ರಾಜಧಾನಿ ಬೆಂಗಳೂರಿನಲ್ಲಿ ನಡೆಯಿತು 14 ವರ್ಷದ ಹುಡುಗಿಯ ಮದುವೆ, ಅದು 45 ವರ್ಷದ ಅಂಕಲ್ ಜೊತೆ. ಮೂರೇ ದಿನಕ್ಕೆ ಆಯ್ತು ತಕ್ಕ ಶಾಸ್ತಿ. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಮ್ಮ ರಾಜಧಾನಿಯಾಗಿರುವ ಬೆಂಗಳೂರಿನ ಯಲಹಂಕದಲ್ಲಿ 14 ವರ್ಷದ ಯುವತಿಯನ್ನು ಮದುವೆಯಾಗಿರುವ ಹಿನ್ನೆಲೆಯಲ್ಲಿ 45 ವರ್ಷದ ವ್ಯಕ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ವಿಚಿತ್ರ ಕಹಾನಿಯ ವಿವರಣೆಯನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಈ 45 ವರ್ಷದ ಗುರುಪ್ರಸಾದ್ ಎನ್ನುವ ವ್ಯಕ್ತಿಗೆ ಮದುವೆಯಾಗಿ 17 ವರ್ಷದ ಮಗ ಕೂಡ ಇದ್ದಾನೆ. ಹೇಗಿದ್ದರೂ ಕೂಡ ಬಡ ತಂದೆ ತಾಯಿಗಳಿಗೆ ಹಣದ ಆಮಿಷವನ್ನು ಒಡ್ಡಿ ಅವರ 14 ವರ್ಷದ ಮಗಳನ್ನು ಈ ಪುಣ್ಯಾತ್ಮ ಮದುವೆಯಾಗಿದ್ದಾನೆ. ಈತ 18 ವರ್ಷಗಳ ಹಿಂದೆಯೇ ಮದುವೆಯಾಗಿ 17 ವರ್ಷದ ಮಗನನ್ನು ಕೂಡ ಹೊಂದಿದ್ದ. ಆದರೆ ಕೆಲವು ಸಮಯಗಳಿಂದ ತನ್ನ ಹೆಂಡತಿಯಿಂದ ದೂರವಾಗಿ ಒಂಟಿಯಾಗಿ ಜೀವಿಸುತ್ತಿದ್ದ. ಈ ಸಂದರ್ಭದಲ್ಲಿ ಈ 14 ವರ್ಷದ ಹುಡುಗಿಯ ಮೇಲೆ ಕಣ್ಣು ಹಾಕಿದ್ದ ಗುರುಪ್ರಸಾದ್. ನಂತರ ಆ ಹುಡುಗಿಯ ಮನೆಯವರಿಗೆ ಬೇಕಾದಷ್ಟು ಕೈ ತುಂಬಾ ಹಣ ನೀಡಿ ಆ ಹುಡುಗಿಯನ್ನು ಕರೆದುಕೊಂಡು ಬೆಂಗಳೂರಿನ ಹೊರವಲಯಕ್ಕೆ ಕರೆದುಕೊಂಡು ಹೋಗಿ ಆಕೆಗೆ ಇಷ್ಟ ಇಲ್ಲದಿದ್ದರೂ ಕೂಡ ಬಲವಂತವಾಗಿ ಸೆಪ್ಟೆಂಬರ್ 7ರಂದು ಮದುವೆಯಾಗಿದ್ದಾನೆ.

14 year old girl marries 45 year old man | ರಾಜಧಾನಿ ಬೆಂಗಳೂರಿನಲ್ಲಿ ನಡೆಯಿತು 14 ವರ್ಷದ ಹುಡುಗಿಯ ಮದುವೆ, ಅದು 45 ವರ್ಷದ ಅಂಕಲ್ ಜೊತೆ. ಮೂರೇ ದಿನಕ್ಕೆ ಆಯ್ತು ತಕ್ಕ ಶಾಸ್ತಿ. ಏನಾಗಿದೆ ಗೊತ್ತೇ??
ರಾಜಧಾನಿ ಬೆಂಗಳೂರಿನಲ್ಲಿ ನಡೆಯಿತು 14 ವರ್ಷದ ಹುಡುಗಿಯ ಮದುವೆ, ಅದು 45 ವರ್ಷದ ಅಂಕಲ್ ಜೊತೆ. ಮೂರೇ ದಿನಕ್ಕೆ ಆಯ್ತು ತಕ್ಕ ಶಾಸ್ತಿ. ಏನಾಗಿದೆ ಗೊತ್ತೇ?? 2

ಮದುವೆ ಆದ ನಂತರ ಆ 14 ವರ್ಷದ ಹುಡುಗಿ ಅಕ್ಕಪಕ್ಕದವರ ಬಳಿ ಹಾಗೂ ಪರಿಚಯಸ್ತರ ಬಳಿ ನನಗೆ ಇಷ್ಟ ಇಲ್ಲದಿದ್ದರೂ ಕೂಡ ಮದುವೆ ಮಾಡಿಸಿದ್ದಾರೆ ಎಂಬುದಾಗಿ ದುಃಖವನ್ನು ಹೇಳಿಕೊಂಡ ನಂತರ ಅವರು ಪೊಲೀಸರಿಗೆ ಈ ಕುರಿತಂತೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಕೇವಲ ಗುರುಪ್ರಸಾದ್ ನನ್ನು ಮಾತ್ರವಲ್ಲದೆ ಹಣದ ಆಸೆಗಾಗಿ ಮಗಳನ್ನು ಬಿಟ್ಟುಕೊಟ್ಟ ತಂದೆ ತಾಯಿಯರನ್ನು ಕೂಡ ಬಂಧಿಸಿದ್ದಾರೆ. ಪೊಲೀಸರ ಈ ನಡೆಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.