Siddaramaiah: ಡಿಕೆಶಿ ಪಕ್ಕಕ್ಕೆ ತಳ್ಳಿ ಸಿಎಂ ಆಗಿದ್ದ ಸಿದ್ದು ಗೆ ಟೆನ್ಶನ್ ಮೇಲೆ ಟೆನ್ಶನ್- ಪಾಪ ಮುಖ್ಯಮಂತ್ರಿ ಕಥೆ ಏನಾಗಿದೆ ಗೊತ್ತೇ??
Siddaramaiah: ನಮ್ಮ ರಾಜ್ಯದಲ್ಲಿ ಈಗ ಕಾಂಗ್ರೆಸ್ (Congress) ಪಕ್ಷದ ಆಡಳಿತ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ (Siddaramaiah) ಅವರು ಈ ಮೂಲಕ ಎರಡನೇ ಸಾರಿ ರಾಜ್ಯದ ಸಿಎಂ (CM) ಆಗಿದ್ದಾರೆ. ಕಳೆದ ಸಾರಿಯ ಹಾಗೆ ಈ ಸಾರಿ ಕೂಡ ಉತ್ತಮವಾದ ಆಡಳಿತ ನಡೆಸಬೇಕು ಎನ್ನುವುದು ಸಿದ್ದರಾಮಯ್ಯ (Siddaramaiah) ಅವರ ಪ್ಲಾನ್. ಆದರೆ ಅವರ ಎದುರು ಈಗ ಸಾಕಷ್ಟು ಸವಾಲುಗಳು ಬರುತ್ತಿದೆ..
ಕಾಂಗ್ರೆಸ್ ಸರ್ಕಾರ ನೀಡಿರುವ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರಲ್ಲೇ ಸಿದ್ದರಾಮಯ್ಯ (Siddaramaiah) ಅವರು ಬಿಡುವಿಲ್ಲದೆ ಬ್ಯುಸಿ ಆಗಿದ್ದಾರೆ. ಆದರೆ ಅವುಗಳನ್ನು ಜಾರಿಗೆ ತರುತ್ತಿರುವ ಶುರುವಿನಲ್ಲೇ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತಲೇ ಇದೆ. ಅವುಗಳನ್ನೆಲ್ಲಾ ಸರಿ ಮಾಡಿ ಒಂದೊಂದೇ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರಲ್ಲಿಯೇ ಸಿದ್ದರಾಮಯ್ಯ ಅವರು ಮಗ್ನರಾಗಿದ್ದು, ರಾಜ್ಯದ ಅಭಿವೃದ್ಧಿ ಕಡೆಗೂ ಗಮನ ಕೊಟ್ಟಿಲ್ಲ. ಇದನ್ನು ಓದಿ..Ram Mandir: ಅಯೋಧ್ಯೆ ರಾಮಮಂದಿರ ಬೇರೆ ದೇವಸ್ಥಾನಗಳಿಗಿಂತ ಹೇಗೆ ಭಿನ್ನವಾಗಿರಲಿದೆ ಗೊತ್ತೇ?? ಹಣದ ಆಟ ನಡೆಯುವುದಿಲ್ಲವೇ? ಭಕ್ತಿಗಳಿಗೆ ಸಿಹಿ ಸುದ್ದಿ.
ಎಲೆಕ್ಷನ್ (Election) ಮುಗಿದು ಗೆದ್ದ ನಂತರ ಪ್ರತಿ ಜಿಲ್ಲೆಗೂ ಪ್ರವಾಸ ಮಾಡುವುದಾಗಿ ಸಿದ್ದರಾಮಯ್ಯ (Siddaramiah) ಅವರು ಹೇಳಿದ್ದರು. ಅಧಿಕಾರಕ್ಕೆ ಬಂದು 1 ತಿಂಗಳು ಕಳೆದು ಹೋಗಿದೆ ಆದರೂ ಕೂಡ ಇನ್ನು ಜಿಲ್ಲಾ ಪ್ರವಾಸಗಳಿಗೆ ಹೋಗಲು ಸಾಧ್ಯವಾಗಿಲ್ಲ. ಅಭಿವೃದ್ಧಿ ಕಂಡುಬರುತ್ತಿಲ್ಲ ಎನ್ನುವ ಆರೋಪ ಸರ್ಕಾರದ ಮೇಲೆ ಇದೆ, ಅದರ ಬೆನ್ನಲ್ಲೇ ಈಗ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವ ತಯಾರಿಯಲ್ಲಿದ್ದಾರೆ.
ನಮಗೆಲ್ಲ ಗೊತ್ತಿರುವ ಹಾಗೆ ಈಗ ರಾಜ್ಯದಲ್ಲಿ ಮಳೆ ಚೆನ್ನಾಗಿಲ್ಲ, ಒಂದು ತಿಂಗಳಿನಿಂದ ರಾಜ್ಯದಲ್ಲಿ ಆಗಿರುವುದು 10% ಬಿತ್ತನೆ ಮಾತ್ರ, ಸರಿಯಾಗಿ ಮಳೆ ಇಲ್ಲದೆ ನೀರಿನ ಅಭಾವ ಆಗಿರುವುದರಿಂದ ರಾಜ್ಯದಲ್ಲಿ ಬರ ಸೃಷ್ಟಿಯಾಗಿದೆ. ಈ ವಿಚಾರದ ಬಗ್ಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಅನ್ನ ಭಾಗ್ಯ ಯೋಜನೆಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಜಗಳ ಶುರುವಾಗಿದೆ. ಇದನ್ನು ಓದಿ..Toyota: ಎಲೆಕ್ಟ್ರಿಕ್ ಕಾರ್ ಗಳಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಟೊಯೋಟಾ- ಇಷ್ಟು ವರ್ಷ ಆದಮೇಲೆ ಪೆಟ್ರೋಲ್, ಡೀಸೆಲ್ ಕಾರ್ ಗಳು ಸಿಗಲ್ಲ. ಯಾವಾಗ ಅಂತ್ಯ ಗೊತ್ತೆ?
ಎಲೆಕ್ಷನ್ ವೇಳೆ ಕೊಟ್ಟಿದ್ದ ಮಾತಿನ ಪ್ರಕಾರ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದು, ಅದನ್ನೆಲ್ಲ ಉಳಿಸಿಕೊಳ್ಳುವುದು ಈಗ ದೊಡ್ಡ ಸವಾಲು ಆಗಿದೆ..ಮುಂಬರುವ ಲೋಕಸಭಾ ಎಲೆಕ್ಷನ್ ನಲ್ಲಿ ಗೆಲ್ಲಬೇಕು ಎಂದು ಕಾಂಗ್ರೆಸ್ ಸರ್ಕಾರ ಯೋಜನೆ ಹಾಕಿಕೊಂಡಿದೆ, 20 ಸೀಟ್ ಗೆದ್ದು ಬಹುಮತ ಸಾಧಿಸಬೇಕು ಎಂದು ಕಾಂಗ್ರೆಸ್ ಪ್ಲಾನ್ ಮಾಡಿದ್ದು, ಇದಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Honda Shine: ದೇಶದಲ್ಲಿದೆ ಡಿಮಾಂಡ್ ಹೊಂದಿರುವ 2023ರ ಹೋಂಡಾ ಶೈನ್ ಬಿಡುಗಡೆ. ವಿಶೇಷತೆ ಬೆಲೆ ಪ್ರಮುಖ ಅಂಶಗಳು.
Comments are closed.