IPL 2023: ಮಿನಿ ಹರಾಜಿಗೆ ಭರ್ಜರಿ ತಯಾರಿ ನಡೆಸಿರುವ ಆರ್ಸಿಬಿ ತಂಡ ಕಣ್ಣಿಟ್ಟಿರುವ ಮೂವರು ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

IPL 2023: ಮುಂದಿನ ಸೀಸನ್ನ ಐಪಿಎಲ್ ಟೂರ್ನಿಗೆ ತಂಡದ ಆಟಗಾರರನ್ನು ಅಂತಿಮಗೊಳಿಸುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಇನ್ನೇನು ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ಅದಕ್ಕಾಗಿ ತಮ್ಮ ಆಟಗಾರರನ್ನು ಉಳಿಸಿಕೊಳ್ಳುವುದು ಅಥವಾ ತಂಡದಿಂದ ಅವರನ್ನು ಹೊರಗೆ ಹಾಕುವ ಪ್ರಕ್ರಿಯೆಯು ಬರದಿಂದ ಸಾಗಿದೆ. ಡಿಸೆಂಬರ್ 23ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದೆ. ಆರ್‌ಸಿಬಿ (RCB) ಬಲಿಷ್ಠ ಆಟಗಾರರನ್ನು ಕೊಂಡುಕೊಳ್ಳುವುದರಲ್ಲಿ ಉತ್ಸುಕವಾಗಿದೆ. ಆ ಮೂವರು ಆಟಗಾರರನ್ನು ಕೊಳ್ಳಲು ಕಾಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಿದ್ದರೆ ಆ ಮೂರು ಆಟಗಾರರು ಯಾರು ಎನ್ನುವುದು ಇಲ್ಲಿದೆ.

ಮುಂದಿನ ಸೀಜನ್ ಗಾಗಿ ನಡೆಸಲಾಗುವ ಹರಾಜು ಪ್ರಕ್ರಿಯೆಗೂ ಮೊದಲೇ ಎಲ್ಲ ತಂಡದವರು ಕೂಡ ತಮ್ಮ ತಂಡದ ಆಟಗಾರರಲ್ಲಿ ಯಾರನ್ನು ಉಳಿಸಿಕೊಂಡಿದ್ದೇವೆ ಮತ್ತು ಯಾರನ್ನು ತಂಡದಿಂದ ಹೊರಗೆ ರಿಲೀಸ್ ಮಾಡಿದ್ದೇವೆ ಎನ್ನುವುದನ್ನು ನವೆಂಬರ್ 15ರ ಒಳಗೆ ತಿಳಿಸಬೇಕು. ಜೇಸನ್‌ ಬೆಹ್ರೆಂಡೋರ್ಫ್‌ರನ್ನ (Jason Behrendorff) 2022 ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 75 ಲಕ್ಷ ಮೂಲ ಬೆಲೆಗೆ ಆರ್‌ಸಿಬಿ ತಂಡ ಕೊಂಡುಕೊಂಡಿತ್ತು. ಅವರನ್ನು ಮುಂದೆ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಅವರ ಮೂಲ ಬೆಲೆ 75 ಲಕ್ಷ ಕೊಟ್ಟು ಮತ್ತೆ ಖರೀದಿಸಿದೆ. ಒಪ್ಪಂದದ ಪ್ರಕಾರ ಈ ರೀತಿ ಎರಡು ತಂಡಗಳು ಪರಸ್ಪರ ಆಟಗಾರರನ್ನು ಖರೀದಿ ಮಾಡುವ ಅವಕಾಶವಿರುತ್ತದೆ. ನವೆಂಬರ್ 15ರ ಒಳಗೆ ತಂಡದಿಂದ ಯಾರನ್ನು ಹೊರಗಿಡಲಾಗಿದೆ ಮತ್ತು ತಂಡದಲ್ಲಿ ಯಥಾ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ ಎಂಬುದನ್ನು ಅಂತಿಮವಾಗಿ ತಿಳಿಸಬೇಕಿದೆ.

ipl 2023 rcb | IPL 2023: ಮಿನಿ ಹರಾಜಿಗೆ ಭರ್ಜರಿ ತಯಾರಿ ನಡೆಸಿರುವ ಆರ್ಸಿಬಿ ತಂಡ ಕಣ್ಣಿಟ್ಟಿರುವ ಮೂವರು ಟಾಪ್ ಆಟಗಾರರು ಯಾರ್ಯಾರು ಗೊತ್ತೇ??
IPL 2023: ಮಿನಿ ಹರಾಜಿಗೆ ಭರ್ಜರಿ ತಯಾರಿ ನಡೆಸಿರುವ ಆರ್ಸಿಬಿ ತಂಡ ಕಣ್ಣಿಟ್ಟಿರುವ ಮೂವರು ಟಾಪ್ ಆಟಗಾರರು ಯಾರ್ಯಾರು ಗೊತ್ತೇ?? 2

ಇದೀಗ ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡವು ಮೂವರು ಪ್ರಮುಖ ವೇಗಿಗಳಲ್ಲಿ ಒಬ್ಬರನ್ನು ತನ್ನ ತಂಡದ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಆ ಮೂವರು ವೇಗಿಗಳು ಯಾರು ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ. ರೀಸ್‌ ಟಾಪ್ಲೀ, (Reece Topley), ಸ್ಯಾಮ್‌ ಕರ್ರನ್‌ (Sam Curran), ಜಾಶ್‌ ಲಿಟ್ಲ್‌ (Josh Little) ಈ ಮೂವರು ಅದ್ಭುತ ಎಡಗೈ ವೇಗಿಗಳನ್ನು ತಂಡಕ್ಕೆ ತೆಗೆದುಕೊಳ್ಳಲು ಆರ್‌ಸಿಬಿ ಚಿಂತಿಸಿದೆ ಎಂದು ಹೇಳಲಾಗುತ್ತಿದೆ. ಇವರು ತಮ್ಮ ಬೌಲಿಂಗ್ ನಲ್ಲಿ ಅದ್ಭುತ ಚಾಕಚಕ್ಯತೆ ಹೊಂದಿದ್ದು ತಂಡದ ಗೆಲುವಿಗೆ ಕೊಡುಗೆ ನೀಡಬಲ್ಲರು ಎಂದು ಆರ್‌ಸಿಬಿ ಅಂದಾಜಿಸಿದೆ.

Comments are closed.