ಇಂಡೋನೆಷಿಯಾದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಹಿಂದೂ ಮಂದಿರ – ಈ ದೇಗುಲದ ವಿಶೇಷತೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹಿಂದೂ ಧರ್ಮ ಸನಾತನ ಧರ್ಮವಾಗಿದೆ. ಭಾರತ ಮಾತ್ರವಲ್ಲದೇ ಜಗತ್ತಿನ ಮೂಲೆಗೂ ತನ್ನ ಸೊಗಡನ್ನ ಪಸರಿಸಿತ್ತು. ಸದ್ಯ ಇಂಡೋನೆಷಿಯಾದಲ್ಲಿ ಅತ್ಯಂತ ಪ್ರಾಚೀನ ಅಂದರೇ 9 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಅತ್ಯಂತ ಪುರಾತನ ಹಿಂದೂ ದೇಗುಲ ಇದೆ. ಈ ದೇವಸ್ಥಾನವನ್ನು ಕೋಟ್ಯಾಂತರ ಕಪ್ಪು ಕಲ್ಲುಗಳಿಂದ ನಿರ್ಮಿಸಲಾಗಿದೆ. ಇಷ್ಟೊಂದು ಕೋಟಿಗಟ್ಟಲೇ ಕಲ್ಲುಗಳನ್ನ ಹೇಗೆ ಹೊಂದಿಸಲಾಯಿತು ಎಂಬ ಪ್ರಶ್ನೆಗೆ ಅಲ್ಲಿನ ಗೈಡ್ ಕೊಟ್ಟ ಉತ್ತರ ನಿಜಕ್ಕೂ ಕುತೂಹಲಕಾರಿಯಾಗಿತ್ತು.

ಹೌದು ಅತ್ಯಂತ ಬೃಹದಾಕಾರ ದೇವಸ್ಥಾನವನ್ನು ನಿರ್ಮಿಸಲು ಕೋಟಿ ಸಂಖ್ಯೆಯ ಕಲ್ಲುಗಳನ್ನು ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ನದಿಯಿಂದ ತರಲಾಗಿತ್ತಂತೆ. ಅಂದರೇ ಅಷ್ಟು ಸಂಖ್ಯೆಯ ಕಲ್ಲುಗಳನ್ನ ನದಿ ಮೂಲಕ ತಂದು ನಿರ್ಮಿಸಿದ್ದಾರೆಂದರೇ, ನಮ್ಮ ಪೂರ್ವಜರು ತಂತ್ರಜ್ಞಾನದಲ್ಲಿ ಎಷ್ಟು ಮುಂದುವರೆದಿದ್ದರು ಎಂಬುದು ತಿಳಿಯುತ್ತದೆ. ಇನ್ನು ದೇವಾಲಯ ನಿರ್ಮಾಣದಲ್ಲಿ ಎಲ್ಲಿಯೂ ಗಾರೆ,ಮರಳನ್ನ ಬಳಸಿರುವ ಕುರುಹು ಸಿಗುತ್ತಿಲ್ಲ. ಕಲ್ಲುಗಳು ಒಂದಕ್ಕೊಂದು ಇಂಟರ್ ಲಾಕಿಂಗ್ ಬಳಸಿ ನಿರ್ಮಿಸಲಾಗಿದೆ. ದೇವಸ್ಥಾನದ ಗೋಪುರಗಳು ಸಾಕಷ್ಟು ಎತ್ತರದಲ್ಲಿದ್ದು, ಸುತ್ತಲೂ 47 ಮೀಟರ್ ಇರುವ ಗೋಪುರ ಇದೆ. ಅದಲ್ಲದೇ ದೇವಸ್ಥಾನದ ಪ್ರಾಂಗಣದಲ್ಲಿ 250 ಕ್ಕೂ ಹೆಚ್ಚು ಚಿಕ್ಕ ಚಿಕ್ಕ ದೇವಸ್ಥಾನಗಳು ಇವೆ.

ಇನ್ನೂ ಈ ದೇವಾಲಯದ ವಿಶೇಷವೇಂದರೇ ಹಿಂದೂ ಧರ್ಮದ ದೇವರುಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ ಆದಿಯಾಗಿ ಎಲ್ಲಾ ದೇವರುಗಳ ವಿಗ್ರಹಗಳು ಸಹ ಇವೆ. ಇಂಡೋನೇಷಿಯಾದ ಯೋಗಕರ್ತಾ ಎಂಬಲ್ಲಿ ಈ ದೇವಸ್ಥಾನ ಇಂದಿಗೂ ಭಕ್ತರನ್ನ ಸೆಳೆಯುತ್ತಿದೆ. ದೇವಾಲಯದ ಗೋಡೆಗಳಲ್ಲಿ ರಾಮಾಯಣ,ಮಹಾಭಾರತದ ಕಥನಗಳನ್ನ ಸಾರುವ ಕಲ್ಲಿನ ಕೆತ್ತನೆಗಳನ್ನು ಸಹ ವೀಕ್ಷಿಸಬಹುದು. ವಿಷ್ಣು ಪುರಾಣ, ಹನುಮಾನ್ ಚಾಲಿಸೋ ಸಹ ಇರುವುದನ್ನ ನಾವು ನೋಡಬಹುದಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.