ಗೀತಾ ಧಾರಾವಾಹಿಯ ವಿಲ್ಲನ್ ಭಾನುಮತಿ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ? ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ವೀಕ್ಷಕರ ಗಮನ ಸೆಳೆಯುತ್ತ ಪೈಪೋಟಿ ನಡೆಸಿವೆ. ಹೌದು ವಿಭಿನ್ನವಾದ ಕಥೆ, ಸಂಭಾಷಣೆ ಹಾಗೂ ಹಿರಿಯ ಕಲಾವಿದರನ್ನು ಹೊಂದಿರುವ ಅನೇಕ ಧಾರವಾಹಿಗಳು ಟಿ ಆರ್ ಪಿ ರೇಟಿಂಗ್ ನಲ್ಲಿ ಟಾಪ್ ಸ್ಥಾನ ಪಡೆಯಲು ಪೈಪೋಟಿ ನಡೆಸಿವೆ. ಇನ್ನು ಇಂತಹ ಧಾರಾವಾಹಿಗಳಲ್ಲಿ ಕನ್ನಡ ಕಿರುತೆರೆಯ ಗೀತ ಧಾರಾವಾಹಿ ಕೂಡ ಒಂದು.

ಈ ಧಾರಾವಾಹಿಯಲ್ಲಿ ನಾಯಕ ನಟಿ ಗೀತಾ ಪಾತ್ರದಲ್ಲಿ ನಟಿಸಿರುವ ಭವ್ಯ ಗೌಡ ಅವರು ಈಗಾಗಲೇ ಸಾಕಷ್ಟು ಯುವಕರ ಹೃದಯಗಳನ್ನು ಕದ್ದಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಪೇಜುಗಳನ್ನು ಕೂಡ ಹೊಂದಿದ್ದಾರೆ. ಇನ್ನು ಧಾರವಾಹಿಯಲ್ಲಿ ನಾಯಕನಟಿ ಎಂದ ಮೇಲೆ ಆಕೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಇಂತಹ ನಾಯಕಿಗೆ ಖಳನಾಯಕಿ ಇರಲೇಬೇಕಾಗುತ್ತದೆ. ಅಂದಾಗ ಮಾತ್ರ ಧಾರಾವಾಹಿ ವೀಕ್ಷಕರ ಗಮನ ಸೆಳೆಯುತ್ತದೆ.

ಅದೇ ರೀತಿಯಲ್ಲಿ ನಾಯಕನಟಿ ಗೀತಾಗೂ ಕೂಡ ಖಳನಾಯಕಿ ಉಂಟು. ಹೌದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಾ ನಾಯಕಿಗೆ ಕಷ್ಟದ ಪರಿಸ್ಥಿತಿಗಳನ್ನು ನೀಡುತ್ತಾ ಜನರ ಮನಗೆದ್ದಿರುವ ನಟಿ ಭಾನುಮತಿ ಗೀತಾ ಧಾರಾವಾಹಿಯ ಖಳನಾಯಕಿ. ಇನ್ನು ಭಾನುಮತಿ ಅವರ ನಿಜವಾದ ಹೆಸರು ಶರ್ಮಿತ ಗೌಡ. ಇನ್ನು ಅವರು ತಮ್ಮ ಪಾತ್ರದ ಮೂಲಕ ಮಿಂಚಿದ್ದು, ಎಲ್ಲರಿಗೂ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ. ಇವರು ಮೂಲತಃ ಚಿಕ್ಕಮಗಳೂರಿನವರು.

ಇನ್ನು ಇವರು 2016ರಲ್ಲಿ ಮಿಸ್ ಚಿಕ್ಕಮಗಳೂರು ಕಿರೀಟವನ್ನು ಧರಿಸಿದ್ದಾರೆ. ಅಷ್ಟೇ ಅಲ್ಲದೆ 2017ರಲ್ಲಿ ಏರ್ಪಡಿಸಲಾಗಿದ್ದ ಮಿಸ್ ಕರ್ನಾಟಕ ಸ್ಪರ್ಧೆಯಲ್ಲೂ ಕೂಡ ಇವರು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು. ಇನ್ನು ಇಷ್ಟೆಲ್ಲಾ ಯಶಸ್ಸನ್ನು ಕೊಂಡಿರುವ ಭಾನುಮತಿ ಉರ್ಫ್ ಶರ್ಮಿತ ಗೌಡ ಅವರು ಮನೆಯೇ ಮಂತ್ರಾಲಯ, ಜಾನಕಿ ರಾಘವ ಎಂಬ ಧಾರವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಪರಭಾಷೆಯ ಕಿರುತೆರೆಯಲ್ಲಿ ಕೂಡ ಇವರು ನಟಿಸಿದ್ದಾರೆ.

ಹೀಗೆ ನಟನೆಯಲ್ಲಿ ಯಶಸ್ಸನ್ನು ಪಡೆದ ಶರ್ಮಿತ ಗೌಡ ಅವರ ನಿಜವಾದ ವಯಸ್ಸು 30 ವರ್ಷ. ಹೌದು ಶರ್ಮಿತ ಗೌಡ ಅವರಿಗೆ ಇದೀಗಾಗಲೇ ಮದುವೆಯಾಗಿತ್ತು ಒಂದು ಮಗು ಕೂಡ ಇದೆ. ಆದರೆ ಇವರ ಸೌಂದರ್ಯ ಹಾಗೂ ನಟನೆಯ ಮೂಲಕ ಇವರು ಕೇವಲ 23 ರಿಂದ 25 ವರ್ಷದಲರಾಗಿ ಕಾಣುತ್ತಾರೆ ಎಂದರೂ ತಪ್ಪಾಗುವುದಿಲ್ಲ. ಇನ್ನು ಇವರು ಇದೇ ರೀತಿಯ ಯಶಸ್ಸನ್ನು ಮುಂದಿನ ಜೀವನದಲ್ಲಿ ಕೂಡ ಪಡೆಯಲಿ ಎಂದು ನಾವು ಈ ಮೂಲಕ ಹಾರೈಸೋಣ.

Comments are closed.