ರಶ್ಮಿಕಾ ಜೀವನದಲ್ಲಿ ಮದುವೆಯಾದ ಮೇಲೆ ಬಿರುಗಾಳಿ. ಚೈತನ್ಯ, ಸಮಂತಾ ಡೈವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷ್ಯಿಂದ ಷಾಕಿಂಗ್ ಭವಿಷ್ಯ. ಏನಾಗುತ್ತದೆ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ರಶ್ಮಿಕ ಮಂದಣ್ಣ ಭರವಸೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲೆಲ್ಲೂ ಅವರ ಗುಣಗಾನ ಭಾರತದ ಮೂಲೆಮೂಲೆಯಲ್ಲಿ ಕೂಡ ಅವರ ಅಭಿಮಾನಿ ಬಳಗವಿದೆ. ಕೊಡಗಿನ ಇಪ್ಪತ್ತರ ಹರೆಯದ ಹುಡುಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭಾರತೀಯ ಚಿತ್ರರಂಗದಲ್ಲಿ ತನ್ನ ಪ್ರಭಾವವನ್ನು ಬೀರುತ್ತದೆ ಎಂದರೆ ನಿಜಕ್ಕೂ ಕೂಡ ನಂಬಲು ಸಾಧ್ಯವಿಲ್ಲ. ಆದರೆ ಕನಸನ್ನು ನನಸು ಮಾಡುವಲ್ಲಿ ರಶ್ಮಿಕ ಮಂದಣ್ಣ ಯಶಸ್ವಿಯಾಗಿದ್ದಾರೆ.

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ತನ್ನ ಸಿನಿಮಾ ಜರ್ನಿ ಯನ್ನು 20ನೇ ವಯಸ್ಸಿನಲ್ಲಿ ಆರಂಭಿಸುತ್ತಾರೆ. ಮೊದಲನೇ ಸಿನಿಮಾದಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಕರ್ನಾಟಕ ರಾಜ್ಯದಾದ್ಯಂತ ಪಡೆದುಕೊಳ್ಳುತ್ತಾರೆ. ಇದೇ ಚಿತ್ರದ ಯಶಸ್ಸಿನ ಪರಿಣಾಮದಿಂದಾಗಿ ತೆಲುಗು ಚಿತ್ರರಂಗಕ್ಕೂ ಕೂಡ ಕಾಲಿಡುತ್ತಾರೆ. ಒಮ್ಮೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ಸನ್ನು ಗಳಿಸಿದ ನಂತರ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ತೆಲುಗು ಚಿತ್ರರಂಗದ ಯಶಸ್ಸು ಎನ್ನುವುದು ರಶ್ಮಿಕಾ ಮಂದಣ್ಣ ನವರನ್ನು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸುವಂತೆ ಮಾಡಿತು ಎಂದರೆ ತಪ್ಪಾಗಲಾರದು.

rashmika mandanna | ರಶ್ಮಿಕಾ ಜೀವನದಲ್ಲಿ ಮದುವೆಯಾದ ಮೇಲೆ ಬಿರುಗಾಳಿ. ಚೈತನ್ಯ, ಸಮಂತಾ ಡೈವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷ್ಯಿಂದ ಷಾಕಿಂಗ್ ಭವಿಷ್ಯ. ಏನಾಗುತ್ತದೆ ಅಂತೇ ಗೊತ್ತೇ??
ರಶ್ಮಿಕಾ ಜೀವನದಲ್ಲಿ ಮದುವೆಯಾದ ಮೇಲೆ ಬಿರುಗಾಳಿ. ಚೈತನ್ಯ, ಸಮಂತಾ ಡೈವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷ್ಯಿಂದ ಷಾಕಿಂಗ್ ಭವಿಷ್ಯ. ಏನಾಗುತ್ತದೆ ಅಂತೇ ಗೊತ್ತೇ?? 3

