ವೈಷ್ಣವಿ ರವರ ಆಪ್ತ ಸ್ನೇಹಿತೆಯಾಗಿರುವ ಅಮೂಲ್ಯ ರವರು ಬಿಗ್ ಬಾಸ್ ನಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದು ಯಾರಿಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಎಲ್ಲಿ ನೋಡಿದರೂ ಕೂಡ ಉಳಿದಿರುವ ಐದು ಜನರಲ್ಲಿ ಯಾರು ಗೆಲುವು ಕಾಣಬಹುದು ಎಂಬುದರ ಕುರಿತು ಚರ್ಚೆ ಆರಂಭವಾಗಿದೆ. ಅದೇ ಸಮಯದಲ್ಲಿ ಹಲವಾರು ಸೆಲೆಬ್ರಿಟಿಗಳು ತಮ್ಮ ಇಷ್ಟದ ಸ್ಪರ್ಧಿಗಳನ್ನು ಗೆಲ್ಲಿಸಲು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಎಲ್ಲಾ ಯುವಕರ ಮನಗೆದ್ದಿದ್ದ ಕನ್ನಡದ ಖ್ಯಾತ ನಟಿಯರಲ್ಲಿ ಒಬ್ಬರಾದ ನಟಿ ಅಮೂಲ್ಯ ರವರು,

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಇಷ್ಟದ ಸ್ಪರ್ಧೆಯನ್ನು ಆಯ್ಕೆ ಮಾಡಿ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಹುಶಹ ನಟಿ ಅಮೂಲ್ಯ ರವರು ಚಿಕ್ಕ ವಯಸ್ಸಿನಿಂದಲೂ ಕೂಡ ವೈಷ್ಣವಿ ಗೌಡರವರ ಸ್ನೇಹಿತರಾಗಿದ್ದಾರೆ. ಹಲವಾರು ಬಾರಿ ಇಬ್ಬರು ನಟಿಯರು ಒಟ್ಟಾಗಿ ಕಾಣಿಸಿಕೊಂಡದ್ದು ನೀವು ಫೋಟೋಗಳಲ್ಲಿ ನೋಡಿರಬಹುದು. ಇನ್ನು ಇದೀಗ ವೈಷ್ಣವಿ ರವರು ಟಾಪ್ ಐದರ ಸ್ಪರ್ಧಿಗಳಾಗಿ ಆಯ್ಕೆಯಾಗಿರುವ ಕಾರಣ ಕೂಡಲೇ ನಟಿ ಅಮೂಲ್ಯ ರವರು ಸಾಮಾಜಿಕ ಜಾಲತಾಣಗಳಲ್ಲಿ,

ಪ್ರೀತಿಯ ವೈಷು ಅವರು ಬಹಳ ಭ’ಯ-ಭಕ್ತಿ ಇಂದ ಚಿಕ್ಕ ಹುಡುಗಿಯ ಸಮಯದಿಂದಲೂ ಕೂಡ ಒಬ್ಬ ಸುಂದರ ಮನುಷ್ಯಳಾಗಿ ಬೆಳೆಯುವುದನ್ನು ನಾವೆಲ್ಲರೂ ನೋಡಿದ್ದೇವೆ, ವೈಷ್ಣವಿ ರವರಂತೆ ಸತ್ಯವಾಗಿ ನಡೆದು ಕೊಳ್ಳುವುದು ಬಹಳ ಕಷ್ಟವಾದ ಕೆಲಸ, ಆದರೆ ನೀವು ಪ್ರೀತಿಯಿಂದ ಹೇಗೆ ಸತ್ಯವಾಗಿ ನಡೆದು ಕೊಳ್ಳಬೇಕು ಎಂಬುದನ್ನು ತೋರಿಸಿದ್ದೀರಾ, ನೀವು ಖಂಡಿತವಾಗಲೂ ಕನ್ನಡದ ಲಕ್ಷಾಂತರ ಪ್ರೇಕ್ಷಕರ ಹೃದಯವನ್ನು ಈಗಾಗಲೇ ಗೆದ್ದಿದ್ದೀರಿ, ಈಗ ಬಿಗ್ ಬಾಸ್ ಕಿರೀಟವನ್ನು ಗೆದ್ದು ಬನ್ನಿರಿ ಎಂದು ಶುಭಾಶಯ ತಿಳಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ವೈಷ್ಣವಿ ಅವರಿಗೆ ಬೆಂಬಲ ನೀಡಲು ಮನವಿ ಮಾಡಿದ್ದಾರೆ.

Comments are closed.