ದುಃಖದಲ್ಲೇ ಇದ್ದರೂ ಕೂಡ ಮತ್ತೊಬ್ಬರ ಜೀವನಕ್ಕೆ ಬೆಳಕಾಗಲು ಹೊರಟ ಅಶ್ವಿನಿ ಪುನೀತ್ ರಾಜಕುಮಾರ್, ಮಾಡಲು ಹೊರಟಿರುವುದಾದರೂ ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿಯಾಗಿರುವ ಅಶ್ವಿನಿ ಅವರು ಬ್ಯಾಕ್ ಟು ಬ್ಯಾಕ್ ದುಃಖದ ವಿಚಾರಗಳಿಂದಾಗಿ ನಲುಗಿ ಹೋಗಿದ್ದಾರೆ. ಮೊದಲಿಗೆ ತಮ್ಮ ಪ್ರಾಣಕ್ಕೆ ಪ್ರಾಣ ವಾಗಿರುವ ಪತಿಯನ್ನು ಅಕಾಲಿಕವಾಗಿ ಕಳೆದುಕೊಂಡಿದ್ದರು. ನಂತರ ಅವರ ತಂದೆಯನ್ನು ಇತ್ತೀಚಿಗಷ್ಟೇ ಕಳೆದುಕೊಂಡಿದ್ದರು. ಇಷ್ಟೊಂದು ಮನಸ್ಸಿನಲ್ಲಿ ದುಃಖ ವಿದ್ದರೂ ಕೂಡ ಮತ್ತೊಬ್ಬರಿಗೆ ಸಹಾಯ ಮಾಡಲು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮುಂದಿದ್ದಾರೆ. ಈ ಕಥೆಯ ಹಿನ್ನೆಲೆಯನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ.

ಮೊದಲಿನಿಂದಲೂ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ರವರು ಸರಳ ವ್ಯಕ್ತಿತ್ವ ಉಳ್ಳವರು. ದೊಡ್ಮನೆಯ ಸೊಸೆ ಎಂದಾಗಲಿ ಅಥವಾ ಕನ್ನಡ ಚಿತ್ರರಂಗದ ಸ್ಟಾರ್ ನಟನ ಪತ್ನಿ ಎಂದಾಗಲಿ ಇಲ್ಲವೇ ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದಂತಹ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಒಡತಿ ಎನ್ನುವ ಹಮ್ಮು ಬಿಮ್ಮನ್ನು ಒಂದು ದಿನವೂ ಕೂಡ ಅವರು ತೋರಿದವರಲ್ಲ. ಮೊದಲಿನಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಬೆಂಬಲವಾಗಿ ನಿಂತು ಅವರ ಎಲ್ಲ ಕಾರ್ಯಗಳಲ್ಲಿ ಕೂಡ ಅವರ ದೊಡ್ಡ ಶಕ್ತಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕಾಣಿಸಿಕೊಳ್ಳುತ್ತಿದ್ದರು. ಆದರೂ ಒಂದೇ ಒಂದು ದಿನವೂ ಕೂಡ ಪ್ರಚಾರವನ್ನು ಗಿಟ್ಟಿಸಿ ಕೊಂಡವರಲ್ಲ.

puneeth ashwini 1 | ದುಃಖದಲ್ಲೇ ಇದ್ದರೂ ಕೂಡ ಮತ್ತೊಬ್ಬರ ಜೀವನಕ್ಕೆ ಬೆಳಕಾಗಲು ಹೊರಟ ಅಶ್ವಿನಿ ಪುನೀತ್ ರಾಜಕುಮಾರ್, ಮಾಡಲು ಹೊರಟಿರುವುದಾದರೂ ಏನು ಗೊತ್ತೇ?
ದುಃಖದಲ್ಲೇ ಇದ್ದರೂ ಕೂಡ ಮತ್ತೊಬ್ಬರ ಜೀವನಕ್ಕೆ ಬೆಳಕಾಗಲು ಹೊರಟ ಅಶ್ವಿನಿ ಪುನೀತ್ ರಾಜಕುಮಾರ್, ಮಾಡಲು ಹೊರಟಿರುವುದಾದರೂ ಏನು ಗೊತ್ತೇ? 2

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸರ್ಕಾರದ ಹಲವಾರು ಜಾಹೀರಾತುಗಳಲ್ಲಿ ಒಂದು ರೂಪಾಯಿ ಸಂಭಾವನೆ ಪಡೆಯದೆ ನಟಿಸಿ ಜನರಲ್ಲಿ ಅರಿವು ಮೂಡಿಸುವಂತೆ ಮಾಡುತ್ತಿದ್ದರು. ನಂದಿನಿ ಹಾಲು ಮಹಿಳಾ ಸುರಕ್ಷತೆ ಬಿಎಂಟಿಸಿ ಹೀಗೆ ಹಲವಾರು ಸಾಮಾಜಿಕ ಕಳಕಳಿ ಹಿನ್ನೆಲೆಯನ್ನು ಹೊಂದಿರುವಂತಹ ಜಾಹೀರಾತುಗಳಲ್ಲಿ ಪುನೀತ್ ರಾಜಕುಮಾರ್ ಅವರು ಕಾಣಿಸಿಕೊಳ್ಳುತ್ತಿದ್ದರು. ಈಗ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರ ಜೊತೆಗೆ ಇಲ್ಲ. ಎಲ್ಲಾ ಜವಾಬ್ದಾರಿಗಳು ಕೂಡ ಅಶ್ವಿನಿ ಅವರ ಮೇಲೆ ಈಗ ನಿಂತಿದೆ.

