ನಿನ್ನೆ ಹೇಳಿದ್ದು ಒಂದು ಇಂದು ಮತ್ತೊಂದು, ಕೊಹ್ಲಿ ಫಾರ್ಮ್ ಬಗ್ಗೆ ನಾಯಕ ರೋಹಿತ್ ಕೊಹ್ಲಿ ಬಗ್ಗೆ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೋಹಿತ್ ಶರ್ಮಾ ರವರು ಈ ಮೊದಲೇ ಪ್ರೆಸ್ ಕಾನ್ಫರೆನ್ಸ್ ನಲ್ಲಿ ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಕುರಿತಂತೆ ಪ್ರಶ್ನೆಗಳು ಎದ್ದಾಗ ವಿರಾಟ್ ಕೊಹ್ಲಿ ರವರ ಪರವಾಗಿ ಎಲ್ಲಾ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರವನ್ನು ನೀಡುವ ಮೂಲಕ ನಾಯಕನ ಸ್ಥಾನವನ್ನು ಅರ್ಥಪೂರ್ಣವಾಗಿ ಮೆರೆದಿದ್ದರು.

ವಿರಾಟ್ ಕೊಹ್ಲಿ ಅವರ ಕುರಿತಂತೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುವ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಎರಡನೇ ಏಕದಿನ ಪಂದ್ಯದಲ್ಲಿ ಕೂಡಾ ವಿರಾಟ್ ಕೊಹ್ಲಿ ರವರು ಕೇವಲ 16 ರನ್ನುಗಳಿಗೆ ಔಟ್ ಆಗುವ ಮೂಲಕ ಮತ್ತೊಮ್ಮೆ ದೊಡ್ಡಮಟ್ಟದ ನಿರಾಸೆಯನ್ನು ಮೂಡಿಸಿದ್ದರು. ಪಂದ್ಯ ಸೋತ ಬಳಿಕ ರೋಹಿತ್ ಶರ್ಮಾ ರವರಿಗೆ ಮತ್ತೆ ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಕುರಿತಂತೆ ಪ್ರಶ್ನೆಗಳು ಮೂಡಿಬಂದವು. ಪಂದ್ಯ ಸೋತ ನಿರಾಶೆಯಲ್ಲಿ ಇದ್ದರೂ ಕೂಡ ರೋಹಿತ್ ಶರ್ಮಾ ರವರು ವಿರಾಟ್ ಕೊಹ್ಲಿ ಅವರ ಪರವಾಗಿ ನಿಲ್ಲುವುದನ್ನು ಮಾತ್ರ ಬಿಡಲಿಲ್ಲ ಎಂಬುದು ಈ ಉತ್ತರದ ಮೂಲಕ ತಿಳಿದುಬರುತ್ತದೆ. ಮೀಡಿಯಾ ಪ್ರಶ್ನೆಗೆ ಉತ್ತರಿಸುತ್ತ ರೋಹಿತ್ ಶರ್ಮಾ ರವರು ಈಗಾಗಲೇ ವಿರಾಟ್ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಸಾಕಷ್ಟು ಪಂದ್ಯಗಳನ್ನು ಆಡಿ ಗೆಲ್ಲಿಸಿ ಕೊಟ್ಟಿದ್ದಾರೆ.

vk rohit 3 | ನಿನ್ನೆ ಹೇಳಿದ್ದು ಒಂದು ಇಂದು ಮತ್ತೊಂದು, ಕೊಹ್ಲಿ ಫಾರ್ಮ್ ಬಗ್ಗೆ ನಾಯಕ ರೋಹಿತ್ ಕೊಹ್ಲಿ ಬಗ್ಗೆ ಹೇಳಿದ್ದೇನು ಗೊತ್ತೇ?
ನಿನ್ನೆ ಹೇಳಿದ್ದು ಒಂದು ಇಂದು ಮತ್ತೊಂದು, ಕೊಹ್ಲಿ ಫಾರ್ಮ್ ಬಗ್ಗೆ ನಾಯಕ ರೋಹಿತ್ ಕೊಹ್ಲಿ ಬಗ್ಗೆ ಹೇಳಿದ್ದೇನು ಗೊತ್ತೇ? 2

ಈಗಲೂ ಕೂಡ 50ರ ಆವರೇಜ್ ಅನ್ನು ನಿರ್ವಹಿಸುತ್ತ ಬಂದಿದ್ದಾರೆ. ಅವರು ಎಂತಹ ಮಹಾನ್ ಕ್ರಿಕೆಟಿಗ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಬೇಕಾದ ಅಗತ್ಯವಿಲ್ಲ. ಅವರಿಗೆ ಮತ್ತೆ ಲಯಕ್ಕೆ ಮರಳಿಲ್ಲ ಒಂದೆರಡು ಇನ್ನಿಂಗ್ಸ್ ಗಳು ಮಾತ್ರ ಸಾಕು ಎಂಬುದಾಗಿ ರೋಹಿತ್ ಶರ್ಮಾ ಹೇಳಿದ್ದಾರೆ. ಕೊಹ್ಲಿ ಅವರ ಫಾರ್ಮ್ ಕುರಿತಂತೆ ಇಷ್ಟೊಂದು ದೊಡ್ಡ ಮಟ್ಟದ ಚರ್ಚೆಗಳು ಯಾಕೆ ನಡೆಯುತ್ತಿದೆ ಎಂಬುದಾಗಿ ನನಗೆ ತಿಳಿದಿಲ್ಲ ಅವರಿಗೆ ತಾನೊಬ್ಬ ಅದ್ಭುತ ಆಟಗಾರ ಎಂಬುದನ್ನು ಸಾಬೀತು ಪಡಿಸಬೇಕಾದ ಅವಶ್ಯಕತೆಯಲ್ಲಿ ಅದನ್ನು ಈಗಾಗಲೇ ಅವರು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.

Comments are closed.