂದ್ರ ನಿರ್ದೇಶನದ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟನಾಗಿ ನಟಿಸಿರುವ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಬ್ಜಾ ಸಿನಿಮಾದ ಟೀಸರ್ ಎಲ್ಲರ ಮನ ಗೆಲ್ಲಲು ಯಶಸ್ವಿಯಾಗಿತ್ತು. ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ದೊಡ್ಡ ಮಟ್ಟದಲ್ಲಿ ಮೇಕಿಂಗ್ ಹಾಗೂ ಈ ರೀತಿಯ ಪ್ರೆಸೆಂಟೇಷನ್ ಮೂಲಕ ಸದ್ದು ಮಾಡಿರುವ ಚಿತ್ರ ಎಂಬುದಾಗಿ ಕಬ್ಜಾ ಎಲ್ಲಾ ಕಡೆ ಸದ್ದು ಮಾಡಿತ್ತು. ಆರ್ ಚಂದ್ರು ಅವರ ನಿರ್ದೇಶನದ ಮೇಲೆ ಅನುಮಾನ ಪಟ್ಟವರಿಗೆ ಇದೊಂದು ಸರಿಯಾದ ಉತ್ತರ ಆಗಿತ್ತು.

ಕನ್ನಡ ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ ಗಳಾಗಿರುವ ಉಪ್ಪಿ ಹಾಗೂ ಕಿಚ್ಚ ಇಬ್ಬರೂ ಕೂಡ ಎರಡನೆಯ ಬಾರಿಗೆ ಈ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈಗಾಗಲೇ ಟೀಸರ್ ಮೂಲಕ ಎಲ್ಲರ ಗಮನ ಸೆಳೆದಿರುವ ಕಬ್ಜಾ ಸಿನಿಮಾ ಅತಿ ಶೀಘ್ರದಲ್ಲೇ ದೇಶದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಪಂಚಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ. ಈ ಹಿಂದೆ ಒಂಬತ್ತು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತದೆ ಎಂಬುದಾಗಿ ಮಾತನಾಡಲಾಗಿತ್ತು. ಮುಂದಿನ ದಿನಗಳಲ್ಲಿ ಇದು ಅಧಿಕೃತವಾಗಿ 9 ಭಾಷೆಗಳಲ್ಲಿ ಬಿಡುಗಡೆ ಆಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

kabzaa ott price | ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಕಬ್ಜ ಸಿನಿಮಾ ಅನ್ನು ಅಮೆಜಾನ್ ಪ್ರೈಮ್ ಎಷ್ಟು ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದೆ ಗೊತ್ತೇ??
ಕೋಟಿ ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಕಬ್ಜ ಸಿನಿಮಾ ಅನ್ನು ಅಮೆಜಾನ್ ಪ್ರೈಮ್ ಎಷ್ಟು ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದೆ ಗೊತ್ತೇ?? 2

ಇನ್ನು ಈಗಾಗಲೇ ಚಿತ್ರ ಸೃಷ್ಟಿಸಿರುವ ಬೇಡಿಕೆಯನ್ನು ಗಮನಿಸಿರುವ ದೈತ್ಯ ಡಿಜಿಟಲ್ ಸಂಸ್ಥೆ ಆಗಿರುವ ಅಮೆಜಾನ್ ಪ್ರೈಮ್ ಈ ಸಿನಿಮಾವನ್ನು ಈಗಾಗಲೇ ಖರೀದಿಸಿದೆಯಂತೆ. ಇನ್ನು ಅಮೆಜಾನ್ ಪ್ರೈಮ್ ಕಬ್ಜಾ ಸಿನಿಮಾವನ್ನು ಖರೀದಿಸಿರುವ ಬೆಲೆ ನೋಡಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಮಿತ್ರರೇ ಅಮೆಜಾನ್ ಪ್ರೈಮ್ ಸಂಸ್ಥೆ ಕಬ್ಜಾ ಸಿನಿಮಾದ ಡಿಜಿಟಲ್ ರೈಟ್ಸ್ ಅನ್ನು ಭರ್ಜರಿ 80 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿದೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಟೀಸರ್ ನಲ್ಲಿ ಸಿನಿಮಾದ ಮೇಕಿಂಗ್ ನೋಡಿರುವ ಸಿನಿಮಾ ರಸಿಕರು ಹಾಗೂ ಅಭಿಮಾನಿಗಳು ಸಿನಿಮಾ ಆದಷ್ಟು ಬೇಗ ಬಿಡುಗಡೆಯಾಗಲಿ ಎಂಬುದಾಗಿ ಕಾಯುತ್ತಿದ್ದಾರೆ.

Comments are closed.