Kannada Story: ಸುಂದರಿ ಎಂದು ಹಿಂದೆ ಬಿದ್ದು ಪ್ರೀತಿ ಮಾಡಿದನು, ಆಕೆ ಕೂಡ ಪ್ರೀತಿ ಮಾಡಿದಳು, ಆದರೆ ಒಂಟಿಯಾಗಿ ಕರೆಸಿ ಏನು ಮಾಡಿದ್ದಾಳೆ ಗೊತ್ತೇ? ಸುಂದರಿಯ ಮತ್ತೊಂದು ಮುಖ.
Kannada Story: ಈಗಿನ ಕಾಲದಲ್ಲಿ ಪ್ರೀತಿ ಎನ್ನುವ ಪದದ ಅರ್ಥವೇ ಬದಲಾಗಿ ಹೋಗಿದೆ ಎಂದರೆ ತಪ್ಪಲ್ಲ. ಇಂದು ನಾವು ನಿಮಗೆ ಪ್ರೀತಿಯ ವಿಷಯದಲ್ಲಿ ನಡೆದ ಒಂದು ನೈಜ ಘಟನೆ ಬಗ್ಗೆ ತಿಳಿಸುತ್ತೇವೆ. ಈ ಘಟನೆ ಕೇಳಿದರೆ ನಿಮಗೂ ಶಾಕ್ ಆಗುವುದು ಗ್ಯಾರಂಟಿ. ಹರ್ದೋಯ್ ನಗರದ ಶಿವ ಬಿಹಾರ ಕಾಲೋನಿ ಹುಡುಗನ ಹೆಸರು ವಿವೇಕ್ ಭಾರತಿ. ಇವನಿಗೆ ಐದು ವರ್ಷಗಳ ಹಿಂದೆಯಷ್ಟೇ ಆಕ್ಸಿಸ್ ಬ್ಯಾಂಕ್ ನಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಸಿಕ್ಕಿತ್ತು, ಮೂರು ವರ್ಶಗಳು ಹರ್ದೋಯ್ ನಲ್ಲಿ ಕೆಲಸ ಮಾಡಿದ ನಂಟಿಕ್ರ ಆತನಿಗೆ ಶಾಹಾಬಾದ್ ಗೆ ಟ್ರಾನ್ಸ್ಫರ್ ಆಯಿತು. ಅಲ್ಲಿ ಕೆಲಸ ಶುರು ಮಾಡಿದ ಬಳಿಕ ಅವನಿಗೆ ಸೋಶಿಯಲ್ ಮೀಡಿಯಾ ಮೂಲಕ ದಿಲ್ಖುಸ್ ಎನ್ನುವ ಹುಡುಗಿಯ ಪರಿಚಯವಾಯಿತು..
ಒಂದಷ್ಟು ದಿನ ಚಾಟ್ ಮಾಡುತ್ತಿದ್ದವರು ಮೀಟ್ ಮಾಡಬೇಕು ಎಂದು ನಿರ್ಧರಿಸಿ, ಶಾಹಾಬಾದ್ ನ ಪಾರ್ಕ್ ನಲ್ಲಿ ಭೇಟಿ ಮಾಡಿದರು. ಆಗ ಇಬ್ಬರ ನಡುವೆ ಪ್ರೀತಿ ಶುರುವಾಯಿತು. ಇವರಿಬ್ಬರು ಆಗಾಗ ಭೇಟಿ ಮಾಡುತ್ತಿದ್ದರು, ಪ್ರೀತಿ ಮಾಡುತ್ತಿದ್ದರು. ಆದರೆ ಒಂದು ದಿನ ಇವರಿಬ್ಬರನ್ನು ಜೊತೆಯಾಗಿ ದಿಲ್ಖುಸ್ ನ ಗಂಡ ನೋಡಿದ, ದಿಲ್ಖುಸ್ ಗೆ ಅದಾಗಲೇ ಮದುವೆಯಾಗಿತ್ತು, ಆದರೆ ಆ ವಿಚಾರವನ್ನು ವಿವೇಕ್ ಗೆ ಹೇಳಿರಲಿಲ್ಲ. ಈ ವಿಚಾರ ಆಕೆಯ ಗಂಡನಿಗೆ ಹಿಂದೂ ಹುಡುಗನನ್ನು ಮುಸ್ಲಿಂ ಹುಡುಗಿ ಪ್ರೀತಿಸುವುದೇ ಎಂದು ಗೊತ್ತಾಗಿ ದಿಲ್ಖುಸ್ ಗೆ ಚೆನ್ನಾಗಿ ಹೊಡೆದನು, ಬಹಳ ಸಮಯ ಇವರಿಬ್ಬರು ಭೇಟಿಯಾಗಲಿಲ್ಲ. ಇದನ್ನು ಓದಿ..Kannada Story: ಜನುಮ ಜನುಮದ ಅನುಭಂದ ಅಂತ ಪ್ರೀತಿಸಿ ಮದುವೆಯಾದರು, ಹೊಸ ಮನೆ ಮಾಡಿದ ಬಳಿಕ ಏನೆಲ್ಲಾ ನಡೆದು ಹೋಗಿತ್ತು ಗೊತ್ತೆ? ಬೆಚ್ಚಿಬೀಳಿಸಿದ ನಿಜ ಘಟನೆ
