ಐಪಿಎಲ್ ನಲ್ಲಿ ಫುಲ್ ಬಿಲ್ಡ್ ಅಪ್ ಕೊಟ್ಟು, ಎಲ್ಲರನ್ನು ಅಣಕಿಸುತ್ತಿದ್ದ ಬೌಲರ್ ಕಥೆ ಇಂದು ಏನಾಗಿದೆ ಗೊತ್ತೆ?? ನಾನೇ ಎಂದು ಮೇರೇ ಏನಾಗುತ್ತದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಗೆದ್ದುಕೊಂಡು 5 t20 ಪಂದ್ಯಗಳ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಒಂದು ಪಂದ್ಯಗಳನ್ನು ಸೋತು ಉಳಿದ ಎರಡು ಪಂದ್ಯಗಳನ್ನು ಗೆಲ್ಲುವ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಇದರ ನಡುವಲ್ಲಿ ಹಲವಾರು ಅನುಭವಿ ಹಾಗೂ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವ ಭಾರತೀಯ ಕ್ರಿಕೆಟ್ ತಂಡದ ಟೀಮ್ ಮ್ಯಾನೇಜ್ಮೆಂಟ್ ಹಲವಾರು ಯುವ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶವನ್ನು ನೀಡುತ್ತಿದೆ.

ಆದರೆ ಕೆಲವು ಆಟಗಾರರು ನೀಡಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಇದು ಮುಂದಿನ ದಿನಗಳಲ್ಲಿ ಅವರಿಗೆ ಮಹತ್ವದ ಟೂರ್ನಮೆಂಟ್ಗಳಲ್ಲಿ ತಂಡದಿಂದ ಹೊರಬೀಳಬೇಕಾದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂಬುದಾಗಿ ಹೇಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಐಪಿಎಲ್ ನಲ್ಲಿ ಚೆನ್ನಾಗಿ ಪ್ರದರ್ಶನ ನೀಡಿ ಬೇರೆ ಆಟಗಾರರನ್ನು ಅಣಕಿಸಿದ್ದ ಬೌಲರ್ ಆವೇಶ್ ಖಾನ್ ಈ ಸರಣಿಯಲ್ಲಿ ಮಾತ್ರ ಸಂಪೂರ್ಣ ಮಂಕಾಗಿದ್ದಾರೆ ಎಂಬುದಾಗಿ ನಿಚ್ಚಳವಾಗಿ ಕಂಡುಬರುತ್ತಿದೆ.

aavesh | ಐಪಿಎಲ್ ನಲ್ಲಿ ಫುಲ್ ಬಿಲ್ಡ್ ಅಪ್ ಕೊಟ್ಟು, ಎಲ್ಲರನ್ನು ಅಣಕಿಸುತ್ತಿದ್ದ ಬೌಲರ್ ಕಥೆ ಇಂದು ಏನಾಗಿದೆ ಗೊತ್ತೆ?? ನಾನೇ ಎಂದು ಮೇರೇ ಏನಾಗುತ್ತದೆ ಗೊತ್ತೇ??
ಐಪಿಎಲ್ ನಲ್ಲಿ ಫುಲ್ ಬಿಲ್ಡ್ ಅಪ್ ಕೊಟ್ಟು, ಎಲ್ಲರನ್ನು ಅಣಕಿಸುತ್ತಿದ್ದ ಬೌಲರ್ ಕಥೆ ಇಂದು ಏನಾಗಿದೆ ಗೊತ್ತೆ?? ನಾನೇ ಎಂದು ಮೇರೇ ಏನಾಗುತ್ತದೆ ಗೊತ್ತೇ?? 2

ಈಗಾಗಲೇ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 9.2 ಓವರ್ ಗಳನ್ನು ಬೌಲಿಂಗ್ ಮಾಡಿರುವ ಆವೇಶ್ ಖಾನ್ ರವರು ಬರೋಬ್ಬರಿ 121 ರನ್ನುಗಳನ್ನು ಬಿಟ್ಟುಕೊಟ್ಟು ಅತ್ಯಂತ ಕೆಟ್ಟ ಭಾರತೀಯ ಬೌಲರ್ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಐಪಿಎಲ್ ನಲ್ಲಿ ಅಬ್ಬರಿಸುವ ಆವೇಶ್ ಖಾನ್ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಯಾಕೆ ಮಂಕಾಗುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿಲ್ಲ. ಅದೇನೇ ಇರಲಿ ಇವರ ಕಳಪೆ ಪ್ರದರ್ಶನ ಎನ್ನುವುದು ಏಷ್ಯಾ ಕಪ್ ಹಾಗೂ ವಿಶ್ವಕಪ್ ತಂಡಕ್ಕೆ ಆಯ್ಕೆ ಆಗುವ ಟಿಕೆಟ್ ಅನ್ನು ತಪ್ಪಿಸುವಂತೆ ಮಾಡದಿದ್ದರೆ ಸಾಕು ಎನ್ನುವುದಾಗಿ ಕೆಲವರು ಹೇಳುತ್ತಿದ್ದರೆ ಇನ್ನು ಕೆಲವರು ಇಂತಹ ಕಳಪೆ ಆಟಗಾರ ಇಂತಹ ಪ್ರಮುಖ ಐಸಿಸಿ ಟೂರ್ನಮೆಂಟ್ ಗಳಲ್ಲಿ ಬೇಡ ಎಂಬುದಾಗಿ ಕೂಡ ಹೇಳುತ್ತಿದ್ದಾರೆ. ಆವೇಷ್ ಖಾನ್ ಅವರ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.