ತಮ್ಮ ಜೀವನದಲ್ಲಿ ವಿಚ್ಚೇದನ ಪಡೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಸಾಮಾನ್ಯ ಜನರಲ್ಲಿ ಆಗಲಿ ಅಥವಾ ಸೆಲೆಬ್ರಿಟಿಗಳಲ್ಲಿ ಆಗಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ನಮ್ಮ ಸೆಲೆಬ್ರಿಟಿಗಳಲ್ಲಿ ಮದುವೆಯಾದ ನಂತರವೂ ಕೂಡ ವಿವಾಹ ವಿಚ್ಛೇದನವನ್ನು ತೆಗೆದುಕೊಂಡಿದ್ದಾರೆ. ಇಂದಿನ ಈ ಲೇಖನದಲ್ಲಿ ನಾವು ದಕ್ಷಿಣ ಭಾರತ ಚಿತ್ರರಂಗದ ಕೆಲವು ಖ್ಯಾತ ನಟಿಯರು ಮದುವೆಯಾದ ನಂತರ ಕೆಲವೇ ವರ್ಷಗಳಲ್ಲಿ ವಿವಾಹ ವಿಚ್ಛೇದನವನ್ನು ಪಡೆಯುವ ಮೂಲಕ ತಮ್ಮ ಮದುವೆಗೆ ತಿಲಾಂಜಲಿ ಇಟ್ಟಿದ್ದಾರೆ ಅವರ ಕುರಿತಂತೆ ತಿಳಿಯೋಣ ಬನ್ನಿ. ವಿಶೇಷ ಸೂಚನೆ: ಈ ಲೇಖನವನ್ನು ಕೇವಲ ಮನರಂಜನೆಯ ಉದ್ದೇಶಕ್ಕಾಗಿ ತಿಳಿಸುತ್ತಿದ್ದು, ಯಾವ ಸೆಲೆಬ್ರೆಟಿಗಳ ವೈಯಕ್ತಿಕ ನಿರ್ಧಾರವನ್ನು ಪ್ರಶ್ನಿಸುವ ಉದ್ದೇಶ ಅಥವಾ ಅವರ ನಿರ್ಧಾರವನ್ನು ಗೌರವಿಸದೆ ಇರುವ ಉದ್ದೇಶವಂತೂ ಇಲ್ಲವೇ ಇಲ್ಲ.

sonia agarwal | ತಮ್ಮ ಜೀವನದಲ್ಲಿ ವಿಚ್ಚೇದನ ಪಡೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ??
ತಮ್ಮ ಜೀವನದಲ್ಲಿ ವಿಚ್ಚೇದನ ಪಡೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? 4

ಸೋನಿಯಾ ಅಗರ್ವಾಲ್; ಒಂದು ಕಾಲದ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾಗಿದ್ದಂತಹ ಸೋನಿಯಾ ಅಗರ್ವಾಲ್ ಅವರು ತಮಿಳು ಚಿತ್ರರಂಗದ ಖ್ಯಾತ ಪ್ರೊಡ್ಯೂಸರ್ ಆಗಿರುವ ಸೆಲ್ವರಾಘವನ್ ರವರನ್ನು 2006 ರಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಇವರ ನಡುವೆ ತೋರಿ ಬಂದಂತಹ ಭಿನ್ನಾಭಿಪ್ರಾಯಗಳಿಂದಾಗಿ 2010 ರಲ್ಲಿ ಇವರಿಬ್ಬರು ಡಿವೋರ್ಸ್ ಪಡೆಯುತ್ತಾರೆ.

ಮಾನ್ಯ ನಾಯ್ಡು; 2008 ರಲ್ಲಿ ಸತ್ಯ ಪಟೇಲ್ ಎನ್ನುವವರನ್ನು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಮಾನ್ಯ ನಾಯ್ಡುರವರು ಮದುವೆಯಾಗುತ್ತಾರೆ. ಇವರಿಂದ ವಿವಾಹ ವಿಚ್ಛೇದನವನ್ನು ಪಡೆದು ನಂತರ 2013 ರಲ್ಲಿ ವಿಕಾಸ್ ಭಾಜಪೇಯ ಎನ್ನುವವರನ್ನು ಮದುವೆಯಾಗಿರುತ್ತಾರೆ. ಇವರಿಗೆ ಮುದ್ದಾದ ಮಗಳಿದ್ದಾಳೆ.

meera jasmine | ತಮ್ಮ ಜೀವನದಲ್ಲಿ ವಿಚ್ಚೇದನ ಪಡೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ??
ತಮ್ಮ ಜೀವನದಲ್ಲಿ ವಿಚ್ಚೇದನ ಪಡೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? 5

ಮೀರ ಜಾಸ್ಮಿನ್; ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಸಿರುವ ಮಲಯಾಳಂ ಮೂಲದ ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ ಮೀರಾ ಜಾಸ್ಮಿನ್ ರವರು ಅನಿಲ್ ಜಾನ್ ಟೈಟಸ್ ಎನ್ನುವವರನ್ನು 2014 ರಲ್ಲಿ ಮದುವೆಯಾಗುತ್ತಾರೆ. ನಂತರ ಇವರಿಬ್ಬರ ನಡುವೆ ನಡೆದಂತಹ ವೈವಾಹಿಕ ಭಿನ್ನಾಭಿಪ್ರಾಯಗಳಿಂದಾಗಿ ದೂರವಾಗಿದ್ದಾರೆ.

