Kannada Actress: ನನಗೆ ಕನ್ನಡ ಮಾತ್ರ ಬರೋದು ಅಂತ ಹೇಳಿ, 5 ಭಾಷೆಯಲ್ಲಿ ನಟಿಸಿ, ದೇಶವನ್ನೇ ಅಲುಗಾಡಿಸುವ ಶಕ್ತಿ ಇರುವ ನಟಿ ಯಾರು ಗೊತ್ತೇ??

Kannada Actress: ಇತ್ತೀಚಿನ ವರ್ಷಗಳಲ್ಲಿ ನಮ್ಮ ಕನ್ನಡದವರು ಕೂಡ ಕನ್ನಡ ಭಾಷೆ ಬಿಟ್ಟು, ಬೇರೆ ಭಾಷೆಗಳಲ್ಲಿ ಹೀರೋಯಿನ್ ಆಗಿ ಗುರುತಿಸಿಕೊಂಡು, ಕನ್ನಡ ಮಾತಾಡೋದಕ್ಕೆ ಕಷ್ಟ ಪಡುತ್ತಾರೆ
ಕನ್ನಡ ಅಂದ್ರೆ ಕಡೆಗಣಿಸೋ ಬಹಳಷ್ಟು ನಾಯಕಿಯರು ಇದ್ದಾರೆ. ಅವರೆಲ್ಲರೂ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುವುದುಂಟು. ಆದರೆ ಇಲ್ಲೊಬ್ಬ ನಟಿ, ತನಗೆ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಬರೋದಿಲ್ಲ ಎಂದು ಹೇಳಿ, 5 ಭಾಷೆಗಳಲ್ಲಿ ನಟಿಸಿ, ಎಲ್ಲಾ ಭಾಷೆಗಳಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಈ ನಟಿ ಯಾರು ಗೊತ್ತಾ?

nithya menon kannada film news | Kannada Actress: ನನಗೆ ಕನ್ನಡ ಮಾತ್ರ ಬರೋದು ಅಂತ ಹೇಳಿ, 5 ಭಾಷೆಯಲ್ಲಿ ನಟಿಸಿ, ದೇಶವನ್ನೇ ಅಲುಗಾಡಿಸುವ ಶಕ್ತಿ ಇರುವ ನಟಿ ಯಾರು ಗೊತ್ತೇ??
Kannada Actress: ನನಗೆ ಕನ್ನಡ ಮಾತ್ರ ಬರೋದು ಅಂತ ಹೇಳಿ, 5 ಭಾಷೆಯಲ್ಲಿ ನಟಿಸಿ, ದೇಶವನ್ನೇ ಅಲುಗಾಡಿಸುವ ಶಕ್ತಿ ಇರುವ ನಟಿ ಯಾರು ಗೊತ್ತೇ?? 2

ಈ ನಟಿಯ ಹೆಸರು ಕೇಳಿದರು, ಇವರು ಬಹುಶಃ ಕೇರಳದವರೇ ಇರಬೇಕು ಎಂದು ಅನ್ನಿಸುವುದು ಸಹಜ, ಆದರೆ ಈಕೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಹುಡುಗಿ, ಅಚ್ಚುಕಟ್ಟಾಗಿ ಕನ್ನಡದಲ್ಲಿ ಮಾತನಾಡುವ ಹುಡುಗಿ, ನಾವು ಹೇಳುತ್ತಿರುವುದು ಮತ್ಯಾರ ಬಗ್ಗೆಯೂ ಅಲ್ಲ, ಖ್ಯಾತ ನಟಿ ನಿತ್ಯ ಮೆನನ್ ಅವರ ಬಗ್ಗೆ. ಇವರು ಇಂದು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾ ಹಾಗೂ ವೆಬ್ ಸೀರೀಸ್ ಗಳಲ್ಲಿ ನಟಿಸಿ, ಸೈ ಎನ್ನಿಸಿಕೊಂಡಿದ್ದಾರೆ. ಇದನ್ನು ಓದಿ..Allu Arjun: ಮಕ್ಕಳಿಗೆ ಒಳ್ಳೆಯದಾಗಲಿ ಎಂದು 150 ಮಕ್ಕಳಿಗೆ ಶಿಕ್ಷ ನೀಡುತ್ತಿರುವ ಲಾರೆನ್ಸ್ ಬಗ್ಗೆ ಅಲ್ಲೂ ಅರ್ಜುನ್ ಹೇಳಿದ್ದೆ ಬೇರೆ. ತಾನು ಮಾಡಿಲ್ಲ, ಮಾಡಿದವರ ಬಗ್ಗೆ ಹೇಳಿದ್ದೇನು ಗೊತ್ತೇ?

