ಜೇಮ್ಸ್ ಸಿನಿಮಾ ನೋಡುತ್ತ ಅರ್ಧದಲ್ಲಿಯೇ ಅಶ್ವಿನಿ ಪುನೀತ್ ರಾಜಕುಮಾರ್ ರವರು ಅಳುತ್ತ ಓಡಿಹೋಗಿದ್ದು ಎಲ್ಲಿಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ಅಗಲಿಕೆ ನಂತರ ಮೊದಲ ಬಾರಿಗೆ ಅಭಿಮಾನಿಗಳಿಗೆ ಖುಷಿಯಾಗಿದೆ ಎಂದರೆ ಅದು ಮಾರ್ಚ್ 17 ಎಂದರೆ ತಪ್ಪಾಗಲಾರದು. ಹೌದು ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಜೇಮ್ಸ್ ಚಿತ್ರದ ಮೂಲಕ ಕೊನೆಯ ಬಾರಿಗೆ ದೊಡ್ಡ ಪರದೆಯ ಮೇಲೆ ಎಂಟ್ರಿ ನೀಡಿದ್ದಾರೆ ದೊಡ್ಡಮನೆಯ ಕಿರಿಯಮಗ.

puni ragha | ಜೇಮ್ಸ್ ಸಿನಿಮಾ ನೋಡುತ್ತ ಅರ್ಧದಲ್ಲಿಯೇ ಅಶ್ವಿನಿ ಪುನೀತ್ ರಾಜಕುಮಾರ್ ರವರು ಅಳುತ್ತ ಓಡಿಹೋಗಿದ್ದು ಎಲ್ಲಿಗೆ ಗೊತ್ತಾ??
ಜೇಮ್ಸ್ ಸಿನಿಮಾ ನೋಡುತ್ತ ಅರ್ಧದಲ್ಲಿಯೇ ಅಶ್ವಿನಿ ಪುನೀತ್ ರಾಜಕುಮಾರ್ ರವರು ಅಳುತ್ತ ಓಡಿಹೋಗಿದ್ದು ಎಲ್ಲಿಗೆ ಗೊತ್ತಾ?? 3

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರರಂಗದಲ್ಲಿ ತಾವು ಇರುವವರೆಗೂ ಕೂಡ ಅಜಾತಶತ್ರುವಾಗಿ ಎಲ್ಲರ ಜೊತೆಗೆ ಸ್ನೇಹಭಾವದಿಂದ ಇದ್ದವರು. ಪುನೀತ್ ರಾಜಕುಮಾರ್ ರವರು ಎಂದರೆ ಎಲ್ಲಾ ಸ್ಟಾರ್ ನಟರಿಗೂ ಎಲ್ಲಾ ಕಿರಿಯ ನಟರಿಗೆ ಕೂಡ ಇಷ್ಟ. ನಿರ್ಮಾಪಕರಾಗಿಯೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನೂತನ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಿದ್ದರು. ನಿಜಕ್ಕೂ ಕೂಡ ಇಂತಹ ವ್ಯಕ್ತಿತ್ವವನ್ನು ಕನ್ನಡ ಚಿತ್ರರಂಗ ಮತ್ತೊಮ್ಮೆ ಪಡೆಯುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಾರ್ಯಗಳ ಕುರಿತಂತೆ ಕೂಡ ಅವರ ಮರಣದ ನಂತರವೇ ಎಲ್ಲರಿಗೂ ತಿಳಿದುಬಂದಿದೆ.

