ಬಿಗ್ ನ್ಯೂಸ್: ಶಿರಾದಲ್ಲಿ ಕಾಂಗ್ರೆಸ್ – ಜೆಡಿಎಸ್ ಗೆ ಮರ್ಮಾಘಾತ ! ಎಲ್ಲವೂ ಬದಲಾದದ್ದು ಇಬ್ಬರಿಂದ !

ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಇದೀಗ ಎಲ್ಲೆಡೆ ಉಪಚುನಾವಣೆಯ ಕಾವು ಏರಿದ್ದು ನಡೆಯುತ್ತಿರುವುದು ಕೇವಲ ಎರಡು ಕ್ಷೇತ್ರಗಳ ಉಪಚುನಾವಣೆ ಯಾದರೂ ಇಡೀ ರಾಜ್ಯದ ಎಲ್ಲಾ ನಾಯಕರು ಉಪಚುನಾವಣೆಗೆ ತಮ್ಮದೇ ಆದ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷ ಅಧಿಕಾರದಲ್ಲಿ ಇರುವ ಕಾರಣ ಎರಡು ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದೆ, ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಲಾ ಒಂದು ಕ್ಷೇತ್ರದಲ್ಲಿ ಮುನ್ನ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾರಣ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಜನರ ಒಲವು ಮತ್ತೊಮ್ಮೆ ತಮ್ಮ ಪಕ್ಷದ ಕಡೆಯಿದೆ ಎಂಬುದನ್ನು ತೋರಿಸಿ ಬಿಜೆಪಿ ಪಕ್ಷಕ್ಕೆ ಅಧಿಕಾರದಲ್ಲಿ ಇದ್ದರೂ ಕೂಡ ಜನರು ಮತ ನೀಡಿಲ್ಲ ಎಂದು ಬಿಂಬಿಸುವ ಮೂಲಕ ಮುಜುಗರಕ್ಕೆ ಉಂಟುಮಾಡಲು ತಯಾರಿ ನಡೆಸುತ್ತಿವೆ.

ಇನ್ನು ಬಿಜೆಪಿ ಪಕ್ಷವು ಕಳೆದ ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಗೆದ್ದಿದ್ದ ಕ್ಷೇತ್ರಗಳನ್ನು ಈ ಬಾರಿ ಗೆಲ್ಲುವ ಮೂಲಕ ಕಮಲ ಅರಳಿಸಿ, ರಾಜ್ಯದ ಜನತೆ ಬಿಜೆಪಿ ಪಕ್ಷದ ಪರವಾಗಿ ಇದ್ದಾರೆ ಎಂಬುದನ್ನು ತೋರಿಸುವ ಮೂಲಕ ಸಂಖ್ಯಾಬಲವನ್ನು ಬಲಿಷ್ಠ ಮಾಡಿಕೊಳ್ಳಲು ತಯಾರಿ ನಡೆಸಿದೆ. ಇನ್ನೂ ರಾಜರಾಜೇಶ್ವರಿ ನಗರದಲ್ಲಿ ಎಲ್ಲಿ ನೋಡಿದರೂ ಮುನಿರತ್ನ ರವರ ಹೆಸರು ಕೇಳಿ ಬರುತ್ತಿರುವ ಕಾರಣ ಬಹುತೇಕ ಗೆಲುವು ಖಚಿತವಾದಂತೆ ಕಾಣುತ್ತಿದೆ. ಅದರಂತೆ ಶಿರಾ ಕ್ಷೇತ್ರದ ಕುರಿತು ಗಮನಹರಿಸುವುದಾದರೆ ಚುನಾವಣೆಗೂ ಮುನ್ನ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಪೈಪೋಟಿ ಇರಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಯಾಕೆಂದರೆ ಮೊದಲಿನಿಂದಲೂ ಬಿಜೆಪಿ ಪಕ್ಷ ಶಿರಾ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಆದರೆ ಚುನಾವಣೆ ಘೋಷಣೆಯಾದ ದಿನದಿಂದಲೇ ಬಿಜೆಪಿ ಪಕ್ಷ ಹಲವಾರು ಕಾರ್ಯತಂತ್ರಗಳನ್ನು ರೂಪಿಸಿ ನೇರವಾಗಿ ಮುಖ್ಯಮಂತ್ರಿ ರವರ ಮಗ ವಿಜಯೇಂದ್ರ ರವರನ್ನು ಆಖಾಡಕ್ಕೆ ಇಳಿದ ಬಳಿಕ ಎಲ್ಲವೂ ಬದಲಾಗಿದೆ.

ಯುವಕರನ್ನು ತನ್ನತ್ತ ಸೆಳೆಯುತ್ತಿರುವ ವಿಜಯೇಂದ್ರ ರವರು ಶಿರಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಮೇಲೆ ಹಲವಾರು ಯುವ ಮುಖಂಡರು ಹಾಗೂ ಯುವ ಕಾರ್ಯಕರ್ತರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಇನ್ನು ಜೋಡೆತ್ತು ಜೋಡೆತ್ತು ಎಂದುಕೊಂಡು ಕುಮಾರಸ್ವಾಮಿರವರ ಜೊತೆ ಉತ್ತಮ ಸ್ನೇಹ ಸಂಬಂಧವನ್ನು ಕಾಪಾಡಿಕೊಂಡಿದ್ದ ಡಿಕೆ ಶಿವಕುಮಾರ್ ರವರು ಜೆಡಿಎಸ್ ಪಕ್ಷದ ಹಲವಾರು ನಾಯಕರನ್ನು ಸೆಳೆದಿದ್ದು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ, ಈತನ್ಮಧ್ಯೆ ಹಲವಾರು ಜೆಡಿಎಸ್ ನಾಯಕರು ಹಾಗೂ ಸಿದ್ದರಾಮಯ್ಯರವರ ಪುತ್ರ ಯತೀಂದ್ರ ರವರ ಆಪ್ತ ಸ್ನೇಹಿತ ಬಿಜೆಪಿ ಪಕ್ಷ ಸೇರಿಕೊಂಡು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಡಿಕೆ ಶಿವಕುಮಾರ್ ಅವರ ನಾಯಕತ್ವವನ್ನು ಪ್ರಶ್ನಿಸಲು ಸಿದ್ದರಾಮಯ್ಯ ಅವರು ತಮ್ಮ ಆಪ್ತರನ್ನು ಬಿಜೆಪಿಗೆ ಕಳುಹಿಸಿ ಗೆಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವ ಕಾರಣ ಇದೀಗ ಶಿರಾ ಕ್ಷೇತ್ರದಲ್ಲಿಯೂ ಕಮಲ ಅರಳುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಒಂದು ಕಡೆ ವಿಜಯೆಂದ್ರ ಮತ್ತೊಂದು ಕಡೆ ಸಿದ್ದರಾಮಯ್ಯರವರ ರಾಜಕೀಯ ಎರಡು ಸೇರಿದರೇ ಬಿಜೆಪಿ ಪಕ್ಷಕ್ಕೆ ಗೆಲುವು ಕಷ್ಟವೇನಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಅದೇ ನಡೆದಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಪಕ್ಷ ಶಿರಾ ಕ್ಷೇತ್ರದಲ್ಲಿ ಗೆಲುವು ಕಂಡರೂ ಅಚ್ಚರಿಪಡಬೇಕಾಗಿಲ್ಲ.

Comments are closed.