ನಿತ್ಯ ಮೆನನ್ ಅವರಿಗೆ ಎಲ್ಲಾ ಭಾಷೆಯಲ್ಲೂ ದೊಡ್ಡ ಅಭಿಮಾನಿ ಬಳಗ ಇದೆ, ತಾವು ನಟಿಸುವ ಎಲ್ಲಾ ಭಾಷೆಗಳಲ್ಲೂ ತಾವೇ ಡಬ್ ಮಾಡುವ ಇವರಿಗೆ ಓದೋಕೆ ಬರೆಯೋಕೆ ಬರುವುದು ಕನ್ನಡ ಭಾಷೆ ಮಾತ್ರವಂತೆ. ಇದನ್ನು ಬಹಳ ಹೆಮ್ಮೆ ಇಂದ ಹೇಳಿ, ನಾನು ಬೆಂಗಳೂರನ್ನು, ಕರ್ನಾಟಕವನ್ನು ಬಿಟ್ಟು ಹೋಗುವುದಿಲ್ಲ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಿತ್ಯ ಮೆನನ್ ಅವರು ನಟನೆ ಶುರು ಮಾಡಿದ್ದು ಕೂಡ ಕನ್ನಡದಲ್ಲಿಯೇ, 7 ಓ ಕ್ಲಾಕ್ ಎನ್ನುವ ಸಿನಿಮಾದಲ್ಲಿ ಮೊದಲ ಸಾರಿ ನಟಿಸಿದರು.

ನಂತರ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ನಟಿಸಿ ಯಶಸ್ಸು ಪಡೆದರು, ಬಳಿಕ ಕನ್ನಡದಲ್ಲಿ ಹೀರೋಯಿನ್ ಆಗಿ ನಟಿಸಿದ್ದು ಮೈನಾ ಸಿನಿಮಾ ಮೂಲಕ, ಅದಾದ ನಂತರ ಕಿಚ್ಚ ಸುದೀಪ್ ಅವರ ಜೊತೆಗೆ ಕೋಟಿಗೊಬ್ಬ2 ಸಿನಿಮಾದಲ್ಲಿ ನಟಿಸಿದರು. ಕನ್ನಡವನ್ನೇ ಮರೆತಿರುವವದ ಮಧ್ಯೆ ನಿತ್ಯ ಅವರು ಕನ್ನಡದಲ್ಲಿ ಸ್ಪಷ್ಠವಾಗಿ ಮಾತನಾಡುವುದನ್ನು ನೋಡಿದರೆ, ಇವರು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಲಿ ಎನ್ನುವುದೇ ಅಭಿಮಾನಿಗಳ ಆಸೆ. ಇದನ್ನು ಓದಿ..Business Idea: ಒಂದು ರೂಪಾಯಿ ಕೂಡ ಬಂಡವಾಳವಿಲ್ಲದೆ ಆರಂಭಿಸಿ, ನಂತರ ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ? ಆರಂಭಿಸಲು ಏನು ಮಾಡ್ಬೇಕು ಗೊತ್ತೇ?

Comments are closed.