ಯುವ ಆಟಗಾರನಿಗೆ ಚಾನ್ಸ್ ನೀಡಿ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆಗೆ ಮುಂದಾದ ಆರ್ಸಿಬಿ. ಸ್ಥಾನ ಪಡೆಯಬಹುದಾದ ಉದಯೋನ್ಮುಖ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸತತ ಎರಡು ಹೀನಾಯ ಸೋಲಿನಿಂದ ಟೂರ್ನಿಯಿಂದಲೇ ಹೊರಬೀಳುವ ಆತಂಕದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಶನಿವಾರ ಟೇಬಲ್ ಟಾಪರ್ ಆಗಿರುವ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಈಗಾಗಲೇ ಆಡಿರುವ ಎಂಟು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಸೋತಿರುವ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡ ಪ್ರಶಸ್ತಿ ಗೆಲ್ಲಲಿರುವ ಫೇವರೇಟ್ ಎನಿಸಿದೆ.

ಆದರೇ ಕಳೆದುಕೊಂಡ ಆತ್ಮವಿಶ್ವಾಸವನ್ನು ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಪುನಃ ಮರಳುವಲ್ಲಿ ಆರ್ಸಿಬಿ ತಂಡ ಚಿಂತಿಸಿದೆ. ಈ ಪಂದ್ಯವನ್ನು ಸೋತರೇ ಆರ್ಸಿಬಿ ತಂಡ ಪ್ಲೇ ಆಫ್ ರೇಸ್ ನಿಂದ ಬಹುತೇಕ ಹೊರಬೀಳುವ ವಾತಾವರಣ ಉಂಟಾಗಲಿದೆ. ಹಾಗಾಗಿ ಈ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಈ ಪಂದ್ಯದಲ್ಲಿ ಎಂದಿನಂತೆ ನಾಯಕ ಫಾಪ್ ಡು ಪ್ಲೇಸಿಸ್ ಜೊತೆಗೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಅವಕಾಶ ಪಡೆದು ಕಳಪೆ ಪ್ರದರ್ಶನ ನೀಡಿದ್ದ ರಜತ್ ಪಾಟೀದಾರ್ ಬದಲಿಗೆ ಆಲ್ ರೌಂಡರ್ ಮಹಿಪಾಲ್ ಲೋಮ್ರೋರ್ ಆಡುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗ ಗಟ್ಟಿಗೊಳ್ಳಲು ಸುಯೇಶ್ ಪ್ರಭುದೇಸಾಯಿ ಬದಲು ಲೆಗ್ ಸ್ಪಿನ್ನರ್ ಕರಣ್ ಶರ್ಮಾ ಅಥವಾ ಆಕಾಶ ದೀಪ್ ಸ್ಥಾನ ಪಡೆಯುವ ಸಾಧ್ಯತೆ ಇದೆ.

rcb gujarath titans 2022 | ಯುವ ಆಟಗಾರನಿಗೆ ಚಾನ್ಸ್ ನೀಡಿ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆಗೆ ಮುಂದಾದ ಆರ್ಸಿಬಿ. ಸ್ಥಾನ ಪಡೆಯಬಹುದಾದ ಉದಯೋನ್ಮುಖ ಆಟಗಾರ ಯಾರು ಗೊತ್ತೇ??
ಯುವ ಆಟಗಾರನಿಗೆ ಚಾನ್ಸ್ ನೀಡಿ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆಗೆ ಮುಂದಾದ ಆರ್ಸಿಬಿ. ಸ್ಥಾನ ಪಡೆಯಬಹುದಾದ ಉದಯೋನ್ಮುಖ ಆಟಗಾರ ಯಾರು ಗೊತ್ತೇ?? 2

ಉಳಿದಂತೆ ಒಂದು ತಂಡವಾಗಿ ಆಡಿದರೇ ಆರ್ಸಿಬಿ ತಂಡ ಗೆಲುವಿನ ಹಳಿಗೆ ಸುಲಭವಾಗಿ ಮರಳುವ ಸಾಧ್ಯತೆ ಇದೆ. ಟಾಪ್ ಆರ್ಡರ್ ಆಗಿರುವ ವಿರಾಟ್, ಡು ಪ್ಲೇಸಿಸ್ ಹಾಗೂ ಮ್ಯಾಕ್ಸ್ವೆಲ್ ಈ ಮೂವರಲ್ಲಿ ಒಬ್ಬರು ಪಂದ್ಯದ ಕೊನೆಯ ತನಕ ಕ್ರೀಸ್ ನಲ್ಲಿರುವುದು ತಂಡದ ಪಾಲಿಗೆ ನಿರ್ಣಾಯಕವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ತಂಡ ಇಂತಿದೆ. – ವಿರಾಟ್ ಕೊಹ್ಲಿ, ಫಾಪ್ ಡು ಪ್ಲೇಸಿಸ್, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್ವೆಲ್, ಶಹಬಾಜ್ ಅಹಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್ವುಡ್, ಮಹಮದ್ ಸಿರಾಜ್,ಸುಯೇಶ್ ಪ್ರಭುದೇಸಾಯಿ.

Comments are closed.