ಕನ್ನಡದ ಬಹುನಿರೀಕ್ಷಿತ ಸಿನಿಮಾ ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ರವರಿಗೆ ಜೋಡಿಯಾಗಿರುವ ನಟಿ ಯಾರು ಗೊತ್ತೇ?? ನೀವು ಕೂಡ ಧಾರಾವಾಹಿಯಲ್ಲಿ ನೋಡಿರುತ್ತೀರಿ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಕೆಲವು ವರ್ಷಗಳಲ್ಲಿ ರಕ್ಷಿತ್ ಶೆಟ್ಟಿ ಅವರು ಹಲವಾರು ಪ್ರಯೋಗಾತ್ಮಕ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರಲ್ಲಿ ಭರವಸೆಯನ್ನು ಗಳಿಸಿದ್ದಾರೆ ಎಂದು ಹೇಳಬಹುದಾಗಿದೆ. ಕಿರಿಕ್ ಪಾರ್ಟಿ ಚಿತ್ರದಿಂದ ಆರಂಭವಾದ ಅವರ ಯಶಸ್ಸು ಎನ್ನುವುದು ಇಂದಿಗೂ ಕೂಡ ನಿಂತಿಲ್ಲ. ಕೇವಲ ನಟನಾಗಿ ಮಾತ್ರವಲ್ಲ ನಿರ್ದೇಶಕನಾಗಿ ನಿರ್ಮಾಪಕನಾಗಿ ಯು ಕೂಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ರಕ್ಷಿತ್ ಶೆಟ್ಟಿ ರವರು ಸಿನಿಮಾ ಮಾಡುತ್ತಿದ್ದಾರೆ ಎಂದರೆ ಖಂಡಿತವಾಗಿ ಜನರು ಚಿತ್ರಮಂದಿರಗಳಿಗೆ ಬಂದು ಅದೇನು ಮಾಡಿರಬಹುದು ಎನ್ನುವ ಕುತೂಹಲದಿಂದ ಖಂಡಿತವಾಗಿ ಅವರ ಸಿನಿಮಾವನ್ನು ನೋಡಿಯೇ ನೋಡುತ್ತಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ರವರ ಮುಂದಿನ ಚಿತ್ರವಾಗಿರುವ 777 ಚಾರ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ನಾಯಕಿಯ ಕುರಿತಂತೆ ನಿಮಗೆ ತಿಳಿಸುವ ಪ್ರಯತ್ನವನ್ನು ಈ ಲೇಖನಿಯಲ್ಲಿ ಮಾಡಲಿದ್ದೇವೆ.

ಹೌದು ಗೆಳೆಯರೇ ರಕ್ಷಿತ್ ಶೆಟ್ಟಿ ರವರ ಮುಂದಿನ ಬಹುನಿರೀಕ್ಷಿತ 777 ಚಾರ್ಲಿ ಸಿನಿಮಾದ ನಾಯಕಿ ಸಂಗೀತ ಶೃಂಗೇರಿ. ಇವರು ಇನ್ಯಾರೂ ಅಲ್ಲ ಹರಹರ ಮಹಾದೇವ ಧಾರವಾಹಿಯಲ್ಲಿ ಸತಿದೇವಿ ಪಾತ್ರವನ್ನು ವಹಿಸಿದ್ದವರು ಇವರೇ. ಇತ್ತೀಚಿಗೆ ಕೊಡಗು ಹಾಗೂ ಮಡಿಕೇರಿ ಪ್ರದೇಶದ ಹಲವಾರು ಪ್ರತಿಭೆಗಳು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ಸನ್ನು ಪಡೆದಿದ್ದಾರೆ ಇವರು ಕೂಡ ಕೊಡಗಿನವರೇ. ಇವರ ಕುರಿತಂತೆ ನೀವು ಹೆಚ್ಚಿನ ಮಟ್ಟದಲ್ಲಿ ತಿಳಿದುಕೊಂಡಿರುವ ಸಾಧ್ಯವಿಲ್ಲ ಹೀಗಾಗಿ ಇಂದಿನ ಲೇಖನದಲ್ಲಿ ನಾವು ಅವರ ಕುರಿತಂತೆ ನಿಮಗೆ ವಿವರವಾಗಿ ತಿಳಿಸುತ್ತೇವೆ ಬನ್ನಿ.

