ಮನೆಯ ಅಂಗಳದಲ್ಲಿ ಈ ಗಿಡ ಇದ್ದರೆ ಸಾಕು ಯಾವ ವೈದ್ಯರ ಅವಶ್ಯಕತೆ ಇರುವುದಿಲ್ಲ. ಯಾವುದು ಹಾಗು ಹೇಗೆ ಬಳಸಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಕಷ್ಟು ಕಾಯಿಲೆಗಳಿಗೆ ಅನೇಕರೀತಿಯ ಔಷಧಿಗಳು ತಯಾರಾಗುತ್ತಲೇ ಇರುತ್ತವೆ. ಪ್ರತಿ ಬಾರಿ ಹೊಸ ಕಾಯಿಲೆ ಕಾಣಿಸಿಕೊಂಡಾಗ ಅದರ ವಿರುದ್ಧ ಹೋರಾಡಲು ಔಷಧಿಯನ್ನು ಕಂಡು ಹಿಡಿಯಲಾಗುತ್ತದೆ. ಇನ್ನು ಆಯುರ್ವೇದದ ಔಷಧಿಗಳಲ್ಲಿ ಹೆಚ್ಚಾಗಿ ಗಿಡಮೂಲಿಕೆಗಳನ್ನು ಬಳಸಲಾಗುತ್ತದೆ. ಆದ್ದರಿಂದ ಗಿಡಮೂಲಿಕೆಗಳು ಕೂಡ ಔಷಧೀಯ ಗುಣಗಳನ್ನು ಹೊಂದಿದೆ ಎಂದು ತಿಳಿಯಬಹುದು. ಇನ್ನೂ ನಮ್ಮ ಮನೆ ಸುತ್ತಮುತ್ತ ಬೆಳೆಯುವ ಗಿಡಗಳಲ್ಲಿ ಕೂಡ ಕೆಲವು ಔಷಧೀಯ ಗುಣಗಳನ್ನು ಕೂಡ ಹೊಂದಿರುತ್ತವೆ.

ಇದೀಗ ವಿಷಯಕ್ಕೆ ಬರುವುದಾದರೆ ನಾವು ಹೇಳಲು ಹೊರಟಿರುವ ಈ ಒಂದು ಗಿಡ ನಿಮ್ಮ ಮನೆ ಮುಂದೆ ಇದ್ದರೆ ಸಾಕು. ನಿಮಗೆ ಯಾವುದೇ ರೀತಿಯ ಆಸ್ಪತ್ರೆ ಅಥವಾ ವೈದ್ಯರ ಅವಶ್ಯಕತೆ ಬಿಡುವುದಿಲ್ಲವಂತೆ. ಹಾಗಾದರೆ ಆ ಗಿಡ ಯಾವುದು? ಅದರ ಪ್ರಯೋಜನ ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಇನ್ನೂ ವಿಶೇಷವೆಂದರೆ ಈ ಗಿಡದ ಎಲೆ ಮಾತ್ರವಲ್ಲದೆ ಕಾಂಡ, ಬೀಜ, ಬೇರಿನಲ್ಲಿಯೂ ಕೂಡ ಔಷಧೀಯ ಗುಣಗಳಿವೆ ಅಂತೆ. ಇನ್ನು ಆಗಿಲ್ಲ ಮತ್ಯಾವುದು ಅಲ್ಲ ಆಡುಸೋಗೆ ಗಿಡ. ಇದು ಸುಮಾರು ಆರರಿಂದ ಒಂಬತ್ತು ಅಡಿ ಎತ್ತರ ಬೆಳೆಯುತ್ತದೆ. ಇನ್ನು ಇದು ಬಾಯಿಗೆ ಕಹಿ ಎನಿಸಿದರೂ ಕೂಡ ಇದರಿಂದ ಪಿತ್ತ, ವಾತ, ಶೀತ, ಕಫ, ಕೆಮ್ಮು, ದಮ್ಮು, ಚರ್ಮ ವ್ಯಾಧಿ, ರಕ್ತ, ಮೂತ್ರ ಸಮಸ್ಯೆ, ಗಂಟಲು, ಮೂಗು ಹಾಗೂ ಉಸಿರಾಟದ ಸಮಸ್ಯೆಗಳನ್ನು ಕೂಡ ದೂರವಿಡುತ್ತದೆ.

