ಮತ್ತೊಂದು ಅದೃಷ್ಟ ಪಡೆದುಕೊಂಡ ವಂಶಿಕ: ಕಿರುತೆರೆಯಲ್ಲಿ ಈಕೆಯ ಹವಾ ಕಂಡು ಎಲ್ಲರೂ ಸುಸ್ತು. ಈ ಬಾರಿ ಎಂಟ್ರಿ ಕೊಟ್ಟದ್ದು ಎಲ್ಲಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಾಲ ನಟನಾಗಿ ಮಾಸ್ಟರ್ ಆನಂದ್ ಅವರು ಯಾವ ರೀತಿಯಲ್ಲಿ ಹವಾ ಸೃಷ್ಟಿಸಿದರು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಬಾಲ ನಟರಾಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿರುವ ಕೆಲವೇ ಕೆಲವು ಕಲಾವಿದರಲ್ಲಿ ಮಾಸ್ಟರ್ ಆನಂದ್ ಅವರ ಹೆಸರು ಅಗ್ರಪಂಕ್ತಿಯಲ್ಲಿ ಕಾಣಿಸಿಗುತ್ತದೆ. ಇದಾದ ನಂತರ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹಾಗೂ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡರು ಕೂಡ ಮಾಸ್ಟರ್ ಆನಂದ್ ಅವರು ಮಿಸ್ಟರ್ ಆನಂದ್ ಆಗಲೇ ಇಲ್ಲ.

ಇಂದಿಗೂ ಕೂಡ ಅವರನ್ನು ಮಾಸ್ಟರ್ ಆನಂದ್ ಎನ್ನುವುದಾಗಿಯೇ ಕರೆಯಲಾಗುತ್ತದೆ. ಇನ್ನು ಇವರ ಮಗಳಾಗಿರುವ ವಂಶಿಕ ಅವರು ಈಗಾಗಲೇ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ಗೆದ್ದ ನಂತರ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಮೂಲಕವೂ ಕೂಡ ಗೆದ್ದು ಎಲ್ಲರ ಮನಸ್ಸನ್ನು ಕೂಡ ಗೆಲ್ಲಲು ಯಶಸ್ವಿಯಾಗಿದ್ದು ಎಲ್ಲಿ ನೋಡಿದರೂ ಕೂಡ ತನ್ನ ಹೆಸರನ್ನೇ ಎಲ್ಲರೂ ಜಪ ಮಾಡುವಂತೆ ಮಾಡಿಕೊಂಡಿದ್ದಾಳೆ. ಅಷ್ಟರಮಟ್ಟಿಗೆ ವಂಶಿಕ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಆವರಿಸಿಕೊಂಡಿದ್ದಾಳೆ ಎಂದರೆ ತಪ್ಪಾಗಲಾರದು. ಈಗ ವಿಶೇಷ ಎನ್ನುವಂತೆ ವಂಶಿಕಗೆ ಇನ್ನೊಂದು ಹೊಸ ಜವಾಬ್ದಾರಿ ಸಿಕ್ಕಿದೆ ಎಂಬುದಾಗಿ ಹೇಳಲಾಗುತ್ತಿದೆ.

vanshi 4 | ಮತ್ತೊಂದು ಅದೃಷ್ಟ ಪಡೆದುಕೊಂಡ ವಂಶಿಕ: ಕಿರುತೆರೆಯಲ್ಲಿ ಈಕೆಯ ಹವಾ ಕಂಡು ಎಲ್ಲರೂ ಸುಸ್ತು. ಈ ಬಾರಿ ಎಂಟ್ರಿ ಕೊಟ್ಟದ್ದು ಎಲ್ಲಿಗೆ ಗೊತ್ತೇ??
ಮತ್ತೊಂದು ಅದೃಷ್ಟ ಪಡೆದುಕೊಂಡ ವಂಶಿಕ: ಕಿರುತೆರೆಯಲ್ಲಿ ಈಕೆಯ ಹವಾ ಕಂಡು ಎಲ್ಲರೂ ಸುಸ್ತು. ಈ ಬಾರಿ ಎಂಟ್ರಿ ಕೊಟ್ಟದ್ದು ಎಲ್ಲಿಗೆ ಗೊತ್ತೇ?? 2

ಮಿತ್ರರೇ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿರುವ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮವನ್ನು ವಂಶಿಕಾಳೆ ನಿರೂಪಕಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾಳೆ ಎಂಬುದಾಗಿ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಸದ್ಯದ ಮಟ್ಟಿಗೆ ಕಿರುತೆರಿಯ ಸೂಪರ್ ಸ್ಟಾರ್ ಆಗಿರುವ ವಂಶಿಕ ಹಾಗೆ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಪ್ರತಿ ಎಪಿಸೋಡಿಗೆ 40 ರಿಂದ 50,000 ಸಂಭಾವನೆ ಸಿಗಲಿದೆ ಎಂಬ ಮಾತುಗಳು ಕೂಡ ಬಲವಾಗಿ ಕೇಳಿ ಬರುತ್ತಿದೆ. ತನ್ನ ತಂದೆಯಂತೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಈಗ ಕನ್ನಡ ಕಿರುತೆರೆಯಲ್ಲಿ ಸುಂಟರಗಾಳಿಯಂತೆ ಎಲ್ಲಾ ಕಡೆ ಓಡಾಡುತ್ತಿರುವುದು ನಿಜಕ್ಕೂ ಕೂಡ ಆಕೆ ಮುಂದಿನ ದಿನಗಳಲ್ಲಿ ಫ್ಯೂಚರ್ ಸೂಪರ್ ಸ್ಟಾರ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವ ಭವಿಷ್ಯವನ್ನು ನುಡಿಯುವಂತೆ ಮಾಡುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Comments are closed.