sangeetha charlie 777 | ಕನ್ನಡದ ಬಹುನಿರೀಕ್ಷಿತ ಸಿನಿಮಾ ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ರವರಿಗೆ ಜೋಡಿಯಾಗಿರುವ ನಟಿ ಯಾರು ಗೊತ್ತೇ?? ನೀವು ಕೂಡ ಧಾರಾವಾಹಿಯಲ್ಲಿ ನೋಡಿರುತ್ತೀರಿ.
ಕನ್ನಡದ ಬಹುನಿರೀಕ್ಷಿತ ಸಿನಿಮಾ ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ರವರಿಗೆ ಜೋಡಿಯಾಗಿರುವ ನಟಿ ಯಾರು ಗೊತ್ತೇ?? ನೀವು ಕೂಡ ಧಾರಾವಾಹಿಯಲ್ಲಿ ನೋಡಿರುತ್ತೀರಿ. 3

ನಿಜವಾಗಿ ಹೇಳಬೇಕೆಂದರೆ ಸಂಗೀತ ಶೃಂಗೇರಿ ರವರಿಗೆ ನಟನೆಯಲ್ಲಿ ಯಾವ ಆಸಕ್ತಿಯ ಕೂಡ ಇರಲಿಲ್ಲ. ಆದರೆ ಸ್ನೇಹಿತರು ಹಾಗೂ ಹಿತೈಷಿಗಳ ಒತ್ತಾಯದ ಮೇರೆಗೆ ಒಂದು ಶಾರ್ಟ್ ಫಿಲ್ಮ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಾದ ನಂತರ ಜನಪ್ರಿಯ ಧಾರವಾಹಿ ಆಗಿರುವ ಹರಹರಮಹದೇವ ಧಾರವಾಹಿಯಲ್ಲಿ ಸತಿದೇವಿ ಪಾತ್ರಕ್ಕಾಗಿ ಆಡಿಶನ್ ನೀಡುವಂತಹ ಅವಕಾಶ ಸಂಗೀತ ಶೃಂಗೇರಿ ರವರಿಗೆ ಹುಡುಕಿಕೊಂಡು ಬರುತ್ತದೆ. ಸಂಗೀತ ಶೃಂಗೇರಿ ರವರು ಆಡಿಶನ್ ನೀಡಿ ಆ ಪಾತ್ರಕ್ಕೆ ಆಯ್ಕೆ ಕೂಡ ಆಗುತ್ತಾರೆ. ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಆದರೆ ಸಂಗೀತ ಶೃಂಗೇರಿ ರವರು ತಾವು ನಟಿಸಿದ ಮೊದಲ ಧಾರವಾಹಿಯಲ್ಲಿಯೇ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನಗೆಲ್ಲಲು ಯಶಸ್ವಿಯಾಗುತ್ತಾರೆ.

ಸತಿದೇವಿ ಪಾತ್ರದಲ್ಲಿ ಮಿಂಚಿದ ನಂತರ ಬೇರೆ ಯಾವುದೇ ಧಾರವಾಹಿಗಳಲ್ಲಿ ಕೂಡಾ ಸಂಗೀತ ಶೃಂಗೇರಿ ರವರು ಕಾಣಿಸಿಕೊಂಡಿಲ್ಲ ವಂತೆ. ಇನ್ನು ಸಂಗೀತ ಶೃಂಗೇರಿ ರವರ ಕುರಿತಂತೆ ಇರುವಂತಹ ಇನ್ನೊಂದು ಒಳ್ಳೆಯ ಸುದ್ದಿ ಏನೆಂದರೆ ಅವರು ಪ್ರತಿದಿನ ಬೆಳಗ್ಗೆ 3.30 ಕ್ಕೆ ಎದ್ದು ಯೋಗಾಭ್ಯಾಸ ಮಾಡಲು ಪ್ರಾರಂಭಿಸುತ್ತಾರಂತೆ. ನಟ ರಕ್ಷಿತ್ ಶೆಟ್ಟಿ ಅವರಿಗೂ ಕೂಡ ಯೋಗಾಭ್ಯಾಸ ಮಾಡಲು ಇವರೇ ಪ್ರೇರೇಪಣೆ. ಇದೊಂದು ಒಳ್ಳೆಯ ಅಭ್ಯಾಸದಿಂದಾಗಿ ಎಲ್ಲಾ ಕಡೆ ಕೂಡ ಇವರು ಸುದ್ದಿಯಲ್ಲಿದ್ದಾರೆ.

