ಸುದೀಪ್ ಅಲ್ಲವೇ ಅಲ್ಲ, ವಿಕ್ರಾಂತ್ ರೋಣ ಕಥೆಯನ್ನು ಅನೂಪ್ ಬಂಡಾರಿ ಮೊದಲು ಹೇಳಿದ್ದು ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇದೆ ಜುಲೈ 28ರಂದು 50ಕ್ಕೂ ಅಧಿಕ ದೇಶಗಳಲ್ಲಿ ಏಳು ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಬಹುಭಾಷಾ ಚಿತ್ರವಾಗಿ ಕನ್ನಡದ ಹೆಮ್ಮೆಯ ವಿಕ್ರಾಂತ್ ರೋಣ ಅದ್ದೂರಿಯಾಗಿ ಬಿಡುಗಡೆಯನ್ನು ಕಾಣಲಿದೆ. ಚಿತ್ರದ ಬಿಡುಗಡೆಯ ಕುರಿತಂತೆ ಪ್ರತಿಯೊಬ್ಬರು ಕೂಡ ನಿರೀಕ್ಷೆಯನ್ನು ದೊಡ್ಡಮಟ್ಟದಲ್ಲಿ ಹೊಂದಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಪ್ರತಿಯೊಬ್ಬರು ಕತ್ತೆತ್ತಿ ನೋಡುವಂತೆ ಮಾಡುತ್ತಿರುವ ಸಿನಿಮಾ ಎಂಬುದಾಗಿ ಸಿನಿಮಾ ಪಂಡಿತರು ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಈ ಸಿನಿಮಾದ ಹಿನ್ನೆಲೆಯನ್ನು ನೋಡುತ್ತ ಹೋದರೆ ಬಿಲ್ಲಾ ರಂಗ ಭಾಷಾ ಸಿನಿಮಾದ ಸ್ಕ್ರಿಪ್ಟ್ ಬರೆಯುತ್ತಿದ್ದಾಗ ಮುಂದೇನು ಬರೆಯಬೇಕು ಎನ್ನುವ ಗೊಂದಲದಲ್ಲಿ ಇದ್ದಾಗ ಈಗಾಗಲೇ ಈ ಕತೆಯನ್ನು ಬರೆಯಲಾಗಿತ್ತು. ಕಿಚ್ಚ ಸುದೀಪ್ ಅವರಿಗೂ ಹೇಳುವ ಮುನ್ನವೇ ಇದನ್ನು ಬೇರೆ ಇಬ್ಬರು ವ್ಯಕ್ತಿಗಳಿಗೆ ಹೇಳಿದ ನಂತರವೇ ಕಿಚ್ಚ ಸುದೀಪ ರವರಿಗೆ ಅಪ್ರೋಚ್ ಮಾಡಲಾಗಿತ್ತು ಎಂಬುದಾಗಿ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ. ಹಾಗಿದ್ದರೆ ಅದು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

anup | ಸುದೀಪ್ ಅಲ್ಲವೇ ಅಲ್ಲ, ವಿಕ್ರಾಂತ್ ರೋಣ ಕಥೆಯನ್ನು ಅನೂಪ್ ಬಂಡಾರಿ ಮೊದಲು ಹೇಳಿದ್ದು ಯಾರಿಗೆ ಗೊತ್ತೇ??
ಸುದೀಪ್ ಅಲ್ಲವೇ ಅಲ್ಲ, ವಿಕ್ರಾಂತ್ ರೋಣ ಕಥೆಯನ್ನು ಅನೂಪ್ ಬಂಡಾರಿ ಮೊದಲು ಹೇಳಿದ್ದು ಯಾರಿಗೆ ಗೊತ್ತೇ?? 2

ಹೌದು ಗೆಳೆಯರೇ ಮೊದಲಿಗೆ ಚಿತ್ರದ ನಿರ್ಮಾಪಕ ಆಗಿರುವ ಜಾಕ್ ಮಂಜುನಾಥ್ ರವರಿಗೆ ವಿಕ್ರಾಂತ್ ರೋಣ ಸಿನಿಮಾದ ಕಥೆಯನ್ನು ಹೇಳಿದ ನಂತರ ಕಿಚ್ಚ ಸುದೀಪ್ ರವರ ಪತ್ನಿ ಆಗಿರುವ ಪ್ರಿಯಾ ಸುದೀಪ್ ರವರಿಗೆ ಕೂಡ ಈ ಕಥೆಯನ್ನು ನರೇಟ್ ಮಾಡಲಾಗಿತ್ತು. ಕಥೆಯನ್ನು ಕೇಳಿದ ನಂತರ ಪ್ರಿಯಾ ಸುದೀಪ್ ರವರು ಸುದೀಪ್ ಸಿನಿಮಾವನ್ನು ಮಾಡಲೇಬೇಕು ಎನ್ನುವುದಾಗಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇದಾದ ನಂತರವೇ ಕಿಚ್ಚ ಸುದೀಪ್ ರವರು ಕೂಡ ಕಥೆಯನ್ನು ಕೇಳಿ ಒಪ್ಪಿ ಸಿನಿಮಾವನ್ನು ದೊಡ್ಡಮಟ್ಟದಲ್ಲಿ ಮಾಡುವ ನಿರ್ಧಾರವನ್ನು ಮಾಡಿ ಇಂದು ವಿಕ್ರಾಂತ್ ಬರೋಣ ಸಿನಿಮಾ ಪ್ರತಿಯೊಂದು ಕಡೆಯಲ್ಲಿ ಕೂಡ ಸದ್ದು ಮಾಡುತ್ತಿರುವುದು. ಇನ್ನೇನು ಎರಡೇ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ವಿಕ್ರಾಂತ್ ರೋಣ ಬಾಕ್ಸಾಫೀಸ್ ನಲ್ಲಿ ತನ್ನದೇ ಆದ ದಾಖಲೆಯನ್ನು ಬರೆಯಲಿ ಎಂಬುದಾಗಿ ಆಶಿಸೋಣ.

Comments are closed.