ವಯಸ್ಸು 30 ವರ್ಷ ದಾಟಿದರೂ ಕೂಡ ಇನ್ನೂ ಮದುವೆಯಾಗದಿರುವ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?? ಟಾಪ್ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ಕತ್ರಿನಾ ಕೈಫ್ ಹಾಗೂ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ರವರು ಮದುವೆಯಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳು ಮದುವೆಯಾಗುವುದು ಜಾಸ್ತಿ ಆಗಿಬಿಟ್ಟಿದೆ. ಲಾಕ್ಡೌನ್ ನಂತರದ ದಿನಗಳನ್ನು ಎಲ್ಲರೂ ಸೆಲೆಬ್ರಿಟಿಗಳ ಮದುವೆಯ ಸೀಸನ್ ಎಂಬುದಾಗಿ ಕರೆಯಲು ಪ್ರಾರಂಭಿಸಿದ್ದಾರೆ. ಆದರೆ ಭಾರತೀಯ ಚಿತ್ರರಂಗದಲ್ಲಿ ಕೆಲವೊಂದು ನಟಿಯರು ವಯಸ್ಸು 30 ದಾಟಿದರೂ ಕೂಡ ಇನ್ನೂ ಮದುವೆಯಾಗಿಲ್ಲ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

anushka shetty 1 | ವಯಸ್ಸು 30 ವರ್ಷ ದಾಟಿದರೂ ಕೂಡ ಇನ್ನೂ ಮದುವೆಯಾಗದಿರುವ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?? ಟಾಪ್ ನಟಿಯರು ಯಾರ್ಯಾರು ಗೊತ್ತೇ??
ವಯಸ್ಸು 30 ವರ್ಷ ದಾಟಿದರೂ ಕೂಡ ಇನ್ನೂ ಮದುವೆಯಾಗದಿರುವ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?? ಟಾಪ್ ನಟಿಯರು ಯಾರ್ಯಾರು ಗೊತ್ತೇ?? 5

ಅನುಷ್ಕ ಶೆಟ್ಟಿ; ಕರಾವಳಿ ಮೂಲದ ತೆಲುಗು ಚಿತ್ರರಂಗದ ಸ್ಟಾರ್ ನಟಿಯಾಗಿರುವ ಅನುಷ್ಕಾ ಶೆಟ್ಟಿ ಅವರು ಈಗಾಗಲೇ ದಕ್ಷಿಣ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎನ್ನುವ ಪಟ್ಟಕ್ಕೆ ತಮ್ಮ ಹಕ್ಕನ್ನು ಸಾಧಿಸಿ ಹೋದವರು. ಇವರ ಹಾಗೂ ಪ್ರಭಾಸ್ ರವರ ನಡುವೆ ಹಲವಾರು ಬಾರಿ ಮದುವೆ ಆಗುತ್ತದೆ ಎನ್ನುವ ಗಾಳಿಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಆದರೆ ವಯಸ್ಸು 39 ಆಗಿದ್ದರೂ ಕೂಡ ಅನುಷ್ಕಾ ಶೆಟ್ಟಿ ಅವರು ಇದುವರೆಗೂ ಮದುವೆಯಾಗಿಲ್ಲ.

ತ್ರಿಷಾ; ತಮಿಳು ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ತ್ರಿಷಾ ರವರ ಹೆಸರು ಉದ್ಯಮಿ ವರುಣ್ ಹಾಗೂ ನಾಯಕ ನಟ ರಾಣಾ ರವರ ಜೊತೆಗೆ ಕೇಳಿಬಂದಿತ್ತು. ಆದರೆ ಮದುವೆ ಆಗಲಿಲ್ಲ. ಸದ್ಯಕ್ಕೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ ಮಣಿರತ್ನಂ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಯಸ್ಸು 38 ಆದರೂ ಕೂಡ ಇನ್ನು ಯಾಕೆ ಮದುವೆ ಆಗುತ್ತಿಲ್ಲ ಎಂಬುದಾಗಿ ಪದೇಪದೇ ಅವರ ಅಭಿಮಾನಿಗಳು ಅವರಲ್ಲಿ ಕೇಳುತ್ತಲೇ ಇದ್ದಾರೆ.

pooja hegde | ವಯಸ್ಸು 30 ವರ್ಷ ದಾಟಿದರೂ ಕೂಡ ಇನ್ನೂ ಮದುವೆಯಾಗದಿರುವ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?? ಟಾಪ್ ನಟಿಯರು ಯಾರ್ಯಾರು ಗೊತ್ತೇ??
ವಯಸ್ಸು 30 ವರ್ಷ ದಾಟಿದರೂ ಕೂಡ ಇನ್ನೂ ಮದುವೆಯಾಗದಿರುವ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?? ಟಾಪ್ ನಟಿಯರು ಯಾರ್ಯಾರು ಗೊತ್ತೇ?? 6

