ಕೋಮರಂ ಭೀಮ್ ಪಾತ್ರದ ಬಗ್ಗೆ ರಾಜಮೌಳಿ ಸೃಷ್ಟಿಸಿದ ವಿವಾದ ಹಾಗೂ ಅಸಲಿ ಸತ್ಯವೇನು ಗೊತ್ತೇ? ನೆಟ್ಟಿಗರು ಫುಲ್ ಗರಂ

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸಿನಿಮಾಗಳಲ್ಲಿ ವಾಸ್ತವತೆಯನ್ನು ಎಂದಿಗೂ ತೋರಿಸುವುದಿಲ್ಲ. ಇದು ಎಲ್ಲರಿಗೂ ತಿಳಿದಿರುವ ಸತ್ಯ ಆದರೆ ಇತಿಹಾಸದ ಕಥೆಗಳನ್ನು ತೆಗೆದುಕೊಳ್ಳುವಾಗ ವಾಸ್ತವತೆಯನ್ನು ತೋರಿಸುವುದು ಬಹಳ ಮುಖ್ಯವಾಗುತ್ತದೆ. ಕಮರ್ಷಿಯಲ್ ಸಿನಿಮಾಗಳಲ್ಲಿ ತಮ್ಮದೇ ಆದ ಕತೆಯನ್ನು ನಿರ್ಮಾಣ ಮಾಡಿದರೆ ಖಂಡಿತ ಅದರಲ್ಲಿ ವಾಸ್ತವತೆಯನ್ನು ತೋರಿಸುವ ಅಗತ್ಯವಿರುವುದಿಲ್ಲ. ಯಾಕೆಂದರೆ ಆ ಸಿನಿಮಾವನ್ನು ಜನರು ಸಿನಿಮಾದಂತೆ ನೋಡಿ ಮನರಂಜನೆಗೆ ಮಾತ್ರ ಸೀಮಿತ ಎಂದು ಅರ್ಥಮಾಡಿಕೊಳ್ಳುತ್ತಾರೆ. ಆದರೆ ನೀವು ಐತಿಹಾಸಿಕ ಕಥೆಗಳನ್ನು ಸಿನಿಮಾ ಮಾಡುವ ಸಂದರ್ಭದಲ್ಲಿ ಖಂಡಿತ ನೀವು ವಾಸ್ತವತೆಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಕಮರ್ಷಿಯಲ್ ಟಚ್ ನೀಡಿ ಸಿನಿಮಾ ನಿರ್ಮಾಣ ಮಾಡಬೇಕಾಗುತ್ತದೆ.

ಕೇವಲ ಅವರವರ ಲಾಭಕ್ಕಾಗಿ ಇತಿಹಾಸಗಳನ್ನು ತಿರುಚುವುದು ಜನರಿಗೆ ಇಷ್ಟವಾಗುವುದಿಲ್ಲ, ಕೆಲವರು ನಿಮ್ಮ ಮೇಲಿನ ಅಭಿಮಾನದಿಂದ ಸಿನಿಮಾ ನೋಡಬಹುದೇ ಹೊರತು ಅವರ ಮನಸ್ಸಿನಲ್ಲಿಯೂ ಕೂಡ ಇತಿಹಾಸದಲ್ಲಿ ಹೀಗೆ ನಡೆದಿಲ್ಲ ಎಂಬುದು ಮನದಟ್ಟಾಗಿರುತ್ತದೆ. ಆದ ಕಾರಣದಿಂದ ಐತಿಹಾಸಿಕ ಕಥೆಗಳನ್ನು ನಿರ್ಮಾಣ ಮಾಡುವಾಗ ಖಂಡಿತ ನೀವು ವಾಸ್ತವತೆಯನ್ನು ತೋರಿಸಲೇ ಬೇಕು.

