ನಮ್ಮವರೇ ನಮ್ಮ ಅಪ್ಪು ವನ್ನು ಮರೆತಿರುವಾಗ ಜೇಮ್ಸ್ ಸಿನಿಮಾ ನೋಡಿ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ನೀಡಿದ ಷಾಕಿಂಗ್ ಹೇಳಿಕೆ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ವಾಗಿರುವ ಜೇಮ್ಸ್ ಚಿತ್ರ ನಿನ್ನೆ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ವನ್ನು ಪ್ರಾರಂಭಿಸಿದೆ. ಜೇಮ್ಸ್ ಚಿತ್ರ ಎನ್ನುವುದು ಪ್ರತಿಯೊಬ್ಬ ಅಭಿಮಾನಿಗಳಿಗೂ ಹಾಗೂ ಕನ್ನಡಿಗರಿಗೂ ಭಾವನಾತ್ಮಕ ಚಿತ್ರವಾಗಿತ್ತು.
ಕಲೆಕ್ಷನ್ ವಿಚಾರಕ್ಕೆ ಬಂದರೆ ಮೊದಲ ದಿನವೇ 30 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರವಾಗಿದೆ ಜೇಮ್ಸ್. ಇಷ್ಟೆಲ್ಲ ನಡೆದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ನೋಡೋಕೆ ಸಾಧ್ಯವಿಲ್ಲವಲ್ಲ ಎಂಬುದಾಗಿ ಅತ್ತವರೇ ಹೆಚ್ಚಿದ್ದಾರೆ. ಜೇಮ್ಸ್ ಚಿತ್ರದಲ್ಲಿ ಕೆಲವೊಮ್ಮೆ ಪುನೀತ್ ರಾಜಕುಮಾರ್ ರವರ ಎಡಿಟೆಡ್ ದೃಶ್ಯಗಳು ಬಂದಾಗಲೂ ಕೂಡ ಪುನೀತ್ ರಾಜಕುಮಾರ್ ಅವರನ್ನು ಮಿಸ್ ಮಾಡಿಕೊಂಡರು ಸಾಕಷ್ಟು ಜನ ಇದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಆರು ತಿಂಗಳ ಮಗುವಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟವರು ಎನ್ನುವುದು ನಮಗೆಲ್ಲಾ ಗೊತ್ತಿದೆ.
ಹತ್ತು ವರ್ಷದವರಾಗಿರುವಾಗಲೇ ಪುನೀತ್ ರಾಜಕುಮಾರ್ ರವರು ಬಾಲನಟನಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅವರ ಪ್ರತಿಭೆಯ ಕುರಿತಂತೆ ಇನ್ನಷ್ಟು ಉದಾಹರಣೆಗಳನ್ನು ನೀಡುವ ಅಗತ್ಯ ಇಲ್ಲ ಎಂದು ಭಾವಿಸುತ್ತೇವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಅಣ್ಣಾವ್ರ ಮಗ ಎನ್ನುವ ಕಾರಣಕ್ಕೆ ಕನ್ನಡಿಗರು ಅವರನ್ನು ಪ್ರೀತಿಸಿಲ್ಲ ಬದಲಾಗಿ ಅವರ ಪ್ರತಿಭೆ ಹಾಗೂ ಪರಿಶ್ರಮವನ್ನು ನೋಡಿ ಅವರನ್ನು ಪ್ರೀತಿಸಿ ಪವರ್ ಸ್ಟಾರ್ ಎಂಬ ಬಿರುದನ್ನು ನೀಡಿದ್ದಾರೆ. ನಿಜಕ್ಕೂ ಕೂಡ ಅವರನ್ನು ಕನ್ನಡ ಚಿತ್ರರಂಗ ಪಡೆದಿರುವುದಕ್ಕೆ ಧನ್ಯ ಎಂದು ಭಾವಿಸಬೇಕು.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರವನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಗಣ್ಯಾತಿಗಣ್ಯರು ಕೂಡ ವೀಕ್ಷಿಸಿದ್ದಾರೆ. ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಕೂಡ ಜೇಮ್ಸ್ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ್ದಾರೆ. ಇಂದು ನಾವು ಮಾತನಾಡಲು ಹೊರಟಿರುವುದು ತೆಲುಗು ಚಿತ್ರರಂಗದ ಖ್ಯಾತ ನಟರಾಗಿರುವ ಅಲ್ಲು ಅರ್ಜುನ್ ರವರ ಕುರಿತಂತೆ. ಅಲ್ಲು ಅರ್ಜುನ್ ಹಾಗೂ ಅಪ್ಪು ಇಬ್ಬರೂ ಕೂಡ ಹಲವಾರು ವರ್ಷಗಳಿಂದ ಸ್ನೇಹ ಬಾಂಧವ್ಯವನ್ನು ಹಂಚಿಕೊಂಡು ಬಂದಂತಹ ನಟರ ಎಂಬುದು ನಮಗೆಲ್ಲ ಗೊತ್ತಿದೆ.
