ಬಿಗ್ ನ್ಯೂಸ್: ಧನ್ವೀರ್ ಪ್ರಕರಣದಲ್ಲಿ ನಾಟಕೀಯ ತಿರುವು, ಇದ್ದಕ್ಕಿದ್ದ ಹಾಗೆ ಮಾಧ್ಯಮದ ಮುಂದೆ ಹುಡುಗ ಹೇಳಿದ್ದೇನು ಗೊತ್ತೇ? ಇಷ್ಟಕ್ಕೆ ಇವೆಲ್ಲ ಬೇಕಿತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಒಂದು ಸುದ್ದಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಆದರೆ ಒಂದು ವಿಷಯವಂತೂ ಸತ್ಯ ಇದು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಒಳ್ಳೆಯದಲ್ಲ. ಹೌದು ನಾವು ಮಾತನಾಡುತ್ತಿರುವುದು ನಟ ಧನ್ವೀರ್ ರವರ ಪ್ರಕರಣದ ಕುರಿತಂತೆ. ಬಜಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯುವನಟ ಧನ್ವೀರ್ ಈಗ ಸದ್ಯಕ್ಕೆ ಬೈ ಟು ಲವ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಬೈಟು ಲವ್ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ನಟ ಧನ್ವೀರ್ ಅವರು ಮಾಡಿಕೊಂಡಿರುವ ಅವಾಂತರ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೌದು ಗುರುವಾರ ರಾತ್ರಿ ಅನುಪಮ ಚಿತ್ರಮಂದಿರದಲ್ಲಿ ಚಂದ್ರಶೇಖರ್ ಎನ್ನುವ ಅಭಿಮಾನಿಯೊಬ್ಬ ಧನ್ವೀರ್ ಅವರ ಬಳಿ ಸೆಲ್ಫಿಗಾಗಿ ಕೇಳಿದ್ದಾನೆ. ಆಗ ಧನ್ವೀರ್ ಅವರು ಆಮೇಲೆ ಕೊಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಅದಕ್ಕೆ ಚಂದ್ರಶೇಖರ್ ಎನ್ನುವಾತ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ. ನಂತರ ಆತನನ್ನು ಚಿತ್ರಮಂದಿರದಲ್ಲಿ ಥಳಿಸಿದ್ದಾರೆ ಎನ್ನುವುದಾಗಿ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ದನ್ವೀರ್ ಅವರ ವಿರುದ್ಧ ದೂರನ್ನು ದಾಖಲಿಸಿದ್ದ. ಈ ಕುರಿತಂತೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಧನ್ವೀರ್ ಅವರನ್ನು ಸುತ್ತುವರಿದು ಅಭಿಮಾನಿಗಳು ಪ್ರಶ್ನಿಸಿದ್ದು ಕೂಡ ವಿಡಿಯೋ ವೈರಲ್ ಆಗಿತ್ತು. ಆದರೆ ಈಗ ಕಹಾನಿ ಮೇ ಟ್ವಿಸ್ಟ್ ಬಂದಿದೆ.

dhanvir darshan | ಬಿಗ್ ನ್ಯೂಸ್: ಧನ್ವೀರ್ ಪ್ರಕರಣದಲ್ಲಿ ನಾಟಕೀಯ ತಿರುವು, ಇದ್ದಕ್ಕಿದ್ದ ಹಾಗೆ ಮಾಧ್ಯಮದ ಮುಂದೆ ಹುಡುಗ ಹೇಳಿದ್ದೇನು ಗೊತ್ತೇ? ಇಷ್ಟಕ್ಕೆ ಇವೆಲ್ಲ ಬೇಕಿತ್ತಾ??
ಬಿಗ್ ನ್ಯೂಸ್: ಧನ್ವೀರ್ ಪ್ರಕರಣದಲ್ಲಿ ನಾಟಕೀಯ ತಿರುವು, ಇದ್ದಕ್ಕಿದ್ದ ಹಾಗೆ ಮಾಧ್ಯಮದ ಮುಂದೆ ಹುಡುಗ ಹೇಳಿದ್ದೇನು ಗೊತ್ತೇ? ಇಷ್ಟಕ್ಕೆ ಇವೆಲ್ಲ ಬೇಕಿತ್ತಾ?? 2

ಹೌದು ಅದೇ ದೂರು ನೀಡಿರುವ ಚಂದ್ರಶೇಖರ್ ಎನ್ನುವಾತ ಧನ್ವೀರ್ ಅವರ ಅಭಿಮಾನಿಗಳ ಸಂಘದ ಅಧ್ಯಕ್ಷ ನೊಂದಿಗೆ ವಿಡಿಯೋ ಒಂದರಲ್ಲಿ ಕಂಡುಬಂದಿದ್ದಾನೆ. ಕೇವಲ ಇಷ್ಟು ಮಾತ್ರವಲ್ಲದೆ ಆ ಸಂದರ್ಭದಲ್ಲಿ ನಾನು ಕುಡಿದ ಮತ್ತಿನಲ್ಲಿದ್ದ ಅಲ್ಲಿ ಏನು ನಡೆಯಿತು ಎಂದು ನನಗೆ ತಿಳಿದಿಲ್ಲ ಎಂಬುದಾಗಿ ಕೂಡಾ ವಿಡಿಯೋದಲ್ಲಿ ಗೊಂದಲಮಯವಾಗಿ ಹೇಳಿದ್ದಾನೆ. ಇದರಿಂದಾಗಿ ಅವರಿಗೂ ಅವರ ಸಿನಿಮಾಗೂ ಕೆಟ್ಟ ಹೆಸರು ಬರುತ್ತದೆ ನನಗೂ ಕೆಟ್ಟ ಹೆಸರು ಬರುತ್ತಿದೆ ಇದನ್ನು ಇಲ್ಲಿಗೆ ಮುಗಿಸೋಣ ಅವರು ಕೂಡ ಕ್ಷಮೆ ಕೇಳಿದ್ದಾರೆ ನಾನು ಕೂಡ ಕ್ಷಮೆ ಕೇಳುತ್ತಿದ್ದೇನೆ ಎಂಬುದಾಗಿ ಹೇಳಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ಧನ್ವೀರ್ ಅವರು ಕೆಲವರು ಚಿತ್ರರಂಗದಲ್ಲಿ ರೌ’ಡಿಸಂ ಮಾಡಲು ಹೀಗೆ ಮಾಡುತ್ತಿದ್ದಾರೆ ಎಂಬುದಾಗಿ ಪ್ರತಿಕ್ರಿಯಿಸಿದ್ದರು. ಒಂದೇ ಸಮನೆ ಇಂತಹ ತಿರುವನ್ನು ಪಡೆದ ಈ ಪ್ರಕರಣದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.