ಸದ್ಯಕ್ಕೆ ತಮಿಳು ತೆಲುಗು ಕನ್ನಡ ಹಿಂದಿ ಸಿನಿಮಾಗಳಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಜನ್ಮದಿನವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಮಲಯಾಳಂ ಚಿತ್ರರಂಗಕ್ಕೆ ಕೂಡ ಕಾಲಿಡುವ ಘೋಷಣೆಯನ್ನು ಮಾಡಿದ್ದಾರೆ. ಬಾಲಿವುಡ್ ನಲ್ಲಿ ಕೂಡ ಈಗಾಗಲೇ ಅಮಿತಾ ಬಚ್ಚನ್ ಸಿದ್ಧಾರ್ಥ್ ಮಲ್ಹೋತ್ರ ರವರಂತಹ ಸ್ಟಾರ್ ನಟರೊಂದಿಗೆ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್ ಹಾಗೂ ತಲಪತಿ ವಿಜಯ್ ರವರ ಹೊಸ ಸಿನಿಮಾದಲ್ಲೂ ಕೂಡ ರಶ್ಮಿಕ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ಬೇರೆಯದೇ ವಿಚಾರ. ಹೌದು ಈ ಹಿಂದೆ ರಶ್ಮಿಕ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ಯಶಸ್ಸು ಹೊಂದಲು ಕೂಡ ತೆಲುಗು ಸೆಲೆಬ್ರಿಟಿ ಜ್ಯೋತಿಷ್ಯಿ ಆಗಿರುವ ವೇಣು ಸ್ವಾಮಿರವರು ನುಡಿದಿರುವ ಭವಿಷ್ಯವೇ ಕಾರಣ ಎಂದು ಹೇಳಲಾಗಿತ್ತು. ಈಗ ಇವರು ರಶ್ಮಿಕ ಮಂದಣ್ಣ ನವರ ಕುರಿತಂತೆ ಒಂದು ಆಶ್ಚರ್ಯಕರ ಭವಿಷ್ಯವನ್ನು ನುಡಿದಿದ್ದಾರೆ. ಈಗ ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿದೆ.

ಇದೇ ವೇಣು ಸ್ವಾಮಿ ಸಮಂತ ಹಾಗೂ ನಾಗಚೈತನ್ಯ ರವರ ನಡುವೆ ವಿವಾಹ ವಿಚ್ಛೇದನ ನಡೆಯಲಿದೆ ಎಂಬುದಾಗಿ ಮೊದಲೇ ಭವಿಷ್ಯವನ್ನು ನುಡಿದಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ರೆಬಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ರವರು ಇನ್ನು ಮುಂದಿನ ದಿನಗಳಲ್ಲಿ ಸಾಲುಸಾಲಾಗಿ ಅನುಭವಿಸಲಿದ್ದಾರೆ ಎಂಬುದಾಗಿ ಕೂಡ ಭವಿಷ್ಯವನ್ನು ನುಡಿದಿದ್ದಾರೆ. ಈಗ ಇವರೇ ರಶ್ಮಿಕ ಮಂದಣ್ಣ ನವರು ಮದುವೆಯಾದ ನಂತರ ಅತಿಶೀಘ್ರದಲ್ಲಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳಲಿದ್ದಾರೆ ಅವರ ವೈವಾಹಿಕ ಜೀವನ ಚೆನ್ನಾಗಿರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯ ಈಗ ಅವರ ಅಭಿಮಾನಿಗಳಿಗೆ ಹಾಗೂ ನೆಟ್ಟಿಗರಿಗೆ ಆಶ್ಚರ್ಯವನ್ನು ತಂದೊದಗಿಸಿದೆ.

rashmika mandanna 3 | ರಶ್ಮಿಕಾ ಜೀವನದಲ್ಲಿ ಮದುವೆಯಾದ ಮೇಲೆ ಬಿರುಗಾಳಿ. ಚೈತನ್ಯ, ಸಮಂತಾ ಡೈವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷ್ಯಿಂದ ಷಾಕಿಂಗ್ ಭವಿಷ್ಯ. ಏನಾಗುತ್ತದೆ ಅಂತೇ ಗೊತ್ತೇ??
ರಶ್ಮಿಕಾ ಜೀವನದಲ್ಲಿ ಮದುವೆಯಾದ ಮೇಲೆ ಬಿರುಗಾಳಿ. ಚೈತನ್ಯ, ಸಮಂತಾ ಡೈವೋರ್ಸ್ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷ್ಯಿಂದ ಷಾಕಿಂಗ್ ಭವಿಷ್ಯ. ಏನಾಗುತ್ತದೆ ಅಂತೇ ಗೊತ್ತೇ?? 4

ಎಷ್ಟೊಂದು ಚಿಕ್ಕವಯಸ್ಸಿನಲ್ಲಿ ಮದುವೆ ಆದರೂ ಕೂಡ ಎಲ್ಲಾ ಸೆಲೆಬ್ರಿಟಿ ಗಳಂತೆ ರಶ್ಮಿಕಾ ಮಂದಣ್ಣ ಕೂಡ ವೈವಾಹಿಕ ಜೀವನದಲ್ಲಿ ಹೆಚ್ಚು ದಿನಗಳ ಕಾಲ ಇರೋದಿಲ್ಲ ಎನ್ನುವ ವಿಚಾರ ಅಭಿಮಾನಿಗಳನ್ನು ಹೈರಾಣಾಗಿಸಿದೆ. ಇದರ ಕುರಿತಂತೆ ರಶ್ಮಿಕಾ ಮಂದಣ್ಣ ಎಲ್ಲೂ ಕೂಡ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇದು ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.