ಒಂದು ಕಾಲದ ಟಾಪ್ ನಟಿ ಭವ್ಯ ರವರ ಕುಟುಂಬ ಹೇಗಿದೆ ಗೊತ್ತಾ?? ಮಗಳು ಹೇಗಿದ್ದಾರೆ ಎಂದು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದಲ್ಲಿ 70 ಹಾಗೂ 80ರ ದಶಕದಲ್ಲಿ ಹಲವಾರು ಹೊಸ ನಟ-ನಟಿಯರು ಬಂದು ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಹಲವಾರು ಅಭಿಮಾನಿ ಬಳಗವನ್ನು ಪಡೆದುಕೊಂಡರು. ಅಂಥವರಲ್ಲಿ ನಟಿ ಭವ್ಯ ಕೂಡ ಒಬ್ಬರು. ಹೌದು ಸ್ನೇಹಿತರೆ 70 ಹಾಗೂ 80ರ ದಶಕದಲ್ಲಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಮೆರೆದವರು ಭವ್ಯ ರವರು. ಇನ್ನು ನಟಿ ಭವ್ಯ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ನೂರು ಚಿತ್ರಗಳಲ್ಲಿ ನಟಿಸಿದ ನಟಿ ಎಂಬ ಖ್ಯಾತಿಯನ್ನು ಕೂಡ ಪಡೆದಿದ್ದಾರೆ.

ಹೌದು ಸ್ನೇಹಿತರೆ ಅದರಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ರವರೊಂದಿಗೆ ನೀ-ಬರೆದ-ಕಾದಂಬರಿ ಲಯನ್ ಜಗಪತಿರಾವ್ ಹೃದಯಗೀತೆ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಸೂಪರ್ ಜೋಡಿ ಆಗಿ ಕೂಡ ಕಾಣಿಸಿಕೊಂಡರು. ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸಿದರು ಸ್ಟಾರ್ ನಟಿಯಾಗಿ ಕೂಡ ಕಾಣಿಸಿಕೊಂಡರು. 80ರ ದಶಕದಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡ ತಮ್ಮ ನಟನಾ ಛಾಪನ್ನು ಮೂಡಿಸಿದ್ದರು. ಇನ್ನು ನಂತರದ ದಿನಗಳಲ್ಲಿ ಮದುವೆಯಾದಮೇಲೆ ಭವ್ಯ ರವರು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದು ಕೊಂಚ ಕಡಿಮೆಯಾಯಿತು.

ಇನ್ನು ಭವ್ಯ ರವರು ಮುಖೇಶ್ ಅವರನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮುಖೇಶ್ ಅವರು ಮುಂಬೈನಲ್ಲಿ ರೆಸ್ಟೋರೆಂಟ್ ಉದ್ಯಮದಲ್ಲಿ ತೊಡಗಿದ್ದವರು. ಇನ್ನು ಭವ್ಯ ರವರಿಗೆ ಒಬ್ಬ ಸುಂದರ ಮಗಳಿದ್ದು ಅವರಿಗೆ ಚಿತ್ರರಂಗದಲ್ಲಿ ಬರಲು ಆಸಕ್ತಿ ಇಲ್ಲ. ಭವ್ಯ ರವರ ಮಗಳು ಉನ್ನತ ವ್ಯಾಸಂಗದಲ್ಲಿ ತೊಡಗಿದ್ದಾರೆ. ಇನ್ನು ಭವ್ಯ ರವರು ಆಗೊಮ್ಮೆ ಈಗೊಮ್ಮೆ ಕೆಲವು ಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಭವ್ಯ ರವರ ಮಗಳು ಹಾಗೂ ಪತಿಯ ಫೋಟೋಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೀವು ನೋಡಬಹುದಾಗಿದೆ.

Comments are closed.