ಅಂದು ಪುನೀತ್ ರಾಜಕುಮಾರ್ ರವರಿಂದ ಹಲವಾರು ಜನರಿಗೆ ಕೆಲಸಕಾರ್ಯಗಳು ದೊರಕುತ್ತಿದ್ದವು. ಇಂದು ಅವರು ನಡೆಸಿಕೊಂಡು ಬರುತ್ತಿರುವ ಜವಾಬ್ದಾರಿಯನ್ನು ಅವರ ಪತ್ನಿ ಆಗಿರುವ ಅಶ್ವಿನಿಯವರ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಹಾಗೂ ಹಲವಾರು ಜನರ ಜೀವನದ ಪಾಲಿಗೆ ಬೆಳಕಾಗಿದ್ದಾರೆ. ಅಂದಿನ ಕಾಲದಲ್ಲಿ ಪುನೀತ್ರಾಜಕುಮಾರ್ ಅವರು ಹೇಳಿರುವ ಮಾತಿನಿಂದ ಅದೆಷ್ಟು ಜೀವಗಳು ಉಳಿದುಕೊಂಡಿದ್ದವು. ಈಗ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇದೇ ರೀತಿಯ ಸಾಮಾಜಿಕ ಕಳಕಳಿ ಹರಡುವಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಪೊಲೀಸರು ನಡೆಸುತ್ತಿರುವ ಹೆಲ್ಮೆಟ್ ಧರಿಸಿ ಪ್ರಾಣವನ್ನು ಉಳಿಸೋಣ ಎಂಬ ಅಭಿಯಾನಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕೂಡ ಭಾಗಿಯಾಗಿದ್ದಾರೆ.

ಇದು ಮಾಡಿದ್ದು ಜೇಮ್ಸ್ ಚಿತ್ರ ಬಿಡುಗಡೆಯಾಗುವ ಒಂದು ದಿನ ಮುನ್ನ. ಇಷ್ಟೆಲ್ಲ ದುಃಖಗಳು ಇದ್ದರೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಲ್ಮೆಟ್ ಕುರಿತಂತೆ ತಿಳುವಳಿಕೆ ನೀಡಿರುವ ಹಳೆಯ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಈ ಅಭಿಯಾನಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಚಾಲನೆ ನೀಡಿದರು. ಗುಣಮಟ್ಟದ ಹೆಲ್ಮೆಟ್ ಅನ್ನು ಬಳಸಿ ಪ್ರಾಣವನ್ನು ಉಳಿಸಿ ಎನ್ನುವ ಘೋಷವಾಕ್ಯವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಮಾಜದ ದ್ವಿಚಕ್ರ ವಾಹನ ಸವಾರರಿಗೆ ಹೇಳಿದ್ದಾರೆ.

ಪ್ರತಿಯೊಂದು ಕಾರ್ಯಕ್ರಮಗಳಿಗೂ ಹೋದಾಗ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ರವರನ್ನು ನೆನೆದುಕೊಂಡು ಕಣ್ಣೀರು ಹಾಕುತ್ತಿರುತ್ತಾರೆ. ಇತ್ತೀಚಿಗಷ್ಟೇ ನಡೆದಿರುವ ಜೇಮ್ಸ್ ಕಾರ್ಯಕ್ರಮದಲ್ಲಿ ಕೂಡ ಇದಕ್ಕೆ ಸಾಕ್ಷಿಯೆಂಬಂತೆ ಘಟನೆ ನಡೆದಿತ್ತು. ಇಷ್ಟೆಲ್ಲ ದೂರವಿದ್ದರೂ ಕೂಡ ಯಾರ ಕಾರ್ಯಕ್ರಮಕ್ಕೆ ಕರೆದರು ಅವರಿಗೆ ಇಲ್ಲ ಎನ್ನುವುದಿಲ್ಲ ನಮ್ಮ ಅಶ್ವಿನಿ ಅವರು. ಬೆಂಗಳೂರು ಟ್ರಾಫಿಕ್ ಪೊಲೀಸರು ಕರೆದಾಗಲೂ ಕೂಡ ನನ್ನಿಂದ ಒಳ್ಳೆಯ ಸಂದೇಶ ಸಮಾಜಕ್ಕೆ ತಲುಪುತ್ತದೆ ಎಂಬುದಾದರೆ ಖಂಡಿತ ಬರುತ್ತೇನೆ ಎಂಬುದಾಗಿ ಹೇಳಿ ಯಾವುದನ್ನು ಯೋಚಿಸದೇ ನೇರವಾಗಿ ಹೋದವರು. ಎಷ್ಟೊಂದು ಒಳ್ಳೆಯ ಮನಸ್ಸಿನವರಾದ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಇನ್ನಾದರೂ ದೇವರು ಒಳ್ಳೆಯ ದಿನಗಳನ್ನು ಹಾಗೂ ಸುಖ ಶಾಂತಿಯನ್ನು ನೀಡಲಿ ಎಂಬುದಾಗಿ ಆಶಿಸೋಣ.

Comments are closed.