ಪೂಜಾ ಹೆಗ್ಡೆ; ಹೃತಿಕ್ ರೋಷನ್ ನಟನೆಯ ಮಹಿಂದ್ರ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪೂಜಾ ಈಗಾಗಲೇ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕೂಡ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಯರಲ್ಲಿ ಕೂಡ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಯಸ್ಸು 30 ದಾಟಿದರೂ ಕೂಡ ಸದ್ಯಕ್ಕಂತೂ ಇವರು ಮದುವೆ ಆಗುವ ಆಲೋಚನೆಯನ್ನು ಅಥವಾ ಆಸಕ್ತಿಯನ್ನು ತೋರಿಸುವಂತೆ ಕಾಣುತ್ತಿಲ್ಲ.

ಶ್ರುತಿ ಹಾಸನ್; ತಮಿಳು ಚಿತ್ರರಂಗದ ಖ್ಯಾತ ಮಹಾನ್ ಕಲಾವಿದ ಆಗಿರುವ ಕಮಲ್ ಹಾಸನ್ ಅವರ ಪುತ್ರಿ ಶೃತಿ ಹಾಸನ್ ತಮಿಳು ಸೇರಿದಂತೆ ಬಹುತೇಕ ಭಾರತೀಯ ಚಿತ್ರರಂಗದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸದ್ಯಕ್ಕೆ ನಮ್ಮ ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾಗೂ ರೆಬೆಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿರುವ ಸಲಾರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಹೆಸರು ಈಗಾಗಲೇ ಈ ಹಿಂದೆ ಹಲವಾರು ನಾಯಕ ನಟರೊಂದಿಗೆ ಕೇಳಿಸಿ ಬಂದಿದ್ದರೂ ಕೂಡ ಯಾವುದೇ ವಿಚಾರಗಳು ಮದುವೆ ತನಕ ಹೋಗಿಲ್ಲ. ಸದ್ಯಕ್ಕೆ ಇವರಿಗೆ 35 ವರ್ಷ ವಯಸ್ಸಾಗಿದ್ದು ಯಾವುದೇ ಮದುವೆ ಪ್ಲಾನ್ ಮಾಡಿಕೊಂಡಂತಿಲ್ಲ.

nayanthara 1 | ವಯಸ್ಸು 30 ವರ್ಷ ದಾಟಿದರೂ ಕೂಡ ಇನ್ನೂ ಮದುವೆಯಾಗದಿರುವ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?? ಟಾಪ್ ನಟಿಯರು ಯಾರ್ಯಾರು ಗೊತ್ತೇ??
ವಯಸ್ಸು 30 ವರ್ಷ ದಾಟಿದರೂ ಕೂಡ ಇನ್ನೂ ಮದುವೆಯಾಗದಿರುವ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?? ಟಾಪ್ ನಟಿಯರು ಯಾರ್ಯಾರು ಗೊತ್ತೇ?? 7

ನಯನತಾರಾ; ಸದ್ಯದ ಮಟ್ಟಿಗೆ ದಕ್ಷಿಣ ಭಾರತ ಚಿತ್ರರಂಗವನ್ನು ಆಳುತ್ತಿರುವ ಏಕೈಕ ಲೇಡಿ ಸೂಪರ್ಸ್ಟಾರ್ ಎಂದರೆ ಅದು ನಮ್ಮ ಬೆಂಗಳೂರು ಮೂಲದ ಹುಡುಗಿ ನಯನತಾರ. ಹುಟ್ಟಿದ್ದು ಬೆಂಗಳೂರಿನಲ್ಲೆ ಆದರೂ ಕೂಡ ಬೆಳೆದಿದ್ದು ಹಾಗೂ ಜನಪ್ರಿಯತೆ ಪಡೆದುಕೊಂಡಿದ್ದು ತಮಿಳು ಚಿತ್ರರಂಗದಲ್ಲಿ. ಸದ್ಯಕ್ಕೆ ವಯಸ್ಸು 36 ಆಗಿದ್ದರೂ ಕೂಡ ಬಹು ಬೇಡಿಕೆಯಲ್ಲಿರುವ ನಟಿ ನಯನತಾರಾ. ಹಿಂದೆ ಡ್ಯಾನ್ಸ್ ಕಿಂಗ್ ಆಗಿದ್ದ ಪ್ರಭುದೇವರವರೊಂದಿಗೆ ಹಲವಾರು ವರ್ಷ ಜೊತೆಯಾಗಿ ಕಾಣಿಸಿಕೊಂಡಿದ್ದರು. ನಂತರ ಸದ್ಯಕ್ಕೆ ಈಗ ನಿರ್ದೇಶಕ ವಿಜ್ಞೇಶ್ವರ ಜೊತೆಗೆ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿದ್ದಾರೆ. ಮದುವೆಯಾಗದಿದ್ದರೂ ಕೂಡ ಈ ಜೋಡಿಗಳು ದಂಪತಿಗಳಂತೆ ಸಂಸಾರ ನಡೆಸುತ್ತಿದ್ದಾರೆ.

