ಬಿಗ್ ಬಾಸ್ ಸೀಸನ್ 9 ಆರಂಭವಾಗ್ತಾ ಇದೆ, ನೆಚ್ಚಿನ ಧಾರಾವಾಹಿಗಳಲ್ಲಿ ಯಾವುದು ಮುಗಿಯಬಹುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಒಂದು ಸೀಸನ್ ಬಿಗ್ ಬಾಸ್ ಮುಗಿಯುತ್ತಿದ್ದಂತೆ ಇನ್ನೊಂದು ಸೀಸನ್ ಯಾವಾಗ ಶುರುವಾಗಬಹುದು ಎಂದು ಜನ ಕಾಯಲು ಶುರು ಮಾಡುತ್ತಾರೆ. ಬಿಗ್ ಬಾಸ್ ಈಗಾಗಲೇ ಕರ್ನಾತಕದಲಿ ಹಲವರ ಮನಗೆದ್ದ ರಿಯಾಲಿಟಿ ಶೋ. ಇನ್ನು ಬಿಗ್ ಬಾಸ್ ಸೀಸನ್ 9 ಯಾವಾಗ ಶುರುವಾಗಬಹುದು ಎನ್ನುವ ಕುತೂಹಲ ಜನರಲ್ಲಿ ಮೂಡಿದೆ. ಇದಕ್ಕೆ ಕಾರಣ ಕರೋನಾ ಸಮಯದ ನಂತರ ಬಿಗ್ ಬಾಸ್ ಶುರುವಾಗಲಿದೆ ಎನ್ನುವ ವದಂತಿ ಹಬ್ಬಿದ್ದರೂ ಅದರ ಬಗ್ಗೆ ಯಾವುದೇ ಸುಳಿವೂ ಇಲ್ಲ.

kannada biggboss | ಬಿಗ್ ಬಾಸ್ ಸೀಸನ್ 9 ಆರಂಭವಾಗ್ತಾ ಇದೆ, ನೆಚ್ಚಿನ ಧಾರಾವಾಹಿಗಳಲ್ಲಿ ಯಾವುದು ಮುಗಿಯಬಹುದು ಗೊತ್ತೇ??
ಬಿಗ್ ಬಾಸ್ ಸೀಸನ್ 9 ಆರಂಭವಾಗ್ತಾ ಇದೆ, ನೆಚ್ಚಿನ ಧಾರಾವಾಹಿಗಳಲ್ಲಿ ಯಾವುದು ಮುಗಿಯಬಹುದು ಗೊತ್ತೇ?? 2

ಇದೀಗ ಬಿಗ್ ಬಾಸ್ ಯಾವಾಗ ಶುರುವಾಗಬಹುದು ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಮೊದಲಿನ ಡೇಟ್ ನಂತೆ ಅಟೋಬರ್ ನಲ್ಲಿ ಅಲ್ಲ ಬದಲಿಗೆ ಮೇ ಕೊನೆಯಲ್ಲಿಯೇ ಬಿಗ್ ಬಾಸ್ ಸೀಸನ್ 9 ಆರಂಭವಾಗಲಿದೆ. ಈ ಬಾರಿಯ ಐಪಿಎಲ್ ಮುಗಿಯುತ್ತಿದ್ದಂತೆ ಬಿಗ್ ಬಾಸ್ ಶುರುವಾಗಲಿದೆ. ಸಾಮಾನ್ಯವಾಗಿ ಐಪಿಎಲ್ ನಡೆಯುವಾಗ ಯಾವುದೇ ಹೊಸ ಶೋ ಅಥವಾ ಯಾವುದೇ ಹೊಸ ಧಾರಾವಾಹಿಗಳನ್ನೂ ಆರಂಭಮಾಡುವುದಿಲ್ಲ. ಕಾರಣ ಐಪಿಎಲ್ ನ ವೀಕ್ಷಕರ ಸಂಖ್ಯೆ ದೊಡ್ಡ ಮಟ್ಟದ್ದು. ಹಾಗಾಗಿ ಬೇರೆ ಯಾವುದೇ ಹೊಸ ಕಾರ್ಯಕ್ರಮಗಳನ್ನು ಆರಂಭಿಸಿದರೂ ಅದು ಓಡುವ ಸಾಧ್ಯತೆ ಕಡಿಮೆ.

ಇನ್ನು ಬಿಗ್ ಬಾಸ್ ಸುಮಾರು ಒಂದುವರೆ ಗಂಟೆಗಳ ಶೋ ಆಗಿರುವುದರಿಂದ ಆ ಸಮಯದ ಧಾರಾವಾಹಿಗಳನ್ನು ವೈಂಡಪ್ ಮಾಡುತ್ತಾರೆ ಅಥವಾ ಪ್ರಸಾರದ ಸಮಯವನ್ನು ಬದಲಿಸುತ್ತಾರೆ. ಸಹಜವಾಗಿಯೇ ಕಡಿಮೆ ರೇಟಿಂಗ್ ಇರುವ ಧಾರಾವಾಹಿಗಳನ್ನು ಮುಗಿಸಲಾಗುತ್ತದೆ. ಯಾವ ಧಾರಾವಾಹಿ ಕೊನೆಗೊಳ್ಳುತ್ತದೆ ಕಾದು ನೋಡಬೇಕು. ಇನ್ನು ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವುದರ ಬಗ್ಗೆ ಸಾಕಷ್ಟು ಹೆಸರುಗಳನ್ನು ಜನ ಊಹಿಸಿದ್ದರೂ, ನಿಜವಾಗಿ ದೊಡ್ಮನೆ ಪ್ರವೇಶ ಮಾಡುತ್ತಿರುವ ಸ್ಪರ್ಧಿಗಳ ಹೆಸರುಗಳನ್ನು ಎಂದಿನಂತೆ ಈ ಬಾಯಿಯೂ ಚಾನೆಲ್ ಅಧಿಕೃತವಾಗಿ ಹೊರಹಾಕಿಲ್ಲ. ಹಾಗಾಗಿ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಸ್ಪಷ್ಟವಾದ ಮಾಹಿತಿಗಳಿಲ್ಲ. ಈ ನಡುವೆ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯುತ್ತಿರುವುದು ಅಭಿಮಾನಿಗಳಿಗೆ ಸಂತೋಷದ ವಿಚಾರ!

Comments are closed.