ಕೆಲವು ಆಡುಸೋಗೆ ಗಿಡದ ಎಲೆಗಳನ್ನು ಒಂದು ಮಣ್ಣಿನ ಮಡಿಕೆಯಲ್ಲಿ ಹಾಗೆಯೇ ಅದಕ್ಕೆ 200ml ನೀರು, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಮೆಣಸಿನ ಕಾಳು, ಚಿಟಿಕೆಯಷ್ಟು ಅರಿಶಿಣ, ಸ್ವಲ್ಪ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅದನ್ನು ಚೆನ್ನಾಗಿ ಕುದಿಸಿ. ನಂತರ ಅದು ಕಷಾಯ ರೀತಿಯಲ್ಲಿ ಆದ ನಂತರ ಅದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸೇವಿಸಿದರೆ ಕೆಮ್ಮು, ನೆಗಡಿ, ಕಫ, ಪಿತ್ತ, ಗಂಟಲು ಹಾಗೂ ಉಸಿರಾಟದ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಇನ್ನು ಕೆಲವು ಆಡುಸೋಗೆ ಎಲೆ ಹಾಗೂ ಕೆಲ ಅಮೃತಬಳ್ಳಿಯ ಎಲೆಗಳನ್ನು ತೆಗೆದುಕೊಂಡು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಅವುಗಳನ್ನು ಪುಡಿಮಾಡಿಟ್ಟುಕೊಳ್ಳಿ. ನಂತರ ಅದನ್ನು 200 ಮಿಲಿ ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ ಒಂದು ಚಮಚ ಜೇಷ್ಠಮಧು, ಸ್ವಲ್ಪ ಶುಂಠಿ ಹಾಕಿ ಕುದಿಸಿ. ಚೆನ್ನಾಗಿ ಕುದ್ದು ಉಗುರು ಬೆಚ್ಚಗೆ ಇದ್ದಾಗ ಅದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿ ಪ್ರತಿನಿತ್ಯ ಸೇವಿಸಿ. ಇದರಿಂದ ಕೂಡ ಪಿತ್ತ, ಕಫ, ಮೂಗು ಗಂಟಲಿನ ಸಮಸ್ಯೆ, ನೆಗಡಿ ಕೆಮ್ಮು ಇತ್ಯಾದಿ ಕಾಯಿಲೆಗಳು ಮಾಯವಾಗುತ್ತವೆ. ಅದೇ ರೀತಿಯೇ ಒಂದು ಚಮಚ ಆಡುಸೋಗೆ ಎಲೆಗಳ ರಸ, ಒಂದು ಚಮಚ ತುಳಸಿ ಎಲೆ ರಸ, ಒಂದು ಚಮಚ ಜೇನುತುಪ್ಪ ಬೆರೆಸಿ ಮಕ್ಕಳಿಗೆ ಅರ್ಧ ಚಮಚದಷ್ಟು ಅದನ್ನು ಕುಡಿಸಿದರೆ ಅದು ಅವರ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಅದೇ ರೀತಿ ಕೆಲ ಆಡುಸೋಗೆ ಎಲೆಗಳು, ಎರಡು ಚಕ್ಕೆ, ಒಂದು ಚಮಚದಷ್ಟು ಜೇಷ್ಠಮಧು ಹಾಕಿ ಕಷಾಯ ರೀತಿಯ ಮಾಡಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿ. ಈ ರೀತಿ ಮಾಡುವುದರಿಂದ ಹೃದಯ ಆರೋಗ್ಯವಾಗಿದ್ದು ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಸಮೀಪ ಹಾಯುವುದಿಲ್ಲ. ಒಂದು ಚಮಚ ಆಡುಸೋಗೆ ಎಲೆಯ ರಸ, ಒಂದು ಚಮಚ ಗರಿಕೆ ಹುಲ್ಲಿನ ರಸ, ಅರ್ಧ ಚಮಚ ಹವಳ ಬಸ್ಮ, ಒಂದು ಚಮಚ ಜೇನು ತುಪ್ಪ ಹಾಕಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ರಕ್ತಸ್ರಾವ ಕಡಿಮೆಯಾಗುತ್ತದೆ.

ಇನ್ನು ಮಕ್ಕಳಿಗೆ ಮೂತ್ರದ ಸಮಸ್ಯೆ ಎದುರಾದಾಗ ಆಡುಸೋಗೆ ಎಲೆಗಳನ್ನು ಹರಳೆಣ್ಣೆಯಲ್ಲಿ ಎದ್ದಿ ಬೆಂಕಿಯಲ್ಲಿ ಬಿಸಿಮಾಡಿ ನಾ-ಭಿಯ ಸುತ್ತಲೂ ಹಚ್ಚುವುದರಿಂದ ಅಂತಹ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ. ನೋಡಿದ್ರಲ್ಲ ಸ್ನೇಹಿತರೆ ಈ ಆಡುಸೋಗೆ ಗಿಡ ಮನೆ ಮುಂದೆ ಇದ್ದರೆ ಎಷ್ಟೆಲ್ಲ ಪ್ರಯೋಜನ ಇದೆ ಎಂದು. ಹಾಗಾದರೆ ನೀವು ಇವತ್ತು ಆ ಗಿಡವನ್ನು ತಂದು ನಿಮ್ಮ ಮನೆ ಮುಂದೆ ಹಚ್ಚಿ ಅದರ ಸದುಪಯೋಗ ಪಡೆದುಕೊಳ್ಳುತ್ತೀರಿ ಎಂದು ನಾವು ಆಶಿಸುತ್ತೇವೆ.

Comments are closed.