Tata Nexon: ಟಾಟಾ ನೆಕ್ಸಾನ್ ಖರೀದಿ ಮಾಡಿದರೆ, ಲಕ್ಷ ಲಕ್ಷ ಉಳಿಸಿ ಶ್ರೀಮಂತರು ಕೂಡ ಆಗಬಹುದು. ಲೆಕ್ಕಾಚಾರ ಸಮೇತ ವಿವರಣೆ.

you can save this much money by using tata nexon

Tata Nexon: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವಂತಹ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯ ಕಾರಣಕ್ಕಾಗಿ ಪ್ರತಿಯೊಂದು ವಾಹನಗಳನ್ನು ಕೂಡ ಎಲೆಕ್ಟ್ರಿಕ್ ರೂಪಾಂತರದಲ್ಲಿ ಖರೀದಿಸುವ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ ತಿಂಗಳಿನಲ್ಲಿಯೇ ಒಟ್ಟಾರೆಯಾಗಿ 1.73 ಲಕ್ಷ ಎಲೆಕ್ಟ್ರಿಕ್ ವಾಹನಗಳು(Electric Vehicle) ಭಾರತದಲ್ಲಿ ಮಾರಾಟವಾಗಿವೆ. ಅವುಗಳಲ್ಲಿ ವಿಶೇಷವಾಗಿ ಎಲೆಕ್ಟ್ರಿಕ್ ವಾಹನದ ಕಾರುಗಳ ಬಗ್ಗೆ ಮಾತನಾಡಲು ಹೊರಟರೆ ಟಾಟಾ ಸಂಸ್ಥೆಯ ಹಲವಾರು ಕಾರುಗಳು ಮುಂಚೂಣಿ ಸ್ಥಾನದಲ್ಲಿ ನಿಲ್ಲುತ್ತವೆ. ಎಲೆಕ್ಟ್ರಿಕ್ ಕಾರುಗಳ ಸೆಗ್ಮೆಂಟ್ ನಲ್ಲಿ Tata Nexon ಸದಾಕಾಲ ಮುಂಚೂಣಿ ಸ್ಪರ್ಧೆಯಲ್ಲಿ ಇರುತ್ತದೆ. ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಎಲೆಕ್ಟ್ರಿಕ್ ಕಾರ್ ನಲ್ಲಿ ಕೂಡ ಇದೇ ಕಾರು ಕಾಣಿಸಿಕೊಳ್ಳುತ್ತದೆ.

you can save this much money by using tata nexon | Tata Nexon: ಟಾಟಾ ನೆಕ್ಸಾನ್ ಖರೀದಿ ಮಾಡಿದರೆ, ಲಕ್ಷ ಲಕ್ಷ ಉಳಿಸಿ ಶ್ರೀಮಂತರು ಕೂಡ ಆಗಬಹುದು. ಲೆಕ್ಕಾಚಾರ ಸಮೇತ ವಿವರಣೆ.
Tata Nexon: ಟಾಟಾ ನೆಕ್ಸಾನ್ ಖರೀದಿ ಮಾಡಿದರೆ, ಲಕ್ಷ ಲಕ್ಷ ಉಳಿಸಿ ಶ್ರೀಮಂತರು ಕೂಡ ಆಗಬಹುದು. ಲೆಕ್ಕಾಚಾರ ಸಮೇತ ವಿವರಣೆ. 2

ಟಾಟಾ ನೆಕ್ಸನ್(Tata Nexon) ಕಾರು ನಿಮಗೆ ಎಲೆಕ್ಟ್ರಿಕ್ ಹಾಗೂ ಪೆಟ್ರೋಲ್ ರೂಪಾಂತರದಲ್ಲಿ ಕೂಡ ಸಿಗುತ್ತದೆ. ಆದರೆ ಇವುಗಳ ನಡುವಿನ ಬೆಲೆಯ ಅಂತರ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಇದ್ದು ಸಾಮಾನ್ಯವಾಗಿ ಎಲೆಕ್ಟ್ರಿಕ್ ಕಾರುಗಳಿಗೆ ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಬೆಲೆ ಜಾಸ್ತಿ ಆಗಿರುತ್ತದೆ. Tata Nexon Evಯ ಬಗ್ಗೆ ಮಾತನಾಡುವುದಾದರೆ ಇದರ ಬೇಸ್ ಬೆಲೆ 16.49 ಲಕ್ಷ ರೂಪಾಯಿ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ. ಇದರ ಹೋಲಿಕೆಯಲ್ಲಿ ಪೆಟ್ರೋಲ್ ನೆಕ್ಸನ್ ಬೆಲೆ 7.79 ಲಕ್ಷ ರೂಪಾಯಿಗಳಿಂದ 14.50 ಲಕ್ಷ ರೂಪಾಯಿಗಳ ಒಳಗೆ ಸಿಗುತ್ತದೆ. ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಸರಿಸುಮಾರು 8 ಲಕ್ಷ ರೂಪಾಯಿಗಳ ಅಂತರ ಕಂಡುಬರುತ್ತದೆ. ಇದನ್ನು ಓದಿ..Honda Shine: ದೇಶದಲ್ಲಿದೆ ಡಿಮಾಂಡ್ ಹೊಂದಿರುವ 2023ರ ಹೋಂಡಾ ಶೈನ್ ಬಿಡುಗಡೆ. ವಿಶೇಷತೆ ಬೆಲೆ ಪ್ರಮುಖ ಅಂಶಗಳು.