ಬಹಳ ದಿನಗಳ ನಂತರ ದಿಲ್ಖುಸ್ ವಿವೇಕ್ ನನ್ನು ಭೇಟಿ ಮಾಡಲು ಬಂದಾಗ, ಇರುವ ವಿಚಾರವನ್ನೆಲ್ಲಾ ಹೇಳಿದಳು. ಆಗ ವಿವೇಕ್ ನಾವು ಈಗಲೇ ಮದುವೆಯಾಗೋಣ ಎಂದನು, ಆದರೆ ದಿಲ್ಖುಸ್ ಅದಕ್ಕೆ ಒಪ್ಪಲಿಲ್ಲ. ಆಕೆ ವಿವೇಕ್ ಅನ್ನು ಭೇಟಿಯಾಗಿ ಮನೆಗೆ ಬಂದಾಗಜ್ ಆಕೆಯ ಗಂಡನಿಗೆ ಈ ವಿಚಾರ ಗೊತ್ತಾಗಿ ಚೆನ್ನಾಗಿ ಹೊಡೆದು, ವಿವೇಕ್ ನನ್ನು ಮುಗಿಸಬೇಕು ಎಂದನು, ದಿಲ್ಖುಸ್ ಗೆ ವಿವೇಕ್ ಮೇಲೆ ನಿಜಕ್ಕೂ ಪ್ರೀತಿ ಇದ್ದ ಕಾರಣ ಆಕೆ ಇದಕ್ಕೆ ಒಪ್ಪಲಿಲ್ಲ. ಆಗ ಆಕೆಯ ಗಂಡ ಪ್ರತಿದಿನ ದಿಲ್ಖುಸ್ ಗೆ ತೊಂದರೆ ಕೊಡಲು ಶುರು ಮಾಡಿದ, ಒಂದಲ್ಲಾ ಒಂದು ರೀತಿಯಲ್ಲಿ ಹೆಂಡತಿಗೆ ತೊಂದರೆ ಕೊಡುತ್ತಲೇ ಇದ್ದ. ಈ ನೋವನ್ನು ಸಹಿಸಲಾಗದೆ ಆಕೆ ಕೊನೆಗೂ ಗಂಡನ ಪ್ಲಾನ್ ಗೆ ಒಪ್ಪಿದಳು.
ವಿವೇಕ್ ಅನ್ನು ಮುಗಿಸಲು ಪ್ಲಾನ್ ರೆಡಿ ಆಯಿತು. 2018ರ ಆಗಸ್ಟ್ 25ರಂದು ತನ್ನ ಚಿಕ್ಕಮ್ಮನ ಮನೆಗೆ ಹೋಗುತ್ತಾನೆ ವಿವೇಕ್. ಮರುದಿನ ಅಲ್ಲಿಂದ ಶಹಾಬಾದ್ ಗೆ ಬರುತ್ತಾನೆ. ಅಂದು ಸಂಜೆ ತನ್ನ ತಂದೆಗೆ ಕಾಲ್ ಮಾಡಿ, ಬ್ಯಾಂಕ್ ನಲ್ಲಿದ್ದೇನೆ ಸಂಜೆ ಬರುತ್ತೇನೆ ಎಂದು ಹೇಳುತ್ತಾನೆ. ನಂತರ ದಿಲ್ಖುಸ್ ಇಂದ ಕಾಲ್ ಬಂದು, ವಿವೇಕ್ ಲಕ್ನೌ ಗೆ ಬರಬೇಕು ಎನ್ನುತ್ತಾಳೆ, ಆಗ ವಿವೇಕ್ ಲಕ್ನೌ ಟ್ರೇನ್ ಹತ್ತುತ್ತಾನೆ. ತುಂಬಾ ಪ್ರೀತಿ ಮಾಡುತ್ತಿದ್ದ ದಿಲ್ಖುಸ್ ಆತನ ಮೇಲೆ ಹೀಗೆ ಸಂಚು ಮಾಡಿದ್ದಾಳೆ ಎಂದು ಅವನಿಗೆ ಗೊತ್ತಿರಲಿಲ್ಲ. ಲಕ್ನೌ ಗೆ ಬಂದು ದಿಲ್ಖುಸ್ ಭೇಟಿ ಮಾಡಿ, ಒಂದು ಗಂಟೆಗಳ ಕಾಲ ಇಬ್ಬರು ಮಾತನಾಡಿದರು. ಆಕೆಯ ಜೊತೆಗೆ ಗಂಡ ಕೂಡ ಬಂದಿದ್ದ, ಆದರೆ ಅವನು ತನ್ನ ರಿಲೇಟಿವ್ ಎಂದು ಹೇಳಿದಳು ದಿಲ್ಖುಸ್. ಇದನ್ನು ಓದಿ..Kannada News: ದೇಶವನ್ನೇ ನಿಲ್ಲಿಸುವ ಶಕ್ತಿ ಹೊಂದಿರುವ ನಟಿ, ಬಾಯ್ ಫ್ರೆಂಡ್ ಜೊತೆ ಮದುವೆಯಾಗುವ ಮುನ್ನವೇ ಒಂದೇ ಮನೆಯಲ್ಲಿ ಸಂಸಾರ. ಹೊರಬಿತ್ತು ಕರಾಳ ಮುಖ. ಏನಾಗಿದೆ ಗೊತ್ತೇ?
