ನೀವು ದಿನನಿತ್ಯ ಬಳಸುವ ಟೂತ್ ಪೇಸ್ಟ್ ನಲ್ಲಿ ಇರುವ ಈ ವಿವಿಧ ಬಣ್ಣಗಳ ಅರ್ಥವೇನು ಗೊತ್ತೇ?? ಇವನ್ನು ತಿಳಿಯದೆ ಬಳಸಬೇಡಿ

ನಮಸ್ಕಾರ ಸ್ನೇಹಿತರೇ, ಮಾರುಕಟ್ಟೆಯಲ್ಲಿ, ತರಾವರಿ ಟೂತ್ಪೇಸ್ಟ್ ಗಳು ಲಭ್ಯವಿವೆ. ಜನರ ಬೇಡಿಕೆಗೆ ತಕ್ಕಂತೆ ಬೇರೆ ಬೇರೆ ವಸ್ತುಗಳನ್ನು ಹಾಕಿ ಕೆಲವಕ್ಕೆ ಉಪ್ಪು, ಕೆಲವು ಲವಂಗ ಹೀಗೆ ಬೇರೆ ಬೇರೆ ರೀತಿಯ ಟೂತ್ಪೇಸ್ಟ್ ಗಳು ಸಿಗುತ್ತವೆ. ಇದರ ಟೂತ್ ಪೇಸ್ಟ್ ನ ಕವರ್ ಮೇಲೆ ಕೆಲವು ಬಣ್ಣಗಳಲ್ಲಿ ಗೋಲಾಕಾರದ ಚಿಹ್ನೆಗಳನ್ನು ಕಾಣಬಹುದು. ಈ ಬಣ್ಣಗಳು ಏನನ್ನು ಸೂಚಿಸುತ್ತವೆ, ಯಾವ ಕಾರಣಕ್ಖಾಗಿ ಈ ಬಣ್ಣಗಳನ್ನು ನಮೂದಿಸಿರುತ್ತಾರೆ ನಿಮಗೆ ಗೊತ್ತೇ? ಇದನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

ಟೋತ್ ಪೇಸ್ಟ್ ಮೇಲೆ ಕಪ್ಪು, ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳನ್ನು ಕಾಣಬಹುದು. ಬನ್ನಿ ಅವುಗಳ ಅರ್ಥವನ್ನು ನೋಡೋಣ. ಮೊದಲಿಗೆ, ಟೂತ್ಪೇಸ್ಟ್ನ ಟ್ಯೂಬ್ನಲ್ಲಿ ಮಾಡಿದ ಕೆಂಪು ಬಣ್ಣದ ಡಾಟ್/ ಬ್ಲಾಕ್. ನೈಸರ್ಗಿಕ ಮತ್ತು ರಾಸಾಯನಿಕ ಎರಡೂ ವಸ್ತುಗಳನ್ನು ಬೆರೆಸಿ ಈ ಟೂತ್ ಪೇಸ್ಟ್ ತಯಾರಿಸಲಾಗಿದೆ ಎಂದು ಅರ್ಥ.

tooth paste colors | ನೀವು ದಿನನಿತ್ಯ ಬಳಸುವ ಟೂತ್ ಪೇಸ್ಟ್ ನಲ್ಲಿ ಇರುವ ಈ ವಿವಿಧ ಬಣ್ಣಗಳ ಅರ್ಥವೇನು ಗೊತ್ತೇ?? ಇವನ್ನು ತಿಳಿಯದೆ ಬಳಸಬೇಡಿ
ನೀವು ದಿನನಿತ್ಯ ಬಳಸುವ ಟೂತ್ ಪೇಸ್ಟ್ ನಲ್ಲಿ ಇರುವ ಈ ವಿವಿಧ ಬಣ್ಣಗಳ ಅರ್ಥವೇನು ಗೊತ್ತೇ?? ಇವನ್ನು ತಿಳಿಯದೆ ಬಳಸಬೇಡಿ 2

ಇನ್ನು ಟೂತ್‌ಪೇಸ್ಟ್ ಟ್ಯೂಬ್‌ನಲ್ಲಿ ಹಸಿರು ಬಣ್ಣದ ಗುರುತು ಇದ್ದರೆ, ಅದು ನೈಸರ್ಗಿಕ ಪದಾರ್ಥಗಳಿಂದ ಮಾತ್ರ ತಯಾರಿಸಲ್ಪಟ್ಟಿದೆ ಎಂಬುದನ್ನು ಸೂಚಿಸುತ್ತದೆ. ನೀವು ರಾಸಾಯನಿಕ ವಸ್ತುಗಳನ್ನು ಇಷ್ಟಪಡದಿದ್ದರೆ, ಕೇವಲ ನೈಸರ್ಗಿಕವಾದ ಪೇಸ್ಟ್ ಬೇಕಾದರೆ ಈ ರೀತಿಯ ಚಿಹ್ನೆಯಿರುವ ಟೂತ್ಪೇಸ್ಟ್ ಬಳಸಿ.

ಹಾಗೆಯೇ ಟ್ಯೂಬ್ ಮೇಲೆ ನೀಲಿ ಗುರುತು ಇದ್ದಲ್ಲಿ ಅದು ನೈಸರ್ಗಿಕ ಪದಾರ್ಥಗಳು ಮತ್ತು ಔಷಧಿಗಳಿಂದ ತ೦ಯಾರಿಸಲ್ಪಟ್ಟಿದೆ ಎಂದು ಅರ್ಥ. ಸಾಮಾನ್ಯವಾಗಿ ಈ ಪೇಸ್ಟ್ ಅನ್ನು ವೈದ್ಯರು ಶಿಫಾರಸ್ಸಿನ ಮೇಲೆಯೇ ಬಳಸಬೇಕು.

ಕೊನೆಯದಾಗಿ ಕಪ್ಪು ಬಣ್ಣದ ಗುರುತು ಇದ್ದರೆ, ಈ ಟೂತ್ಪೇಸ್ಟ್ ರಾಸಾಯನಿಕಗಳಿಂದ ತಯಾರಿಸಲಾಗಿದ್ದು ಎಂದು ಅರ್ಥ. ಒಟಾರೆಯಾಗಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ, ವಿವಿಧ ಬಣ್ಣದ ಗುರುತು ಇರುವ ಪೇಸ್ಟ್‌ಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.

Comments are closed.