ಇದೀಗ ಇದೇ ರೀತಿಯ ಪ್ರಯತ್ನವೊಂದಕ್ಕೆ ಇಡೀ ದೇಶದ ಎಲ್ಲೆಡೆ ಉತ್ತಮ ನಿರ್ದೇಶಕ ಎಂದು ಮನೆಮಾತಾಗಿರುವ ರಾಜಮೌಳಿ ರವರು ಕೈ ಹಾಕಿದ್ದಾರೆ. ಆದರೆ ಇದು ಧರ್ಮದ ವಿಚಾರ ಹೊಂದಿರುವ ಕಾರಣ ಖಂಡಿತ ಇದು ದೊಡ್ಡಮಟ್ಟದಲ್ಲಿ ಸದ್ದು ಮಾಡುವುದು ಖಚಿತ, ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ರಾಜಮೌಳಿಯವರು ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ರವರ ಕಥೆಗಳನ್ನು ತೆಗೆದುಕೊಂಡು ಕಮರ್ಷಿಯಲ್ ಟಚ್ ನೀಡಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದು ಒಂದು ಒಳ್ಳೆಯ ವಿಚಾರವಾದರೂ ಕೂಡ ರಾಜಮೌಳಿಯವರು ತಮ್ಮ ಸಿನಿಮಾದಲ್ಲಿ ಐತಿಹಾಸಿಕ ಸತ್ಯವನ್ನು ತಿರುಚಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಇತ್ತೀಚೆಗೆ ಬಿಡುಗಡೆಯಾದ ಟೀಸರ್ ನಲ್ಲಿ ಕೋಮರಂ ಭೀಮ್ ಪಾತ್ರವನ್ನು ಪರಿಚಯಿಸುವ ಸಂದರ್ಭದಲ್ಲಿ ಕೋಮರಂ ಭೀಮ್ ಅವರ ಪಾತ್ರಕ್ಕೆ ಜೀವ ತುಂಬಿರುವ ಎನ್ಟಿಆರ್ ಅವರು ಮುಸ್ಲಿಂ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ, ಕೋಮರಂ ಭೀಮ್ ಅವರನ್ನು ಮುಸ್ಲಿಂ ಸಮುದಾಯದವರು ಎಂದು ತೋರಿಸಲು ಚಿತ್ರೀಕರಣ ನಡೆಸಲಾಗಿದೆ. ಈ ಮೂಲಕ ಇತಿಹಾಸವನ್ನು ತಿರುಚು ಗೋಂಡಿ ಬುಡಕಟ್ಟು ಸಮುದಾಯದಲ್ಲಿ ಜನಿಸಿ ತಮ್ಮ ಜೀವನಪೂರ್ತಿ ಹೈದರಾಬಾದಿನ ನಿಜಾಮರ ಮತ್ತು ರಜಾಕರ ವಿರುದ್ಧ ಸ್ವತಂತ್ರಕ್ಕಾಗಿ ಹೋ’ರಾಟ ಮಾಡಿದರು. ಇಡೀ ತಮ್ಮ ಜೀವನವನ್ನು ಬುಡಕಟ್ಟು ಜನರ ಏಳಿಗೆಗಾಗಿ ಮುಡಿಪಾಗಿಟ್ಟು ಬುಡಕಟ್ಟು ಜನಾಂಗದ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು.

ಆದರೆ ರಾಜಮೌಳಿ ರವರು ಸಿನಿಮಾದಲ್ಲಿ ಕೋಮರಂ ಭೀಮ್ ಪಾತ್ರಧಾರಿಯಾದ ಎನ್ಟಿಆರ್ ಅವರನ್ನು ಮುಸ್ಲಿಂ ವೇಷದಾರಿಯಾಗಿ ತೋರಿಸಿದ್ದಾರೆ. ಇದರಿಂದ ಇದೀಗ ರಾಜಮೌಳಿ ರವರ ಮೇಲೆ ಕಾಂಟ್ರವರ್ಸಿ ಮಾತುಗಳು ಕೇಳಿಬಂದಿದ್ದು, ರಾಜಮೌಳಿ ರವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಕೋಮರಂ ಭೀಮ್ ರವರ ಮುಂದಿನ ಪೀಳಿಗೆಯನ್ನು ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಬದಲಾಯಿಸಲಾಗಿತ್ತು, ಆದ ಕಾರಣದಿಂದ ಬಹುಶಹ ರಾಜಮೌಳಿ ರವರು ಈ ಕಾರ್ಯಕ್ಕೆ ಕೈ ಹಾಕಿರಬಹುದು ಎಂಬ ಮಾತುಗಳು ಕೇಳಿಬಂದಿವೆ. ಆದರೆ ಇತಿಹಾಸದ ಪ್ರಕಾರ ಕೋಮರಂ ಭೀಮ್ ರವರು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಮುಂದಿನ ಜನಾಂಗದವರನ್ನು ನೋಡಿ ರಾಜಮೌಳಿ ರವರು ನಿರ್ಧಾರ ತೆಗೆದುಕೊಳ್ಳುವುದು ಸರಿಯಿಲ್ಲ ಎಂದಿದ್ದಾರೆ.

Comments are closed.