ಉಳಿತಾಯದ ಬಗ್ಗೆ ನಿಮಗೆ ಟಿಪ್ಸ್ ನೀಡೋದಾದರೆ ಪೆಟ್ರೋಲ್ ವೇರಿಯಂಟ್ ನ Tata Nexon NM ಕಾರಿನ ಎಕ್ಸ್ ಶೋರೂಮ್ ಬೆಲೆ 8.89 ಲಕ್ಷ. ಇದರ ಆನ್ ರೋಡ್ ಬೆಲೆ 10 ಲಕ್ಷದ ಆಸುಪಾಸಿನಲ್ಲಿ ಬರಬಹುದು. ಇನ್ನು ಖರೀದಿಸಿದ ನಂತರ ನಿಮ್ಮ ಓಡಾಟ ಪ್ರತಿ ದಿನ 50 ಕಿಲೋಮೀಟರ್ ನಂತೆ ತಿಂಗಳಿಗೆ 1500 ಕಿಲೋಮೀಟರ್ ಆಗಿರ ಬಹುದು. ಆಗ ನೀವು ನೂರು ರೂಪಾಯಿ ಪೆಟ್ರೋಲ್ ದರದ ಲೆಕ್ಕಾಚಾರದಲ್ಲಿ ಎಂಟು ವರ್ಷಗಳಿಗೆ 8.2 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅಂದರೆ ನಿಮಗೆ ಈ ಕಾರು ಆವರೇಜ್ 17.4 ಕಿಲೋಮೀಟರ್ ಮೈಲೇಜ್ ನೀಡಿದಂತಾಗುತ್ತದೆ. ಆದರೆ ಇದರ ಹೋಲಿಕೆಯಲ್ಲಿ ನೀವು ಇದರ ಎಲೆಕ್ಟ್ರಿಕ್ ವರ್ಷನ್ ಅನ್ನು ಖರೀದಿಸಿದರೆ ಖರೀದಿಸುವಾಗ ಇದರ ಬೆಲೆ ರೂ.16.49 ಲಕ್ಷ ಆಗುತ್ತದೆ ಆದರೆ ಪ್ರತಿ ಕಿಲೋಮೀಟರ್ 5 ಕೇವಲ ಒಂದು ರೂಪಾಯಿನಂತೆ ದಿನಕ್ಕೆ 50 km ಓಡಿಸಿದರೆ ತಿಂಗಳಿಗೆ ಕೇವಲ 1500 ರೂಪಾಯಿಗಳನ್ನು ಮಾತ್ರ ಖರ್ಚು ಮಾಡಬೇಕಾಗುತ್ತದೆ. ಈಗ 8 ವರ್ಷದ ಲೆಕ್ಕಾಚಾರವನ್ನು ತೆಗೆದುಕೊಂಡರೆ ನೀವು ವಿದ್ಯುತ್ ಅನ್ನು ಇಂಧನದ ರೂಪದಲ್ಲಿ ಕೇವಲ 1.26 ಲಕ್ಷ ರೂಪಾಯಿಗಳನ್ನು ಮಾತ್ರ ಖರ್ಚು ಮಾಡಿರುತ್ತೀರಿ. ಏನಿಲ್ಲವೆಂದರೂ ನೀವು 7 ಲಕ್ಷಗಳಿಗೂ ಅಧಿಕ ಹಣವನ್ನು ಉಳಿತಾಯ ಮಾಡಿದ್ದೀರಿ ಎಂದು ಹೇಳಬಹುದಾಗಿದೆ.

