ಸುಶ್ಮಿತ್ ಸೆನ್ ರವರಿಗೆ ಅದೊಂದು ಸಹಾಯ ಮಾಡಿ ಹತ್ತಿರವಾಗಿದ್ದರೇ ಲಲಿತ್ ಮೋದಿ?? ಇದೆ ಕಾರಣಕ್ಕೇನಾ ಹತ್ತಿರವಾಗಿದ್ದು??

ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ಯಾವ ಸುದ್ದಿವಾಹಿನಿಗಳಲ್ಲಿ ನೋಡಿದರೂ ಕೂಡ ಭುವನ ಸುಂದರಿ ಸುಶ್ಮಿತಾ ಸೇನ್ ಹಾಗೂ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ರವರ ಪ್ರೇಮಪ್ರಕರಣದ ಸುದ್ದಿಗಳು ಹರಿದಾಡುತ್ತಿವೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಸದ್ಯದ ಮಟ್ಟಿಗೆ ದೇಶದ ಟ್ರೆಂಡಿಂಗ್ ಟಾಪಿಕ್ ಹಾಗೆ ಇಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ‌.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಸಂಸ್ಥೆಯಾಗಿರುವ ಐಪಿಎಲ್ ಅನ್ನು ಪ್ರಾರಂಭಿಸಿ ಬಿಸಿಸಿಐ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಆದಾಯವನ್ನು ಪಡೆದು ವಿಶ್ವದ ನಂಬರ್ ವನ್ ಶ್ರೀಮಂತ ಕ್ರಿಕೆಟ್ ಸಂಸ್ಥೆ ಆಗುವಂತೆ ಮಾಡಿದ್ದೆ ಲಲಿತ್ ಮೋದಿ ಎಂದರೆ ತಪ್ಪಾಗಲಾರದು. ನಂತರ ಕೆಲವೊಂದು ಹಗರಣಗಳ ಕಾರಣದಿಂದಾಗಿ ಅವರು ಭಾರತ ದೇಶವನ್ನು ಬಿಟ್ಟು ಲಂಡನ್ನಲ್ಲಿ ನೆಲೆಸುವಂತಾಯಿತು. ಇನ್ನು ಸದ್ಯ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಗಳಲ್ಲಿ ಸುಶ್ಮಿತಾ ಸೇನ್ ರವರ ಜೊತೆಗೆ ಪ್ರೇಮ ಸಂಬಂಧವನ್ನು ಹೊಂದಿದ್ದೇನೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಇಬ್ಬರು ಅತಿಶೀಘ್ರದಲ್ಲಿ ಮದುವೆ ಕೂಡ ಆದರೂ ಆಗಬಹುದು ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುವ ಹಾಗೆ ಮಾಡಿದ್ದಾರೆ.

sush 1 | ಸುಶ್ಮಿತ್ ಸೆನ್ ರವರಿಗೆ ಅದೊಂದು ಸಹಾಯ ಮಾಡಿ ಹತ್ತಿರವಾಗಿದ್ದರೇ ಲಲಿತ್ ಮೋದಿ?? ಇದೆ ಕಾರಣಕ್ಕೇನಾ ಹತ್ತಿರವಾಗಿದ್ದು??
ಸುಶ್ಮಿತ್ ಸೆನ್ ರವರಿಗೆ ಅದೊಂದು ಸಹಾಯ ಮಾಡಿ ಹತ್ತಿರವಾಗಿದ್ದರೇ ಲಲಿತ್ ಮೋದಿ?? ಇದೆ ಕಾರಣಕ್ಕೇನಾ ಹತ್ತಿರವಾಗಿದ್ದು?? 2

ಇನ್ನು ಇವರಿಬ್ಬರು ಹೇಗೆ ಪರಸ್ಪರ ಇಷ್ಟೊಂದು ಹತ್ತಿರವಾಗಲು ಸಾಧ್ಯ ಎಂಬ ಪ್ರಶ್ನೆಗೆ ಈಗ ಒಂದು ಉತ್ತರ ದೊರಕಿದೆ. 2011 ರ ಸಂದರ್ಭದಲ್ಲಿ ಸುಶ್ಮಿತಾ ಸೇನ್ ರವರ ಟ್ವಿಟರ್ ಅಕೌಂಟ್ ಅನ್ನು ವೇರಿಫೈ ಮಾಡಿ ಬ್ಲೂ ಟಿಕ್ ಬರುವಂತೆ ಮಾಡಲು ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ರವರಿಗೆ ಸಹಾಯಮಾಡಿದ್ದರು ಎಂಬುದಾಗಿ ಟ್ವಿಟರ್ ನ ಕೆಲವೊಂದು ಸಂಭಾಷಣೆಗಳ ಸ್ಕ್ರೀನ್ಶಾಟ್ ಮೂಲಕ ತಿಳಿದು ಬಂದಿದೆ. ಹೀಗಾಗಿ ಇವರಿಬ್ಬರ ನಡುವೆ ಸ್ನೇಹ ಸಂಬಂಧ ಎನ್ನುವುದು ಅಂದಿನ ದಿನಗಳಿಂದಲೇ ಬೆಳೆದು ಬಂದು ಇಂದು ಅಧಿಕೃತವಾಗಿ ಹತ್ತಿರವಾಗಿದ್ದಾರೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರ ಡೇಟಿಂಗ್ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.