ಅಲ್ಲು ಅರ್ಜುನ್ ರವರ ಕುಟುಂಬ ಹಾಗೂ ಅಪ್ಪು ಅವರ ಕುಟುಂಬ ಮೊದಲಿನಿಂದಲೂ ಕೂಡ ಒಳ್ಳೆ ರೀತಿಯ ಸಂಬಂಧವನ್ನು ಹೊಂದಿವೆ. ಇನ್ನು ಅಭಿಮಾನಿಗಳ ರೀತಿಯಲ್ಲಿ ಅಲ್ಲು ಅರ್ಜುನ್ ರವರು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ್ದಾರೆ. ಜೇಮ್ಸ್ ಚಿತ್ರವನ್ನು ನೋಡಿ ಅಪ್ಪು ಅವರ ಕುರಿತಂತೆ ಅಲ್ಲು ಅರ್ಜುನ್ ಅವರು ಹೇಳಿದ್ದೇನು ಗೊತ್ತಾ.
ಹೌದು ಚಿತ್ರವನ್ನು ನೋಡಿದ ಬಳಿಕ ಭಾವುಕರಾಗಿ ರುವ ಅಲ್ಲುಅರ್ಜುನ್ ರವರು ಪುನೀತ್ ಸರ್ ರವರ ಹಾಗೆ ನಟನೆ ಹಾಗೂ ನೃತ್ಯ ಮತ್ತು ಸಾಹಸ ದೃಶ್ಯಗಳನ್ನು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾನು ಕೂಡ ಅದನ್ನು ಪ್ರಯತ್ನಿಸಿ ಸೋತಿದ್ದೇನೆ. ವಿ ಮಿಸ್ ಯು ಅಪ್ಪು ಸರ್ ಎಂಬುದಾಗಿ ಭಾವುಕರಾಗಿ ನುಡಿದಿದ್ದಾರೆ. ಈ ಕುರಿತಂತೆ ಖಾಸಗಿ ವಾಹಿನಿಯಲ್ಲಿ ಈ ಸುದ್ದಿ ಪ್ರಕಟವಾಗಿದ್ದು ಅಪ್ಪು ಅಭಿಮಾನಿಗಳಲ್ಲಿ ಕೂಡ ಈ ಕುರಿತಂತೆ ಭಾವುಕತೆಯನ್ನುವುದು ಹೆಚ್ಚಾಗಿದೆ. ನೀವು ಕೂಡ ಸಿನಿಮಾವನ್ನು ನೋಡಿಲ್ಲ ಅಂದ್ರೆ ಕೂಡಲೇ ನಿಮ್ಮ ನೆಚ್ಚಿನ ಸಿನಿಮಾ ಥಿಯೇಟರ್ ಗಳಿಗೆ ಹೋಗಿ ತಪ್ಪದೇ ಅಪ್ಪು ಅವರ ಕೊನೆಯ ಸಿನಿಮಾ ಜೇಮ್ಸ್ ಅನ್ನು ನೋಡಿ. ಚಿತ್ರದ ಕುರಿತಂತೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಅಪ್ಪು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಮಾನಸಿಕವಾಗಿ ನಮ್ಮ ಯೋಚನೆಗಳಲ್ಲಿ ಹಾಗೂ ಒಳ್ಳೆಯ ಕೆಲಸಗಳಲ್ಲಿ ಖಂಡಿತವಾಗಿ ಜೀವಂತವಾಗಿರುತ್ತಾರೆ.
Comments are closed.