ಪೆಟ್ರೋಲ್ ನೆಕ್ಸನ್ ನಿಮಗೆ ಎಂಟು ವರ್ಷಗಳಲ್ಲಿ 8 ಲಕ್ಷ ರೂಪಾಯಿ ಪೆಟ್ರೋಲ್ ಖರ್ಚನ್ನು ನೀಡುತ್ತದೆ ಅದೇ ಹೋಲಿಕೆಯಲ್ಲಿ ಎಲೆಕ್ಟ್ರಿಕ್ ನೆಕ್ಸಾನ್(Electric Nexon) ಎಂಟು ವರ್ಷಕ್ಕೆ ಕೇವಲ 1.26 ಲಕ್ಷ ರೂಪಾಯಿ ಮಾತ್ರ ಖರ್ಚಾಗುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಪೆಟ್ರೋಲ್ ಗಾಡಿ 8 ವರ್ಷದಲ್ಲಿ ಖರ್ಚು ಮಾಡುವ ಇಂಧನ ಬೆಲೆಗಿಂತಲೂ ಅರ್ಧ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ ನೀವು ಇಂಧನವನ್ನು ಹಾಕಿ ನಿಮಗೆ ಬೇಕೆಂದ ಕಡೆಗೆ ಹೋಗಬಹುದಾಗಿದೆ. ಎಲೆಕ್ಟ್ರಿಕ್ ಕಾರಿನ ಬೆಲೆಗಿಂತ ಪೆಟ್ರೋಲ್ ಕಾರಿನ ಬೆಲೆ ಹೆಚ್ಚಾಗಿರಬಹುದು ಆದರೆ ಅದೇ ಕಡಿಮೆ ಬೆಲೆಗೆ ಖರೀದಿಸಿದಂತಹ ಕಾರನ್ನು ಎಂಟು ವರ್ಷದ ನಂತರ ಸಂಪೂರ್ಣವಾಗಿ ಇಂಧನಕ್ಕಾಗಿ ಖರ್ಚು ಮಾಡಬಹುದಾಗಿದೆ. ಇದನ್ನು ಓದಿ..Electric vehicles: ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಗೊತ್ತೇ? ನೋಡಿ ಖರೀದಿ ಮಾಡಿ, ಲೈಫ್ ಜಿಂಗ ಲಾಲಾ

ತಜ್ಞರು ಹೇಳುವ ಪ್ರಕಾರ ಅದೇ ಹಣವನ್ನು ನೀವು SIP ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ 12 ಪ್ರತಿಶತ ರಿಟರ್ನ್ ಆಧಾರದ ಮೇಲೆ ನೀವು 13.72 ಲಕ್ಷ ರೂಪಾಯಿ ಹಾಗೂ ನಿಮ್ಮ ಅದೃಷ್ಟ ಚೆನ್ನಾಗಿದ್ದು ಮಾರುಕಟ್ಟೆ ಕೂಡ ಚೆನ್ನಾಗಿದ್ದರೆ 15 ಪ್ರತಿಶತ ಬಡ್ಡಿಯ ಮೇಲೆ 15.80 ಲಕ್ಷ ರೂಪಾಯಿಗಳನ್ನು ಕೂಡ ಗಳಿಸಬಹುದಾಗಿದೆ. ಪೆಟ್ರೋಲ್ ಗಾಡಿಗೆ ಪೆಟ್ರೋಲ್ ಹಾಕಿಸುವ ಹಣವನ್ನು ನೀವು ಹೂಡಿಕೆ ಮಾಡಿದರೆ ಅದರಿಂದ ಇನ್ನೊಂದು ಕಾರನ್ನೇ ಖರೀದಿಸಬಹುದು. ಪೆಟ್ರೋಲ್ ವೇರಿಯಂಟ್ ಮೇಲೆ ನಿಮಗೆ ಪ್ರತಿ ಕಿ.ಮೀ ಗೆ 6.12 ಆಗುತ್ತದೆ ಆದರೆ ಎಲೆಕ್ಟ್ರಿಕ್ ವೇರಿಯಂಟ್ ನಲ್ಲಿ 0.97 ರೂಪಾಯಿಯಾಗುತ್ತದೆ. Tata Nexon Ev ಬ್ಯಾಟರಿ ಮೇಲೆ ಎಂಟು ವರ್ಷಗಳ ವಾರಂಟಿ ಅಥವಾ 1.6 ಲಕ್ಷ ಕಿಲೋಮೀಟರ್ಗಳ ವಾರೆಂಟಿ ದೊರಕುತ್ತದೆ. ಇದನ್ನು ಓದಿ..Best Car Info: ಯಾವುದೇ ಹೊಸ ಕಾರನ್ನು ಖರೀದಿ ಮಾಡುವ ಮುನ್ನ ಈ ಐದು ಅಂಶಗಳನ್ನು ಗಮನದಲ್ಲಿ ಇಡುವುದನ್ನು ಅಪ್ಪಿ ತಪ್ಪಿಯೂ ಮರೆಯಬೇಡಿ.

Comments are closed.