ವಿಶ್ವಕಪ್ ನಲ್ಲಿ ಸುರಿಯುತ್ತಿದೆ ಹಣದ ಮಳೆ: ಫೈನಲ್ ಅಷ್ಟೇ ಅಲ್ಲ, ಸೆಮಿ ಫೈನಲ್ ತಲುಪಿದರೆ ಸಿಗುವ ಹಣವೆಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೆ ಈ ಬಾರಿಯ t20 ವಿಶ್ವಕಪ್ ಇದೇ ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದ ನೆಲದಲ್ಲಿ ನಡೆಯಲಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ವಿಶ್ವ ಕಪ್ ನ ಮೊದಲ ಹಂತದ ಪಂದ್ಯಗಳು ಇದೇ 16 ರಿಂದ ಪ್ರಾರಂಭವಾಗಲಿದೆ. ಇನ್ನು ಈ ಬಾರಿ ವಿಶ್ವಕಪ್ ಗೆಲ್ಲಲೇ ಬೇಕು ಎನ್ನುವ ಕಾರಣಕ್ಕಾಗಿ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಕೂಡ ಸಾಕಷ್ಟು ತಯಾರಿಗಳನ್ನು ನಡೆಸಿಕೊಂಡಿದೆ. ಟೂರ್ನಮೆಂಟ್ ಮುನ್ನವೇ ಹಲವಾರು ಪ್ರಮುಖ ಆಟಗಾರರ ಇಂಜುರಿಯಿಂದಾಗಿ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಚಿಂತೆಗೆ ಒಳಗಾಗಿದೆ.

ಹೀಗಿದ್ದರೂ ಕೂಡ ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿ ಗೆದ್ದಿದ್ದು ಈಗಾಗಲೇ ಸೌತ್ ಆಫ್ರಿಕಾ ತಂಡದ ವಿರುದ್ಧವೂ ಕೂಡ ಅಧಿಕಾರಯುತವಾಗಿ ಪಂದ್ಯಗಳನ್ನು ಗೆಲ್ಲುತ್ತಿದೆ. ಇನ್ನು ಈ ಬಾರಿಯ t20 ವಿಶ್ವಕಪ್ ಗೆ ನಗದು ಬಹುಮಾನವನ್ನು ಕೂಡ ಈಗಾಗಲೇ ಅಧಿಕೃತವಾಗಿ ಘೋಷಿಸಲಾಗಿದೆ. ವಿಜೇತ ತಂಡಕ್ಕೆ 13 ಕೋಟಿ ರೂಪಾಯಿ ನಗದು ಬಹುಮಾನ ಸಿಗಲಿದೆ. ಇನ್ನು ಎರಡನೇ ಸ್ಥಾನವನ್ನು ಪಡೆಯುವ ಅಂದರೆ ರನ್ನರ್ ಅಪ್ ತಂಡಕ್ಕೆ 6.52 ಕೋಟಿ ಸಿಗಲಿದೆ.

t20 wordlcup 2022 | ವಿಶ್ವಕಪ್ ನಲ್ಲಿ ಸುರಿಯುತ್ತಿದೆ ಹಣದ ಮಳೆ: ಫೈನಲ್ ಅಷ್ಟೇ ಅಲ್ಲ, ಸೆಮಿ ಫೈನಲ್ ತಲುಪಿದರೆ ಸಿಗುವ ಹಣವೆಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??
ವಿಶ್ವಕಪ್ ನಲ್ಲಿ ಸುರಿಯುತ್ತಿದೆ ಹಣದ ಮಳೆ: ಫೈನಲ್ ಅಷ್ಟೇ ಅಲ್ಲ, ಸೆಮಿ ಫೈನಲ್ ತಲುಪಿದರೆ ಸಿಗುವ ಹಣವೆಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?? 2

ಕೇವಲ ಫೈನಲ್ ತಲುಪಿದ ತಂಡಗಳಿಗೆ ಮಾತ್ರವಲ್ಲದೆ ಸೆಮಿಫೈನಲ್ ಹಂತವನ್ನು ತಲುಪುವ 2 ತಂಡಗಳಿಗೆ ಕೂಡ ನಗದು ಬಹುಮಾನ ಸಿಗಲಿದೆ ಎಂಬುದಾಗಿ ತಿಳಿದು ಬಂದಿದೆ. ಸೆಮಿ ಫೈನಲ್ ತಲುಪುವ 2 ತಂಡಗಳಿಗೆ ಕೂಡ ತಲಾ 3.26 ಕೋಟಿ ರೂಪಾಯಿ ನಗದು ಬಹುಮಾನ ಸಿಗಲಿದೆ ಎಂಬುದಾಗಿ ಐಸಿಸಿ ಅಧಿಕೃತವಾಗಿ ಘೋಷಿಸಿದೆ. ಕೇವಲ ಇಷ್ಟು ಮಾತ್ರವಲ್ಲದೆ ಸೂಪರ್ 12 ಹಂತವನ್ನು ತಲುಪುವ ಎಲ್ಲಾ ತಂಡಗಳಿಗೂ ಕೂಡ ತಳ 57 ಲಕ್ಷ ಬಹುಮಾನ ಸಿಗಲಿದೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆಯಾಗಿ ಈ ಬಾರಿಯ t20 ವಿಶ್ವಕಪ್ ಎನ್ನುವುದು ಹಣದ ವಿಚಾರದಲ್ಲಿಯೂ ಕೂಡ ಸಾಕಷ್ಟು ಶ್ರೀಮಂತವಾಗಿದೆ ಎಂದು ಹೇಳಬಹುದಾಗಿದೆ.

Comments are closed.