News from ಕನ್ನಡಿಗರು

ರಶ್ಮಿಕಾ ಅಷ್ಟೇ ಅಲ್ಲ, ಪುಷ್ಪ 2 ನಲ್ಲಿ ಮತ್ತೊಬ್ಬರು ಕನ್ನಡತಿ ಕಾಣಿಸಿಕೊಳ್ಳುತ್ತಾರಾ?? ಟಾಪ್ ನಟಿ ಯಾರು ಗೊತ್ತೇ??

10

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಸುಕುಮಾರ್ ನಿರ್ದೇಶನದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರದ ಮೊದಲ ಭಾಗ ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಸಿನಿಮಾ ಪ್ರೇಕ್ಷಕರಿಗೂ ಕೂಡ ಮೆಚ್ಚುಗೆಯಾಗಿತ್ತು.

ಈಗಾಗಲೇ ಪುಷ್ಪ ಚಿತ್ರದ ಮೊದಲ ಭಾಗ 350 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು ಹೀಗಾಗಿ ಪುಷ್ಪ ಚಿತ್ರದ ಎರಡನೇ ಭಾಗದ ಕುರಿತಂತೆ ಪ್ರತಿಯೊಬ್ಬ ಸಿನಿಮಾ ಪ್ರೇಮಿಗೂ ಕೂಡ ನಿರೀಕ್ಷೆ ಹೆಚ್ಚಾಗಿದೆ. ಎರಡನೇ ಭಾಗದಲ್ಲಿ ಈಗಾಗಲೇ ತಿಳಿದು ಬಂದಿರುವ ಸುದ್ದಿಯ ಪ್ರಕಾರ ತಮಿಳು ನಟ ವಿಜಯ್ ಸೇತುಪತಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೇಳಿ ಬರುತ್ತದೆ. ಇನ್ನು ನೀವು ಅಂದುಕೊಂಡ ಹಾಗೆ ಸಿನಿಮಾ ಇನ್ನಷ್ಟು ರಿಚ್ ಆಗಿ ಮೂಡಿಬರಲಿದೆ. ಇನ್ನು ಈಗ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಕೇವಲ ರಶ್ಮಿಕ ಮಂದಣ್ಣ ಮಾತ್ರವಲ್ಲದೆ ಮತ್ತೊಬ್ಬ ಕನ್ನಡ ಮೂಲದ ನಟಿ ಕೂಡ ಇದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇದು ಕನ್ನಡ ಪ್ರೇಕ್ಷಕರಿಗೆ ಆಶ್ಚರ್ಯವೆನಿಸುವಂತದ್ದು.

ಬಹುಭಾಷಾ ತಾರೆಯಾಗಿ ಮಿಂಚಿರುವ ಪ್ರಿಯಾಮಣಿ ರವರು ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಇತ್ತೀಚಿನ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ. ಇತ್ತೀಚಿಗಷ್ಟೇ ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿ ಬಂದಿರುವ ಪ್ರಿಯಾಮಣಿ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ವಿಜಯ್ ಸೇತುಪತಿ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಯಾವ ಪಾತ್ರವನ್ನಾದರೂ ಕೂಡ ಮಾಡಲು ಸಿದ್ಧವಾಗಿರುವ ಪ್ರಿಯಾಮಣಿ ಈ ಸಿನಿಮಾದಲ್ಲಿ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ.

Leave A Reply

Your email address will not be published.