ನಮ್ಮನೆ ಯುವರಾಣಿ ಅಹಲ್ಯಳ ನಿಜ ಜೀವನದ ಪತಿ ಯಾರು ಗೊತ್ತಾ? ಹೇಗಿದೆ ಗೊತ್ತಾ ಸಖತ್ ಕ್ಯೂಟ್ ಜೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಪ್ರಸಾರವಾಗುತ್ತಿದ್ದು ಜನರಿಗೆ ಪ್ರತಿದಿನ ಮನರಂಜನೆ ನೀಡುವುದರ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಇನ್ನು ಇಂತಹ ಧಾರಾವಾಹಿಗಳಲ್ಲಿ ನಮ್ಮನೆ ಯುವರಾಣಿ ಧಾರಾವಾಹಿ ಕೂಡ ಒಂದು. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಸಾಕಷ್ಟು ಜನರಿಗೆ ನೆಚ್ಚಿನ ಧಾರಾವಾಹಿಯಾಗಿದೆ.

ಅಷ್ಟೇ ಅಲ್ಲದೆ ಆ ಧಾರವಾಹಿಯನ್ನು ಪ್ರತಿನಿತ್ಯ ತಪ್ಪದೆ ಹಲವಾರು ಜನರು ವೀಕ್ಷಿಸುತ್ತಾರೆ. ಇನ್ನು ಈ ಧಾರವಾಹಿಯಲ್ಲಿ ಸಾಕಷ್ಟು ಕಲಾವಿದರು ಹಲವಾರು ಪಾತ್ರಗಳಿಗೆ ಜೀವ ತುಂಬುತ್ತ ಅದ್ಭುತವಾಗಿ ನಟಿಸುತ್ತಿದ್ದಾರೆ. ಅಂತಹ ಪಾತ್ರಗಳಲ್ಲಿ ಅಲ್ಲ ಪಾತ್ರ ಕೂಡ ಒಂದು. ಹೌದು ನಮ್ಮನೆ ಯುವರಾಣಿ ಧಾರವಾಹಿಯ ಪ್ರಮುಖ ಪಾತ್ರಗಳಲ್ಲಿ ಅಹಲ್ಯ ಪಾತ್ರ ಒಂದಾಗಿದೆ. ಇನ್ನು ಈ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ನಿಜವಾದ ಹೆಸರು ಕಾವ್ಯ ಮಹಾದೇವ್.

ಹೌದು ಕಾವ್ಯ ಮಹಾದೇವ್ ಕನ್ನಡ ಕಿರುತೆರೆಯ ಪ್ರಮುಖ ನಟಿಯರಲ್ಲಿ ಒಬ್ಬರು. ನಮ್ಮನೆ ಯುವರಾಣಿ ಮಾತ್ರವಲ್ಲದೆ ಕಾವ್ಯ ಮಹಾದೇವ್ ಅವರು ಚರಣದಾಸಿ ಹಾಗೂ ನಾ ನಿನ್ನ ಬಿಡಲಾರೆ ಎಂಬ ಧಾರವಾಹಿಗಳಲ್ಲಿ ಕೂಡಾ ಅಭಿನಯಿಸಿದ್ದಾರೆ. ಮೊದಲಿನಿಂದಲೂ ಕಾವ್ಯ ಮಹಾದೇವ ಅವರಿಗೆ ಮಾಡಲಿಂಗ್ ನಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ ಅವರು ಮಾಡಲಿಂಗ್ ಕ್ಷೇತ್ರಕ್ಕೆ ಬಂದು ಇದೀಗ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಚರಣದಾಸಿ ಎಂಬ ಧಾರವಾಹಿಯ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ನಟಿ ಇಂದು ಸಾಕಷ್ಟು ಯುವಮನಸ್ಸುಗಳನ್ನು ಕದ್ದಿದ್ದಾರೆ.

ಚರಣದಾಸಿ ಧಾರವಾಹಿಯ ನಂತರ ಅವರು ನಾ ನಿನ್ನ ಬಿಡಲಾರೆ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಇನ್ನು ಮೊದಲೆರಡು ಧಾರಾವಾಹಿಗಳ ಮೂಲಕ ಸದ್ದು ಮಾಡಿದ್ದ ಕಾವ್ಯ ಮಹಾದೇವ್ ಅವರು ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಅಹಲ್ಯ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಇವರ ಅಭಿನಯಕ್ಕೆ ಸಾಕಷ್ಟು ಜನ ಮಾರು ಹೋಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ.

ಇನ್ನೂ ಕಾವ್ಯ ಮಹಾದೇವ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರು 2018ರಲ್ಲಿ ತಮ್ಮ ಬಹುಕಾಲದ ಗೆಳೆಯ ಮಹದೇವ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ಈ ಜೋಡಿ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದು ನಂತರ ಆ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ಇವರು 2018ರಲ್ಲಿ ಮನೆಯವರನ್ನೆಲ್ಲ ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಇವರ ಪತಿ ಮಹದೇವ್ ಅವರು ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇತ್ತೀಚಿಗಷ್ಟೇ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಇವರ ಎರಡನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಕೂರ್ಗ್ ಎಂಬ ಸ್ಥಳದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು. ಆ ಸಮಯದಲ್ಲಿ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿದ್ದವು. ಇನ್ನು ಇದೀಗ ಕಾವ್ಯ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ, ಅತ್ತ ಅವರ ಪತಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಈ ಜೋಡಿ ಸುಖ ಸಂಸಾರ ನಡೆಸುತ್ತಿದ್ದು ಇವರ ಜೀವನ ಹೀಗೆ ಸಂತೋಷದಿಂದ ತುಂಬಿರಲಿ ಎಂದು ನಾವು ಹಾರೈಸೋಣ.

Comments are closed.