ನಿತ್ಯಮೆನನ್; ಮತ್ತೊಬ್ಬ ಬೆಂಗಳೂರು ಮೂಲದ ಹುಡುಗಿ ಆಗಿರುವ ನಿತ್ಯ ಮೆನನ್ ರವರು ನಾಯಕ ನಟಿಯಾಗಿ ಪಂಚಭಾಷಾ ತಾರೆಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಯ ಮೂಲಕವೇ ಯಾವುದೇ ಭಾಷೆಯ ಪ್ರೇಕ್ಷಕರು ಇರಲಿ ಅವರ ಮನವನ್ನು ಗೆಲ್ಲುವಂತಹ ಶಕ್ತಿ ನಿತ್ಯ ಮೆನನ್ ರವರಿಗೆ ಇದೆ. ಅವರು ಯಾವುದೇ ಭಾಷೆಯಲ್ಲಿ ನಟಿಸಲಿ ಅವರಿಗೆ ಇರುವಂತಹ ಬೇಡಿಕೆ ಇದುವರೆಗೂ ಕೂಡ ಕಡಿಮೆಯಾಗಿಲ್ಲ. ಆದರೆ ವಯಸ್ಸು 33 ಆದರೂ ಕೂಡ ಇನ್ನೂ ಯಾಕೆ ಮದುವೆ ಆಗಿಲ್ಲ ಎನ್ನುವುದು ಎಲ್ಲರಿಗೂ ಅರ್ಥವಾಗದೆ ಇರುವ ವಿಚಾರ. ಬಹುಶಃ ಅವರು ಸಿನಿಮಾದಲ್ಲಿ ಇನ್ನಷ್ಟು ಸಾಧನೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕಾಣುತ್ತಿದೆ.

ramya divya spandana kannada actress | ವಯಸ್ಸು 30 ವರ್ಷ ದಾಟಿದರೂ ಕೂಡ ಇನ್ನೂ ಮದುವೆಯಾಗದಿರುವ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?? ಟಾಪ್ ನಟಿಯರು ಯಾರ್ಯಾರು ಗೊತ್ತೇ??
ವಯಸ್ಸು 30 ವರ್ಷ ದಾಟಿದರೂ ಕೂಡ ಇನ್ನೂ ಮದುವೆಯಾಗದಿರುವ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?? ಟಾಪ್ ನಟಿಯರು ಯಾರ್ಯಾರು ಗೊತ್ತೇ?? 8

ರಮ್ಯ; ಮೊದಲ ಸಿನಿಮಾದಿಂದ ಪ್ರಾರಂಭಿಸಿ ಇಂದು ಕನ್ನಡ ಚಿತ್ರರಂಗದಲ್ಲಿ ನಟಿಸದಿದ್ದರು ಕೂಡ ರಮ್ಯಾರವರು ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ನಟಿಯಾಗಿ ಕಾಣಸಿಗುತ್ತಾರೆ. ಕೆಲ ಸಮಯಗಳ ಹಿಂದಷ್ಟೇ ಪೋರ್ಚುಗೀಸ್ ಮೂಲದ ವ್ಯಕ್ತಿಯೊಬ್ಬರನ್ನು ರಮ್ಯಾರವರು ಮದುವೆಯಾಗುತ್ತಾರೆ ಎಂಬುದಾಗಿ ಕೇಳಿಬಂದಿತ್ತು. ಆದರೆ ಈಗ ವಯಸ್ಸು 39 ಆಗಿದ್ದರೂ ಕೂಡ ರಮ್ಯಾರವರು ಇದುವರೆಗೂ ಮದುವೆಯಾಗಿಲ್ಲ. ಅವರ ಮದುವೆಗಿಂತ ಹೆಚ್ಚಾಗಿ ಮತ್ತೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸಲು ಎನ್ನುವುದಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.