ಕೊನೆಗೂ ನಿವೇದಿತಾ ರವರ ಟ್ಯಾಲೆಂಟ್ ಗೆ ಸಿಕ್ತು ಮನ್ನಣೆ: ಹುಡುಕಿಕೊಂಡು ಬಂದ ಅದೃಷ್ಟ. ಏನು ಗೊತ್ತೇ?? ಇನ್ನು ನಿವೇದಿತಾ ರವರೆ ಟಾಪ್.

ನಮಸ್ಕಾರ ಸ್ನೇಹಿತರೆ ಮೊದಲಿಗೆ ಡಬ್ಸ್ಮ್ಯಾಶ್ ಮೂಲಕ ವಿಡಿಯೋ ಮಾಡಿ ಅದರಿಂದ ವೈರಲ್ ಆಗಿ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡ ನಿವೇದಿತಾ ಗೌಡ ಅವರ ಕುರಿತಂತೆ ನಿಮಗೆಲ್ಲರಿಗೂ ಗೊತ್ತೇ ಇದೆ. ನಂತರ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರನ್ನು ಸದ್ದಿಲ್ಲದೆ ವಿವಾಹವಾಗುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ಯಾವ ಸೆಲೆಬ್ರೆಟಿಗೂ ಕಮ್ಮಿ ಇಲ್ಲದಂತೆ ಮಿಲಿಯನ್ಗಟ್ಟಲೆ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಕೇವಲ ಎಷ್ಟು ಮಾತ್ರವಲ್ಲದ ಕಿರುತೆರೆಯಲ್ಲಿ ಕೂಡ ರಾಜಾರಾಣಿ ಕಾರ್ಯಕ್ರಮ ಸೇರಿದಂತೆ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೆಲ್ಲ ಕಿರುತೆರೆಯ ಕಾರ್ಯಕ್ರಮಗಳು ಹಾಗೂ ಸೋಶಿಯಲ್ ಮೀಡಿಯಾದಿಂದ ಜನಪ್ರಿಯತೆಯನ್ನು ಹೊಂದಿರುವ ನಿವೇದಿತಾ ಗೌಡ ರವರು, ಸದ್ಯಕ್ಕೆ 2022ರ ಮಿಸ್ಸಸ್ ಇಂಡಿಯಾ ಪ್ರತಿಷ್ಠಿತ ಅವಾರ್ಡ್ ಅನ್ನು ಕೂಡ ಗೆಲ್ಲುವ ಮೂಲಕ ಮತ್ತೊಂದು ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಕೇವಲ ಸೋಶಿಯಲ್ ಮೀಡಿಯದಿಂದ ಪ್ರಾರಂಭಿಸಿ ಇಂದು ಪ್ರತಿಷ್ಠಿತ ಮಿಸ್ಸೆಸ್ ಇಂಡಿಯಾ ಅವಾರ್ಡ್ ಅನ್ನು ಗೆಲ್ಲುವ ನಿವೇದಿತಾ ಗೌಡ ರವರ ಹಾದಿ ಜನರ ಮೆಚ್ಚುಗೆಯಿಂದ ಕೂಡಿದೆ ಎಂದರೆ ತಪ್ಪಾಗಲಾರದು.

nivi | ಕೊನೆಗೂ ನಿವೇದಿತಾ ರವರ ಟ್ಯಾಲೆಂಟ್ ಗೆ ಸಿಕ್ತು ಮನ್ನಣೆ: ಹುಡುಕಿಕೊಂಡು ಬಂದ ಅದೃಷ್ಟ. ಏನು ಗೊತ್ತೇ?? ಇನ್ನು ನಿವೇದಿತಾ ರವರೆ ಟಾಪ್.
ಕೊನೆಗೂ ನಿವೇದಿತಾ ರವರ ಟ್ಯಾಲೆಂಟ್ ಗೆ ಸಿಕ್ತು ಮನ್ನಣೆ: ಹುಡುಕಿಕೊಂಡು ಬಂದ ಅದೃಷ್ಟ. ಏನು ಗೊತ್ತೇ?? ಇನ್ನು ನಿವೇದಿತಾ ರವರೆ ಟಾಪ್. 2

ಅದರಲ್ಲೂ ಮಿಸ್ಸೆಸ್ ಇಂಡಿಯಾ ಗೆಲ್ಲುತ್ತಿದ್ದಂತೆ ನಿವೇದಿತಾ ಗೌಡ ಅವರ ವರ್ಚಸ್ಸು ಹೆಚ್ಚಾಗಿದ್ದು ಚಿತ್ರರಂಗದಿಂದ ಚಿತ್ರಗಳ ಅವಕಾಶ ಕೂಡ ಅವರನ್ನು ಹುಡುಕಿಕೊಂಡು ಬರುತ್ತಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಸದ್ಯಕ್ಕೆ ತೆಲುಗು ಚಿತ್ರವೊಂದಕ್ಕೆ ನಾಯಕಿಯಾಗಿ ನಿವೇದಿತ ಗೌಡ ಸಹಿ ಹಾಕಿದ್ದು ಮುಂದಿನ ದಿನಗಳಲ್ಲಿ ಅಭಿಮಾನಿಗಳೊಂದಿಗೆ ಇನ್ನಷ್ಟು ಹೊಸ ಸಿನಿಮಾಗಳ ಅಪ್ಡೇಟ್ಗಳನ್ನು ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ಹಲವಾರು ಕನ್ನಡ ಮೂಲದ ನಟಿಯರು ತೆಲುಗು ಚಿತ್ರರಂಗಕ್ಕೆ ಹೋಗಿ ಕನ್ನಡದ ಹೆಸರನ್ನು ಇನ್ನಷ್ಟು ಬಾನೆತ್ತರಕ್ಕೆ ಹಾರಾಡುವಂತೆ ಮಾಡಿದ್ದಾರೆ. ನಿವೇದಿತಾ ಗೌಡ ಕೂಡ ಇದೇ ನಟಿಯರ ಸಾಲಿಗೆ ಸೇರಲಿ ಎಂದು ಆಶಿಸೋಣ.

Comments are closed.