News from ಕನ್ನಡಿಗರು

ಅಸಲಿಗೆ ನಿಜವಾಗಲೂ ಯಾವಾಗಿನಿಂದ ಆರಂಭವಾಗುತ್ತೆ ಕನ್ನಡದ ಬಿಗ್ ಬಾಸ್ ಸೀಸನ್ 9.

21

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇಡೀ ಭಾರತೀಯ ಕಿರುತೆರೆ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ ದೊಡ್ಡ ಹಾಗೂ ಅತ್ಯಂತ ಶ್ರೀಮಂತ ರಿಯಾಲಿಟಿ ಸುವ ಎಂದರೆ ಅದು ಬಿಗ್ಬಾಸ್. ಬಿಗ್ ಬಾಸ್ ರಿಯಾಲಿಟಿ ಶೋ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಹಿಂದಿ ತಮಿಳು ತೆಲುಗು ಹಾಗೂ ಮಲಯಾಳಂನಲ್ಲಿ ಕೂಡ ಈಗಾಗಲೇ ಪ್ರಸಾರವಾಗುತ್ತಿದೆ. ಕನ್ನಡದಲ್ಲಿ ಪ್ರಾರಂಭದಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಕಳೆದ ಬಾರಿಯ ಬಿಗ್ ಬಾಸ್ ಸೀಸನ್ ಕುರಿತಂತೆ ಹೇಳುವುದಾದರೆ ಒಂದು ಬಾರಿ ಅರ್ಧಕ್ಕೆ ನಿಂತಿದ್ದರು ಕೂಡ ಮತ್ತೆ ಬಿಗ್ ಬಾಸ್ ಕನ್ನಡ ಸೀಸನ್ 8 ಪುಟಿದೆದ್ದು ನಿಂತ ರೀತಿ ನೋಡಿದರೆ ನಿಜಕ್ಕೂ ಕೂಡ ಖುಷಿಯಾಗುತ್ತೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಸೀಸನ್ ಯಾವಾಗ ಪ್ರಾರಂಭವಾಗುತ್ತದೆ ಎಂಬುದಾಗಿ ಪ್ರತಿಯೊಬ್ಬ ಕಿರುತೆರೆಯ ರಿಯಾಲಿಟಿ ಶೋ ಪ್ರೇಕ್ಷಕ ಕಾಯುತ್ತಿದ್ದಾನೆ. ಸದ್ಯಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ವಿಕ್ರಾಂತ್ ರೋಣ ಸಿನಿಮಾ ಇದೇ ಜುಲೈ 28ರಂದು ಬಹು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು ಇದೇ ಸಿನಿಮಾದ ಪ್ರಚಾರಕ್ಕಾಗಿ ಸುದೀಪ್ ರವರು ಈಗ ದೇಶದ ಉದ್ದಗಲಕ್ಕೂ ಕೂಡ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಅವರ ಡೇಟ್ಸ್ ಹೊಂದಾಣಿಕೆ ಆಗೋದು ತುಂಬಾನೇ ಕಷ್ಟವಾಗಿಬಿಟ್ಟಿದೆ. ಅದಕ್ಕಾಗಿಯೇ ಈಗಾಗಲೇ ಶುರು ಆಗಬೇಕಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 9 ಇನ್ನೂ ಶುರುವಾಗಿಲ್ಲ.

ಹೀಗಾಗಿ ಜುಲೈ ಮುಗಿಯೋವರೆಗೂ ಕಿಚ್ಚನನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕಾಗಿ ಹಿಡಿಯುವುದು ಕಷ್ಟ. ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾದ ನಂತರ ಕಿಚ್ಚ ಸುದೀಪ್ ರವರು ತಮ್ಮದೇ ನಿರ್ಮಾಣದಲ್ಲಿ ಮೂಡಿಬರಲಿರುವ ಬಿಲ್ಲಾ ರಂಗ ಭಾಷ ಸಿನಿಮಾದಲ್ಲಿ ನಟಿಸಲಿದ್ದಾರೆ. ಹೀಗಾಗಿ ಡೇಟ್ಸ್ ಕುರಿತಂತೆ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಕಿಚ್ಚ ಸುದೀಪ್ ರವರು ಸುಲಭವಾಗಿಯೇ ಬಿಗ್ಬಾಸ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬಹುದಾಗಿದೆ ಹೀಗಾಗಿ ಬಿಗ್ ಬಾಸ್ ಕನ್ನಡ ಸೀಸನ್ 9 ಅಕ್ಟೋಬರ್ ತಿಂಗಳಿಂದ ಪ್ರಾರಂಭವಾಗಲಿದೆ ಎಂಬುದಾಗಿ ಎಲ್ಲಾ ಕಡೆಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಭಾಗವಹಿಸಲಿರುವ ಸ್ಪರ್ಧಿಗಳ ಕುರಿತಂತೆ ಕೂಡ ಅತಿಶೀಘ್ರದಲ್ಲೇ ಮಾಹಿತಿಗಳು ಹೊರಬೀಳಲಿವೆ.

Leave A Reply

Your email address will not be published.