ಯಾವತ್ತೂ ಕೂಡ ಒಳ್ಳೆಯ ಕೆಲಸಗಳನ್ನು ತಮ್ಮ ಪ್ರಚಾರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಮಾಡಿದವರಲ್ಲ. ಅದಕ್ಕಾಗಿ ಅವರನ್ನು ಬೆಟ್ಟದಹೂವು ಎಂದು ಕರೆಯುವುದು. ನಿಜಕ್ಕೂ ಕೂಡ ಪವಿತ್ರ ರಲ್ಲಿ ಅತ್ಯಂತ ಪವಿತ್ರ ಎಂದರೆ ಪುನೀತ್ ರಾಜಕುಮಾರ್ ಎಂದು ಹೇಳಬಹುದು. ಮನಸ್ಸಿನಲ್ಲಿ ಕೂಡ ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ತಮ್ಮ ಸಿನಿಮಾಗಳ ಮೂಲಕವೂ ಕೂಡ ಸದಾಕಾಲ ಒಳ್ಳೆಯ ಸಾಮಾಜಿಕ ಸಂದೇಶಗಳನ್ನು ಸಾರಲು ಪ್ರಯತ್ನಿಸುತ್ತಿರುತ್ತಾರೆ. ಸದ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ದೇಶ-ವಿದೇಶಗಳಲ್ಲಿ ಹಾವಳಿ ಮಾಡುತ್ತಿದೆ.

ಜೇಮ್ಸ್ ಚಿತ್ರ ಈಗಾಗಲೇ ಆಸ್ಟ್ರೇಲಿಯ ಒಂದರಲ್ಲೇ 150 ಶೋಗಳಿಗೆ ಅಧಿಕ ಪ್ರದರ್ಶನವನ್ನು ಪಡೆಯುತ್ತಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆ ಎಂದು ಹೇಳಬಹುದಾಗಿದೆ. ಕೇವಲ ಇಷ್ಟು ಮಾತ್ರವಲ್ಲದೆ ಅಮೆರಿಕ ಇಂಗ್ಲೆಂಡ್ ದುಬೈ ಸೌತ್ ಆಫ್ರಿಕಾ ಹೀಗೆ ಹಲವಾರು ದೇಶಗಳಲ್ಲಿ ದಾಖಲೆಯ ಪ್ರದರ್ಶನವನ್ನು ಮೊದಲ ಬಾರಿಗೆ ಕನ್ನಡ ಸಿನಿಮಾ ಒಂದು ಕಾಣುತ್ತಿದೆ ಅಂದರೆ ಅದಕ್ಕೆ ಕಾರಣ ಜೇಮ್ಸ್. ಈಗಾಗಲೇ ಜೇಮ್ಸ್ ಚಿತ್ರದ ಮೊದಲ ದಿನ ಮುಗಿದಿದ್ದು ಅದ್ದೂರಿಯಾಗಿ ಬಾಕ್ಸಾಫೀಸ್ ಕಲೆಕ್ಷನ್ ಕೂಡ ನಡೆದಿದೆ. ಜೇಮ್ಸ್ ಚಿತ್ರವನ್ನು ಅಭಿಮಾನಿಗಳೊಂದಿಗೆ ದೊಡ್ಮನೆ ಅವರು ಕೂಡ ನೋಡಿದ್ದಾರೆ. ಅಭಿಮಾನಿಗಳೊಂದಿಗೆ ಅಪ್ಪು ಅವರ ಜನ್ಮದಿನಾಚರಣೆಯನ್ನು ಕೂಡ ಶಿವಣ್ಣ ಹಾಗೂ ರಾಘಣ್ಣ ನಡೆಸಿದ್ದಾರೆ.

punith ashwini | ಜೇಮ್ಸ್ ಸಿನಿಮಾ ನೋಡುತ್ತ ಅರ್ಧದಲ್ಲಿಯೇ ಅಶ್ವಿನಿ ಪುನೀತ್ ರಾಜಕುಮಾರ್ ರವರು ಅಳುತ್ತ ಓಡಿಹೋಗಿದ್ದು ಎಲ್ಲಿಗೆ ಗೊತ್ತಾ??
ಜೇಮ್ಸ್ ಸಿನಿಮಾ ನೋಡುತ್ತ ಅರ್ಧದಲ್ಲಿಯೇ ಅಶ್ವಿನಿ ಪುನೀತ್ ರಾಜಕುಮಾರ್ ರವರು ಅಳುತ್ತ ಓಡಿಹೋಗಿದ್ದು ಎಲ್ಲಿಗೆ ಗೊತ್ತಾ?? 4

