ಮಹಾನಾಯಕ ಧಾರವಾಹಿ ವಿಚಾರವಾಗಿ ಕೊಟ್ಟ ಮಾತು ಉಳಿಸಿಕೊಂಡ ಪ್ರೇಕ್ಷಕರು ! ಹೇಗೆ ಗೊತ್ತಾ?

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಹಾನಾಯಕ ಧಾರವಾಹಿಯನ್ನು ನಿಲ್ಲಿಸುವಂತೆ ಹಲವಾರು ಕರೆಗಳು ಬಂದಿದ್ದವು. ಮಾಧ್ಯಮ ಲೋಕದಲ್ಲಿ ಈಗಾಗಲೇ ಮಹಾ ನಾಯಕ ಧಾರವಾಹಿ ಅತ್ಯುತ್ತಮ ಸಾಧನೆ ಮಾಡುತ್ತಿದೆ. ಮಹಾ ನಾಯಕ ಧಾರವಾಹಿಯನ್ನು ನಿಲ್ಲಿಸಿ ಎಂದು ಹಲವಾರು ಮೆಸೇಜ್ ಗಳು ಹಾಗೂ ಕರೆಗಳು ಬರುತ್ತಿರುವ ಸಂದರ್ಭದಲ್ಲಿ ಅಭಿಮಾನಿಗಳು ನೀವು ಮಹಾ ನಾಯಕ ಧಾರಾವಾಹಿಯನ್ನು ಪ್ರಸಾರ ಮಾಡಿ ಖಂಡಿತ ನಿಮ್ಮ ಜೊತೆ ಇದ್ದಾರೆ ಎಂದು ನೆಟ್ಟಿಗರು ಭರವಸೆ ನೀಡಿದರು.

ಅದೇ ಕಾರಣಕ್ಕಾಗಿ ಮಹಾನಾಯಕ ಧಾರವಾಹಿಯನ್ನು ಪ್ರಸಾರ ಮಾಡುವುದನ್ನು ಮುಂದುವರಿಸಲಾಯಿತು, ಮುಂದುವರಿಸಿದ ಕೆಲವೇ ಕೆಲವು ದಿನಗಳಲ್ಲಿ ಮಹಾನಾಯಕ ಒಂದು ಡಬ್ಬಿಂಗ್ ಧಾರವಾಹಿ ಆದರೂ ಕೂಡ ಟಿಆರ್ಪಿ ನಲ್ಲಿ ಉತ್ತಮ ಸಾಧನೆ ಮಾಡಿದೆ. ಇದೀಗ ಬಿಡುಗಡೆಯಾಗಿರುವ ಟಿಆರ್ಪಿ ಗಳ ಪ್ರಕಾರ ಇಷ್ಟು ದಿವಸ ನಾಲ್ಕನೇ ಸ್ಥಾನದಲ್ಲಿದ್ದ ನಾಗಿಣಿ 2 ಧಾರಾವಾಹಿ ಇದೀಗ 5ನೇ ಸ್ಥಾನಕ್ಕೆ ತ’ಳ್ಳಲ್ಪಟ್ಟಿದೆ. ಇನ್ನುಳಿದಂತೆ ಇಷ್ಟು ದಿವಸ 5ನೇ ಸ್ಥಾನದಲ್ಲಿದ್ದ ಸ್ಟಾರ್ ಸುವರ್ಣ ವಾಹಿನಿಯ ಮುದ್ದುಲಕ್ಷ್ಮಿ ಧಾರವಾಹಿ ಇದೀಗ ಆರನೇ ಸ್ಥಾನ ಪಡೆದುಕೊಂಡಿದೆ.

ಈ ಟಾಪ್-5 ಧಾರವಾಹಿಗಳ ಸಾಲಿಗೆ ಇದೀಗ ಹೊಸದಾಗಿ ಮಹಾನಾಯಕ ಧಾರವಾಹಿ ಎಂಟ್ರಿಕೊಟ್ಟಿದ್ದು ನಾಲ್ಕನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದಂತೆ ಗಟ್ಟಿಮೇಳ ಧಾರಾವಾಹಿ ಮೊದಲನೇ ಸ್ಥಾನ ಪಡೆದುಕೊಂಡಿದ್ದು ಎರಡನೇ ಸ್ಥಾನವನ್ನು ಜೀ ಕನ್ನಡದ ಮತ್ತೊಂದು ಧಾರವಾಹಿ ಜೊತೆ ಜೊತೆಯಲಿ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ಮಂಗಳಗೌರಿ ಮದುವೆ ಹಾಗೂ ಪಾರು ಧಾರವಾಹಿ ಗಳು ಸ್ಥಾನ ಪಡೆದುಕೊಂಡಿದ್ದು ನಾಲ್ಕನೇ ಸ್ಥಾನವನ್ನು ಮಹಾನಾಯಕ ಧಾರಾವಾಹಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Comments are closed.