ಬಳಿಕ ಅವನಿಗೆ ತಂದೆ ಕಾಲ್ ಮಾಡಿದಾಗ, ಕೆಲಸದ ಮೇಲೆ ಲಕ್ನೌಗೆ ಬಂದಿದ್ದೇನೆ ಎಂದು ಹೇಳಿದ. ನಂತರ ಅಂದು ರಾತ್ರಿ ದಿಲ್ಖುಸ್ ಅನ್ನು ಮತ್ತೆ ಭೇಟಿ ಆಗಿ, ಆಕೆ ಹೋಟೇಲ್ ನಲ್ಲಿ ತಂಗಿದ್ದು, ಬೆಳಗ್ಗೆ ಹೋಗೋಣ ಎಂದು ಹೇಳಿದಳು, ವಿವೇಕ್ ಆಕೆಯ ಮಾತಿಗೆ ಒಪ್ಪಿದನು. ಇಬ್ಬರು ಹೋಟೆಲ್ ನಲ್ಲಿ ಉಳಿದುಕೊಂಡರು. ಆಗ ವಿವೇಕ್ ಹತ್ತಿರ ಬಂದ ದಿಲ್ಖುಸ್ ಗಂಡ, ಒಂದು ವಾಕ್ ಗೆ ಹೋಗಿ ಬರೋಣ ಎಂದು ವಿವೇಕ್ ನನ್ನು ಕರೆದುಕೊಂಡು ಹೋಗುತ್ತಾನೆ. ವಿವೇಕ್ ಕೂಡ ಹಿಂದು ಮುಂದು ಯೋಚನೆ ಮಾಡುತ್ತಾನೆ, ಹೊರಗೆ ಕರೆದುಕೊಂಡು ಹೋಗಿ, ಚೆನ್ನಾಗಿ ಕುಡಿಸುತ್ತಾನೆ.
ನಂತರ ಕಾರಿನಲ್ಲಿ ತಿರಾಹೆ ಎನ್ನುವ ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ. ಅದೊಂದು ಜನರೇ ಓಡಾದದ ಪ್ರದೇಶ ಆಗಿತ್ತು, ಆ ಜಾಗಕ್ಕೆ ವಿವೇಕ್ ನನ್ನು ಕರೆದುಕೊಂಡು ಹೋಗಿ, ಅವನ ಕಥೆಯನ್ನು ಮುಗಿಸುವ ಪ್ರಯತ್ನ ಮಾಡುತ್ತಾನೆ, ವಿವೇಕ್ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರು ಕೂಡ, ಆಗಲಿಲ್ಲ, ಕೊನೆಗೆ ವಿವೇಕ್ ಪ್ರಾಣಪಕ್ಷಿ ಹಾರಿಹೋಯಿತು. ಮರುದಿನ ವಿವೇಕ್ ಆ ಸ್ಥಿತಿಯಲ್ಲಿ ಬಿದ್ದಿದ್ದನ್ನು ನೋಡಿ, ಜನರು ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಬಂದು, ಎಲ್ಲವನ್ನು ಪರಿಶೀಲಿಸಿ, ವಿವೇಕ್ ಫೋನ್ ಕೂಡ ಟ್ರ್ಯಾಕ್ ಮಾಡಿದರು. ಕೊನೆಗೆ ವಿಷಯ ಗೊತ್ತಾಗಿ, ದಿಲ್ಖುಸ್ ಮತ್ತು ಆಕೆಯ ಗಂಡನನ್ನು ಬಂಧಿಸಿದರು. ಇದನ್ನು ಓದಿ..Relationship: ಹೆಚ್ಚು ಬೇಡ, ಹೆಣ್ಣಿನ ಈ ಮೂರು ರಹಸ್ಯಗಳನ್ನು ತಿಳಿದುಕೊಳ್ಳಿ, ಮೋಸ ಎಂದಿಗೂ ಹೋಗುವುದಿಲ್ಲ, ನೀವೇ ಕಿಂಗ್ ಆಗಿ ಬದುಕುತ್ತೀರಾ. ಏನೇನು ಗೊತ್ತೇ??
Comments are closed.