ಇಲ್ಲಿಯವರೆಗೂ ಯಾರು ತೋರಿಸಿರದ ಆರತಿ ರವರ ಮಗಳನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ 70ರ ದಶಕದ ಬಹು ಬೇಡಿಕೆಯ ನಟಿಯರಲ್ಲಿ ನಟಿ ಆರತಿ ಕೂಡ ಒಬ್ಬರು. ಇವರು ಕನ್ನಡದ ಬಹುತೇಕ ಎಲ್ಲಾ ನಟರಿಗೂ ಜೋಡಿಯಾಗಿ ನಟಿಸಿದ್ದಾರೆ. ಡಾ, ರಾಜ ಕುಮಾರ್, ಅನಂತ ನಾಗ್, ಅಂಬರೀಶ್, ವಿಷ್ಣುವರ್ಧನ್ ಹೀಗೆ ಎಲ್ಲಾ ಮೇರು ನಟರಿಗೆ ಜೊತೆಯಾಗಿ ಹಿಟ್ ಚಿತ್ರಗಳನ್ನು ನೀಡಿದ್ದವರು ನಟಿ ಆರತಿ.

ನಟಿ ಆರತಿಯವರು 70-80ರ ದಶಕದ ಅದೃಷ್ಟದ ನಟಿ ಎಂದೇ ಖ್ಯಾತರಾಗಿದ್ದವರು. ಗೆಜ್ಜೆ ಪೂಜೆ ಅವರ ಕನ್ನಡದ ಮೊದಲ ಸಿನಿಮಾ ಈ ಸಿನಿಮಾದಲ್ಲಿ ನಟಿಸುವಾಗ ಆರತಿಯವರಿಗೆ 16 ವರ್ಷ ವಯಸ್ಸು ಸಣ್ಣ ವಯಸ್ಸಿನಲ್ಲಿಯೇ ಬಣ್ನ ಹಚ್ಚಿದ ನಟಿ ಆರತಿ ಆ ನಂತರದಲ್ಲಿ ಸಾಕಷ್ಟು ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳನ್ನು ಕೊಡುತ್ತಲೇ ಹೋದರು.

ನಟಿ ಆರತಿ ನಟಿಸಿರುವ ರಂಗನಾಯಕಿ, ಉಪಾಸನೆ, ಹೊಂಬಿಸಿಲು, ರಾಜಾ ನನ್ನ ರಾಜ, ಸಿಪಾಯಿ ರಾಮು, ನಾಗರಹಾವು, ಬಂಗಾರದ ಪಂಜರ, ಪ್ರೇಮದ ಕಾಣಿಕೆ, ಹೀಗೆ ಹೇಳುತ್ತಾ ಹೋದರೆ ಆರತಿ ಅಟನೆಯ ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲಾ ಚಿತ್ರಗಳೂ ಕೂಡ ಬಹುತೇಕ ಯಶಸ್ವಿ ಚಿತ್ರಗಳೆ. ಆರತಿಯವರು ಟಾಪ್ ನಟಿಯಾಗಿದ್ದಾಗಲೇ ಪುಟ್ಟಣ್ಣ ಕಣಗಾಲ್ ಅವರೊಂದಿಗಿನ ಸಂಬಂಧದಿಂದಾಗಿ ಸುದ್ದಿಯಾಗುತ್ತಾರೆ.

ಇನ್ನು 1986ರ ನಂತರ ನಟಿ ಆರತಿಯವರು, ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ಎನಿಸಿಕೊಂಡಿರುವಾಗಲೇ ಚಿತ್ರರಂಗವನ್ನು ತೊರೆಯುತ್ತಾರೆ. ಮದುವೆಯಾಗಿ ವಿದೇಶದಲ್ಲಿ ನೆಲೆಸುತ್ತಾರೆ. ಅದಾದ ಮೇಲೆ ಚಿತ್ರ ನಿರ್ಮಾಣದಲ್ಲಿ ಆರತಿ ತೊಡಗಿಕೊಳ್ಳುತ್ತಾರೆ. 2005ರಲ್ಲಿ ತಮ್ಮ ಮಗಳು ಯಶಸ್ವಿನಿಗಾಗಿ ಮಿಠಾಯಿ ಮನೆ ಚಿತ್ರವನ್ನು ನಿರ್ಮಿಸುತ್ತಾರೆ. ಈ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಲಭಿಸಿದೆ. ಇನ್ನು ನಟಿ ಆರತಿ ಚಿತ್ರರಂಗದಿಂದ ದೂರವುಳಿದರೂ ಕೂಡ ಪತಿಯ ಜೊತೆ ಸೇರಿ ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಜನಮಾನಸದಲ್ಲಿ ನೆಲೆಸಿದ್ದಾರೆ.

Comments are closed.