ಧಾರವಾಹಿಯ ನಂತರ ಸಂಗೀತ ಶೃಂಗೇರಿ ರವರು ಸಿನಿಮಾರಂಗಕ್ಕೆ ಕೂಡ ಎಂಟ್ರಿ ನೀಡುತ್ತಾರೆ. ಹೌದು ಗೆಳೆಯರೇ ಅಗ್ನಿಸಾಕ್ಷಿ ಧಾರಾವಾಹಿಯ ನಟ ಆಗಿರುವ ವಿಜಯಸೂರ್ಯ ನಟನೆಯ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ ಇದು ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಇವರಿಗೆ ತಂದುಕೊಡುವುದಿಲ್ಲ. ಇದಾದ ನಂತರ ಈಗ ಬಹುಕಾಲದ ವಿರಾಮದನಂತರ ರಕ್ಷಿತ್ ಶೆಟ್ಟಿ ನಟನೆಯ ಕಿರಣ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ 777 ಚಾರ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಿ ಪ್ರಮುಖ ಪಾತ್ರವನ್ನು ವಹಿಸಲಿದ್ದು ಸಂಗೀತ ಶೃಂಗೇರಿ ರವರು ಪ್ರಾಣಿ ರಕ್ಷಣಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದು ಅವರ ನಟನಾ ವೃತ್ತಿಯಲ್ಲಿ ವಿಶಿಷ್ಟವಾದ ಪಾತ್ರವಾಗಿದೆ ಎಂದರೆ ತಪ್ಪಾಗಲಾರದು.

sangeetha hara hara mahadeva | ಕನ್ನಡದ ಬಹುನಿರೀಕ್ಷಿತ ಸಿನಿಮಾ ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ರವರಿಗೆ ಜೋಡಿಯಾಗಿರುವ ನಟಿ ಯಾರು ಗೊತ್ತೇ?? ನೀವು ಕೂಡ ಧಾರಾವಾಹಿಯಲ್ಲಿ ನೋಡಿರುತ್ತೀರಿ.
ಕನ್ನಡದ ಬಹುನಿರೀಕ್ಷಿತ ಸಿನಿಮಾ ಚಾರ್ಲಿ ಸಿನಿಮಾದಲ್ಲಿ ರಕ್ಷಿತ್ ರವರಿಗೆ ಜೋಡಿಯಾಗಿರುವ ನಟಿ ಯಾರು ಗೊತ್ತೇ?? ನೀವು ಕೂಡ ಧಾರಾವಾಹಿಯಲ್ಲಿ ನೋಡಿರುತ್ತೀರಿ. 4

ಚಾರ್ಲಿ ಸಿನಿಮಾದ ಪಾತ್ರಕ್ಕಾಗಿ ಸಂಗೀತ ಶೃಂಗೇರಿ ರವರು ಹಲವಾರು ತಯಾರಿಯನ್ನು ಮಾಡಿಕೊಂಡು ನಟಿಸಿದ್ದಾರೆ. ಪ್ರತಿಭೆ ಇದ್ದರೆ ಅವಕಾಶಗಳು ತಮ್ಮನ್ನು ಹುಡುಕಿಕೊಂಡು ಬರುತ್ತವೆ ಎನ್ನುವುದನ್ನು ಸಂಗೀತ ಶೃಂಗೇರಿ ರವರು ಸಾಬೀತುಪಡಿಸಿ ಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಜೂನ್ 10ರಂದು ಬಿಡುಗಡೆಯಾಗುವ ಚಾರ್ಲಿ ಚಿತ್ರದ ನಂತರ ಸಂಗೀತ ಶೃಂಗೇರಿ ರವರ ಕೈಯಲ್ಲಿ ಎರಡು ಸಿನಿಮಾಗಳಿವೆ. ಮುಂದಿನ ದಿನಗಳಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಖಂಡಿತವಾಗಿ ಸಂಗೀತ ಶೃಂಗೇರಿ ರವರು ದೊಡ್ಡಮಟ್ಟದ ಸ್ಟಾರ್ ನಟಿಯಾಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಂಗೀತ ಶೃಂಗೇರಿ ಅವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.