ಅಮಲ ಪೌಲ್; ಮಲಯಾಳಂ ಮೂಲದ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿರುವ ಅಮಲ ಪೌಲ್ ಕನ್ನಡದಲ್ಲಿ ಕೂಡ ನಟಿಸಿದ್ದಾರೆ. ಇವರು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವಿಜಯನ್ ರವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರ ಪ್ರೀತಿ ಎಷ್ಟು ವೀಕ್ ಆಗಿತ್ತು ಎಂದರೆ ಕೇವಲ ಎರಡು ವರ್ಷಗಳಲ್ಲಿ ವಿವಾಹ ವಿಚ್ಛೇದನದ ಮೂಲಕ ಮದುವೆ ಜೀವನ ಅಂತ್ಯವಾಗಿತ್ತು.

ಹೇಮ ಪ್ರಭಾತ್; ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವ ಹೇಮಾ ಪ್ರಭಾತ್ ಸ್ವಮೇಂದ್ರ ಪಂಚಮುಖಿ ಎನ್ನುವವರನ್ನು ಮೊದಲಿಗೆ ಮದುವೆಯಾಗಿದ್ದರು. ನಂತರ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ನಟಿ ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಶಾಂತ್ ಗೋಪಾಲ ಶಾಸ್ತ್ರಿ ಅವರನ್ನು ಮದುವೆಯಾಗಿದ್ದಾರೆ.

ಅನುಪ್ರಭಾಕರ್; ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗಿ ಮಿಂಚಿ ದ್ದಂತಹ ನಟಿ ಅನು ಪ್ರಭಾಕರ್ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ರವರ ಪುತ್ರನಾಗಿರುವ ಕೃಷ್ಣಕುಮಾರ್ ಅವರನ್ನು ಮದುವೆಯಾಗಿದ್ದರು. ನಂತರ ಇವರಿಬ್ಬರ ನಡುವೆ ಒದಗಿ ಬಂದಂತಹ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ವಿವಾಹ ವಿಚ್ಛೇದನವನ್ನು ಪಡೆದು ನಟ ರಘು ಮುಖರ್ಜಿ ಅವರನ್ನು ಮದುವೆಯಾಗಿ ಒಂದು ಹೆಣ್ಣು ಮಗುವಿನ ತಾಯಿ ಕೂಡ ಆಗಿದ್ದಾರೆ.

ಪ್ರೇಮ; ಕನ್ನಡ ಚಿತ್ರರಂಗದ ಒಂದು ಕಾಲದ ಅನಭಿಷಕ್ತ ರಾಣಿಯಾಗಿ ಇರುವಂತಹ ನಟಿ ಪ್ರೇಮಾ ರವರು 2006 ರಲ್ಲಿ ಜೀವನ್ ಅಪ್ಪಚ್ಚು ಎನ್ನುವವರನ್ನು ಮದುವೆಯಾಗುತ್ತಾರೆ. ಹತ್ತು ವರ್ಷಗಳ ಧೀರ್ಘಕಾಲದ ದಾಂಪತ್ಯ ಜೀವನದ ನಂತರ 2016 ರಲ್ಲಿ ಇಬ್ಬರು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ.

amala paul samantha shruthi | ತಮ್ಮ ಜೀವನದಲ್ಲಿ ವಿಚ್ಚೇದನ ಪಡೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ??
ತಮ್ಮ ಜೀವನದಲ್ಲಿ ವಿಚ್ಚೇದನ ಪಡೆದುಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿಯರು ಯಾರ್ಯಾರು ಗೊತ್ತೇ?? 6

ಶೃತಿ; ಕಲ್ಟ್ ಕ್ಲಾಸ್ಸಿಕ್ ಸಿನಿಮಾಗಳು ಎಂದಾಕ್ಷಣ ನಮಗೆ ನೆನಪಿಗೆ ಬರುವ ನಟಿಯೆಂದರೆ ಅದು ಶೃತಿಯವರು. ನಟಿ ಶ್ರುತಿ 1998 ರಲ್ಲಿ ಸಾಂಸಾರಿಕ ಸಿನಿಮಾಗಳ ಸೂಪರ್ಹಿಟ್ ಡೈರೆಕ್ಟರ್ ಆಗಿರುವ ಎಸ್ ಮಹೇಂದರ್ ಅವರನ್ನು ಮದುವೆಯಾಗುತ್ತಾರೆ. ನಂತರ 2009 ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಳ್ಳುತ್ತಾರೆ.

ಸಮಂತ; ಹತ್ತು ವರ್ಷಗಳ ಕಾಲ ಪ್ರೀತಿಸಿ 2017 ರಂದು ನಾಗಚೈತನ್ಯ ರವರನ್ನು ನಟಿ ಸಮಂತಾ ಮದುವೆಯಾಗುತ್ತಾರೆ. ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ನಂತರ ಸಮಂತಾ ರವರು 2021 ರಂದು ವೈವಾಹಿಕ ಸಂಬಂಧದಿಂದ ಹೊರಬರುತ್ತಾರೆ. ಈ ಸೌತ್ ಸ್ಟಾರ್ ನಟಿಯರ ವೈವಾಹಿಕ ಜೀವನದ ಕುರಿತಂತೆ ಕೇಳಿದ ನಂತರ ನಿಮಗೆ ಯಾವ ಅನಿಸಿಕೆ ಮೂಡಿಬಂದಿದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.