ಮೊದಲ ಪಂದ್ಯದಲ್ಲಿ ಭರ್ಜರಿ ರನ್ ಔಟ್ ಮಾಡಿದ ಮ್ಯಾಕ್ಸ್ವೆಲ್. ವಿಡಿಯೋ ಅಂತೂ ಫುಲ್ ವೈರಲ್. ಹೇಗಿದೆ ಗೊತ್ತಾ ಮ್ಯಾಕ್ಸ್ವೆಲ್ ರನ್ ಔಟ್ ಮಾಡಿದ್ದು??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿ ಟೂರ್ನಮೆಂಟಿನ ಮೂರನೇ ಗೆಲುವನ್ನು ದಾಖಲಿಸಿದೆ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿದ್ದು ತಂಡದ ಪ್ರದರ್ಶನದಿಂದಾಗಿ ಅಭಿಮಾನಿಗಳು ಕೂಡ ಫುಲ್ ಹ್ಯಾಪಿ ಆಗಿದ್ದಾರೆ.

ನಿನ್ನೆ ನಡೆದಿರುವ ಪಂದ್ಯಾಟವು ಕೂಡ ಹಲವಾರು ವಿಚಾರಗಳಿಗಾಗಿ ಸುದ್ದಿಯಾಗಿದೆ. ಫಾರ್ಮಿಗೆ ಮರಳಿದ್ದ ಸಿರಾಜ್ ರವರು ತಂಡದಲ್ಲಿ ದುಬಾರಿ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರರು 50 ರನ್ನುಗಳ ಜೊತೆಯಾಟವನ್ನು ನೀಡಿದರೂ ಕೂಡ ನಂತರದ ಸಮಯದಲ್ಲಿ ತಂಡ ತರಗೆಲೆಯಂತೆ ಕುಸಿದುಬಿದ್ದಿದ್ದಂತೂ ನಿಜ. ನಂತರ ತಂಡದ ಜವಾಬ್ದಾರಿಯನ್ನು ಹೊತ್ತು ಸೂರ್ಯ ಕುಮಾರ್ ಯಾದವ್ ಅವರು 68 ರನ್ನುಗಳ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಾರೆ. ಆದರೂ ಕೂಡ ಕೇವಲ 151 ರನ್ನುಗಳ ಗುರಿಯನ್ನು ಅಷ್ಟೇ ನೀಡಲು ಸಾಧ್ಯವಾಗುತ್ತದೆ. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅನುಜ್ ರಾವತ್ ಹಾಗೂ ವಿರಾಟ್ ಕೊಹ್ಲಿ ರವರು ಉತ್ತಮವಾದ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ಎಸೆತಗಳು ಬಾಕಿ ಉಳಿದಿರುವಂತೆ ಪಂದ್ಯವನ್ನು ಗೆದ್ದು ಬೀಗುವಲ್ಲಿ ಯಶಸ್ವಿಯಾಗುತ್ತದೆ.

ಇನ್ನು ನಿನ್ನೆಯ ಪಂದ್ಯದಲ್ಲಿ ಮೊದಲ ಬಾರಿಗೆ ಸೀಸನ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ರವರು ತಂಡದಲ್ಲಿ ಆಡಿರುತ್ತಾರೆ. ಇನ್ನು ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಔಟಾದ ನಂತರ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಂತಹ ತಿಲಕ್ ವರ್ಮಾ ರವರು ಬ್ಯಾಟಿಂಗ್ ಮಾಡಲು ಬರುತ್ತದೆ. ಆಡಿದ ಮೊದಲ ಎರಡು ಎಸೆತಗಳನ್ನು ಕೂಡ ಡಾಟ್ ಮಾಡಿರುತ್ತಾರೆ. ಹೀಗಾಗಿ ಅವರ ಮೇಲೆ ರನ್ ಗಳಿಸುವ ಒತ್ತಡ ಬಿದ್ದಿರುತ್ತದೆ. ಹೀಗಾಗಿ ಸಿಂಗಲ್ ಪಡೆದುಕೊಳ್ಳಲು ಮೂರನೇ ಎಸೆತದಲ್ಲಿ ಯತ್ನಿಸುತ್ತಾರೆ. ಹಾಗಾದ್ರೆ ಮ್ಯಾಕ್ಸ್ವೆಲ್ ರವರು ಓಡಿಬಂದು ಡೈವ್ ಮಾಡಿ ಅವರನ್ನು ರನೌಟ್ ಮಾಡುತ್ತಾರೆ. ಇದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ನೀವು ಕೂಡ ಈ ವಿಡಿಯೋ ನೋಡಬಹುದಾಗಿದೆ. ಈ ಟಾಪ್ ಕ್ಲಾಸ್ ಫೀಲ್ಡಿಂಗ್ ಮೂಲಕ ಹಾಗೂ ಕೊನೆದಾಗಿ ಬಂದು ಎರಡು ಸಿಕ್ಸರ್ ಗಳನ್ನು ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ ರವರು ತಮ್ಮ ಆಗಮನವನ್ನು ಭರ್ಜರಿಯಾಗಿಯೇ ಸಾರಿದ್ದಾರೆ.

Comments are closed.