ಬಿಲ್ಡ್ ಅಪ್ ಸೂರ್ಯ ರವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಕಾರಣ ಬಹಿರಂಗ ! ಅಸಲಿ ಕಥೆ ಇಲ್ಲಿದೆ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಆಸ್ಟ್ರೇಲಿಯ ತಂಡದ ವಿರುದ್ಧ ಸರಣಿಗೆ ಸೂರ್ಯಕುಮಾರ್ ಆಯ್ಕೆಯಾಗಿಲ್ಲ ಎಂದು ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಸಿಐ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಆಯ್ಕೆದಾರರು ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸೂರ್ಯ ಕುಮಾರ್ ಯಾದವ್ ರವರನ್ನು ಮರೆತು ಕೆ ಎಲ್ ರಾಹುಲ್ ಮನೀಷ್ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಮಣೆ ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ತಂಡದ ಅಭಿಮಾನಿಗಳು ಟ್ರೆಂಡಿಂಗ್ ಸೃಷ್ಟಿಸಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ರವರ ಜೊತೆ ಮೈದಾನದಲ್ಲಿ ನಡೆದ ವಿವಾದಾತ್ಮಕ ಘಟನೆಯಿಂದಾಗಿ ಸೂರ್ಯ ಕುಮಾರ್ ಅವರ ಆಯ್ಕೆ ಮತ್ತಷ್ಟು ಸದ್ದು ಮಾಡಿದೆ.

ಹೀಗಿರುವಾಗ ಆಯ್ಕೆದಾರರು ಯಾವ ಕಾರಣಕ್ಕಾಗಿ ಸೂರ್ಯಕುಮಾರ ಯಾದವ್ ಅವರನ್ನು ಆಯ್ಕೆ ಮಾಡಿಲ್ಲ ಎಂದು ಆಲೋಚಿಸದೆ ಎಲ್ಲರೂ ಮನಬಂದಂತೆ ಆಯ್ಕೆದಾರರ ವಿರುದ್ಧ ಟೀಕೆಗಳ ಬಾಣಗಳನ್ನು ಸಲ್ಲಿಸುತ್ತಿದ್ದಾರೆ. ಹೌದು, ಸ್ನೇಹಿತರೆ ನಾವು ಅಂಕಿ ಅಂಶಗಳನ್ನು ಗಮನಿಸುವುದಾದರೆ ಕಳೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ರವರು ಶೇಕಡ ಐವತ್ತಕ್ಕೂ ಹೆಚ್ಚು ಸರಾಸರಿ ಇಂದ ಬ್ಯಾಟಿಂಗ್ ಮಾಡಿದ್ದಾರೆ, ಇನ್ನು ಕೆಎಲ್ ರಾಹುಲ್ ಹೊರತು ಅತ್ಯುತ್ತಮ ಪ್ರದರ್ಶನ ನೀಡಿ ಹಲವಾರು ದಿಗ್ಗಜರು ಕೂಡ ಕೆಎಲ್ ರಾಹುಲ್ ಅವರ ಆಟ ಕಂಡು ಭೇಷ್ ಎಂದಿದ್ದರು. ಇನ್ನು ಕನ್ನಡಿಗ ಮನೀಶ್ ಪಾಂಡೆ ರವರಂತೂ 150ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಯುವ ಆಟಗಾರರು ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಇವರೆಲ್ಲರನ್ನು ಹೊರತುಪಡಿಸಿ ಸೂರ್ಯ ಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಬೇಕು ಎಂದರೇ ಅವರು ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಾಗಿತ್ತು ಆದರೆ ಇದೇ ಮೊಟ್ಟಮೊದಲ ಬಾರಿಗೆ ಐಪಿಎಲ್ ಟೂರ್ನಿ ಗೆ ಪಾದಾರ್ಪಣೆ ಮಾಡಿರುವ ನಮ್ಮ ದೇವದತ್ತ ಪಡಿಕಲ್ ಅವರಿಗಿಂತ 60ರ ಕಡಿಮೆ ಗಳಿಸಿರುವ ಸೂರ್ಯಕುಮಾರ್ ನಾನು ಎಷ್ಟೋ ಸಾಧನೆ ಮಾಡಿದ್ದೇನೆ ಎಂದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಕೆಲವು ಹೇಳಿಕೆಗಳು ಜನರನ್ನು ಭಾವನಾತ್ಮಕವಾಗಿ ಬೆಸೆದುಕೊಂಡು ಅವರ ಪರವಾಗಿ ಆಯ್ಕೆದಾರರ ವಿರುದ್ಧ ಮಾತನಾಡುವಂತೆ ಮಾಡಿದೆ.

ಇನ್ನು ಐಪಿಎಲ್ ಟೂರ್ನಿ ಯನ್ನು ಹೊರತುಪಡಿಸಿದರೇ ದೇಶಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಸೂರ್ಯ ಕುಮಾರ್ ಯಾದವ್ ಅವರ ಅಭಿಮಾನಿಗಳು ಹೇಳುತ್ತಿದ್ದರೂ ಕೂಡ ಅಂಕಿ ಅಂಶಗಳನ್ನು ಗಮನಿಸುವುದಾದರೆ ದೇವದತ್ ಪಡಿಕಲ್ ರವರು ರಣಜಿ ಟ್ರೋಫಿಯಲ್ಲಿ 649, ವಿಜಯ ಅಜಾರೆ ಟ್ರೋಫಿಯಲ್ಲಿ 609, ಮುಸ್ತಕ್ ಅಲಿ ಟ್ರೋಫಿಯಲ್ಲಿ 580 ಹಾಗೂ ಈ ಬಾರಿಯ ಐಪಿಎಲ್ ನಲ್ಲಿ 417 ರನ್ ಗಳಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಸೂರ್ಯಕುಮಾರ್ ರವರು ರಣಜಿ ಟ್ರೋಫಿಯಲ್ಲಿ 508, ವಿಜಯ ಅಜಾರೆ ಟ್ರೋಫಿಯಲ್ಲಿ 226, ಮುಸ್ತಕ್ ಅಲಿ ಟ್ರೋಫಿಯಲ್ಲಿ 392 ಹಾಗೂ ಈ ಬಾರಿಯ ಐಪಿಎಲ್ ನಲ್ಲಿ 362 ರನ್ ಗಳಿಸುವ ಮೂಲಕ ದೇವದತ್ತ ಪಡಿಕಲ್ ಅವರಿಗಿಂತ ಎಲ್ಲಾ ಟೂರ್ನಿಗಳಲ್ಲಿಯೂ ಕೂಡ ಕಡಿಮೆ ರನ್ ಗಳಿಸಿದ್ದಾರೆ.ಈ ಯುವ ಆಟಗಾರನಷ್ಟು ರನ್ ಗಳಿಸಿದ ಸೂರ್ಯ ರವರು ಎಂಟು ವರ್ಷಗಳ ಐಪಿಎಲ್ ಟೂರ್ನಿಯಲ್ಲಿ 10 ಅರ್ಧಶತಕ ಗಳಿಸಿ ತನ್ನನ್ನು ಆಯ್ಕೆ ಮಾಡದೆ ಇರುವುದನ್ನು ಪ್ರಶ ಸುವುದು ನಿಜಕ್ಕೂ ನಗು ತರಿಸುತ್ತದೆ.

Comments are closed.