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಸಿನಿಮಾ ನೋಡಲು ಹೋಗಿ ಅರ್ಧಕ್ಕೆ ಎದ್ದು ಬಂದು ಹೊರಗಡೆ ಎಲ್ಲೋ ಹೋಗಿದ್ದಾರೆ. ಎಲ್ಲರಿಗೂ ಕೂಡ ಎಲ್ಲಿ ಹೋಗಿದ್ದಾರೆ ಎನ್ನುವ ಅನುಮಾನಗಳು ಪ್ರಾರಂಭವಾಗಿದ್ದವು. ಹಾಗಿದ್ದರೆ ನಿಜವಾಗಿ ಏನು ನಡೆಯಿತು ಎಂಬುದನ್ನು ನಿಮಗೆ ತಿಳಿಸುತ್ತೇವೆ ಬನ್ನಿ.

ಹೌದು ಗೆಳೆಯರೆ ಭಾವುಕರಾದ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಸಿನಿಮಾದ ಅರ್ಧದಲ್ಲಿಯೇ ಎದ್ದು ಹೊರಬಂದು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಬಳಿಬಂದು ಅಳಲು ಆರಂಭಿಸುತ್ತಾರೆ. ನಂತರ ಅಲ್ಲಿ ಕೆಲಹೊತ್ತಿನ ನಂತರ ಅಭಿಮಾನಿಗಳೊಂದಿಗೆ ಅಪ್ಪು ಅವರ ಜನ್ಮದಿನಾಚರಣೆಯನ್ನು ಕೂಡ ಸರಳವಾಗಿ ಆಚರಿಸುತ್ತಾರೆ. ನಿಜಕ್ಕೂ ಕೂಡ 20 ವರ್ಷಗಳಿಗೂ ಅಧಿಕ ಕಾಲ ಜೊತೆಯಾಗಿ ಸಂಸಾರ ನಡೆಸಿದ ಸಂಗಾತಿ ಜೊತೆಗೆ ಇಲ್ಲ ಎಂದರೆ ಎಂತ ಹೆಣ್ಣುಮಗಳಿಗೂ ಕೂಡ ಕಣ್ಣು ಒದ್ದೆಯಾಗುವುದು ಗ್ಯಾರಂಟಿ.

ಪುನೀತ್ ರಾಜಕುಮಾರ್ ರವರು ಇಲ್ಲದೆ ಇರುವಂತಹ ಈ ಸಂದರ್ಭದಲ್ಲಿ ದೇವರು ಅವರಿಗೆ ಧೈರ್ಯ ಹಾಗೂ ಕಷ್ಟವನ್ನು ಸಹಿಸುವ ಶಕ್ತಿ ಹೆಚ್ಚಾಗಿ ನೀಡಲಿ ಎಂದು ಹಾರೈಸೋಣ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಬರುತ್ತಿದ್ದ ಎಲ್ಲಾ ಕೆಲಸಗಳನ್ನು ಅಶ್ವಿನಿಯವರು ಮುಂದುವರಿಸಿಕೊಂಡು ಹೋಗುವ ಶಕ್ತಿ ಸಿಗಲಿ ಎಂಬ ಪ್ರಾರ್ಥನೆ ಕೂಡ ಮಾಡೋಣ. ಜೇಮ್ಸ್ ಚಿತ್ರ ಅದ್ದೂರಿಯಾಗಿ ಯಶಸ್ಸು ಸಾಧಿಸಲಿ ಎಂಬುದಾಗಿ ದೇವರಲ್ಲಿ ಬೇಡಿಕೊಳ್ಳೋಣ.

Comments are closed.