ಬಾಲಿವುಡ್ ನ ತಾರೆಯರಾದ ಆಲಿಯಾ ಭಟ್ ರಣಬೀರ್ ಕಪೂರ್ ಮದುವೆಗೆ ಕರ್ಚಾಗುತ್ತಿರುವ ಹಣ ಎಷ್ಟು ಕೋಟಿ ಗೊತ್ತೇ?? ಅಂತದ್ದು ಏನಿದೆ ಗೊತ್ತೆ ಮದುವೆಯಲ್ಲಿ??

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯೆಂದರೆ ಖಂಡಿತವಾಗಿ ಅದು ದುಬಾರಿ ಖರ್ಚಿನಲ್ಲಿ ನಡೆಯುತ್ತದೆ ಎಂಬುದು ಈಗಾಗಲೇ ನೀವು ಹಲವಾರು ಬಾರಿ ಇತ್ತೀಚಿನ ವರ್ಷಗಳಲ್ಲಿಯೇ ನೋಡಿದ್ದೀರಿ‌. ಸಾಮಾನ್ಯವಾಗಿ ವಸ್ತುಗಳಲ್ಲಿ ದುಬಾರಿ ಆದುದನ್ನು ಖರೀದಿಸುವ ಸೆಲೆಬ್ರಿಟಿಗಳು ತಮ್ಮ ಮದುವೆಯನ್ನು ಎಷ್ಟು ದುಬಾರಿಯಾಗಿ ಮಾಡಿಕೊಳ್ಳಬಹುದು ಎಂಬುದನ್ನು ನೀವೇ ಆಲೋಚಿಸಿ. ದುಬಾರಿ ಮದುವೆಗಳ ವಿಚಾರಕ್ಕೆ ಹೋಗುವುದಾದರೆ ಈ ಹಿಂದೆ ಮದುವೆಯಾಗಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಗಾಗಿ ಬರೋಬ್ಬರಿ 77 ಕೋಟಿ ರೂಪಾಯಿ ಖರ್ಚು ಮಾಡಿದ್ದರು.

ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಇತ್ತೀಚಿಗಷ್ಟೇ ಮದುವೆಯಾಗಿ ಸೆನ್ಸೇಶನ್ ಸೃಷ್ಟಿಸಿದ್ದರು. ಅವರ ಮದುವೆಗೂ ಕೂಡ ಬರೋಬ್ಬರಿ 55 ಕೋಟಿ ರೂಪಾಯಿಗೂ ಅಧಿಕ ಖರ್ಚಾಗಿದೆ. ಇನ್ನು ಇಟಲಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೂಡ ಅದ್ದೂರಿಯಾಗಿ ಮದುವೆಯಾಗಿದ್ದರು. ಈ ಮದುವೆಗೂ ಕೂಡ ಬರೋಬ್ಬರಿ 100 ಕೋಟಿಗೂ ಅಧಿಕ ಖರ್ಚಾಗಿದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಸದ್ಯಕ್ಕೆ ಚಿತ್ರರಂಗದ ಟ್ರೆಂಡಿಂಗ್ ನಲ್ಲಿರುವ ಪ್ರೇಮ ಪಕ್ಷಿಗಳು ಎಂದರೆ ಅದು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರು ಇತ್ತೀಚಿನ ಕೆಲವು ವರ್ಷಗಳಿಂದ ಬಾಲಿವುಡ್ ಅಂಗಳದಲ್ಲಿ ಹಾರಾಡುತ್ತಿರುವ ಪ್ರೇಮ ಪಕ್ಷಿಗಳು. ಇವರ ಮದುವೆ ಸುದ್ದಿಯನ್ನು ಕೇಳಬೇಕು ಎನ್ನುವುದಾಗಿ ಅಭಿಮಾನಿಗಳು ಹಲವಾರು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದಾರೆ. ಈಗ ಸದ್ಯಕ್ಕೆ ಅಭಿಮಾನಿಗಳಿಗೆ ಸಂತೋಷದ ಸುದ್ದಿ ಕೇಳಿ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೌದು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರ ಮದುವೆಯ ತೆರೆಮರೆಯ ತಯಾರಿಗಳು ಈಗಾಗಲೇ ಆರಂಭವಾಗಿದೆ ಎನ್ನುವುದಾಗಿ ಕೇಳಿಬರುತ್ತಿದೆ. ಇನ್ನು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರ ಮದುವೆಗೆ ಎಷ್ಟು ಖರ್ಚು ಆಗಲಿದೆ ಎನ್ನುವ ಲೆಕ್ಕಾಚಾರವೂ ಕೂಡ ಸಿಕ್ಕಿದೆ.

alia bhat ranbir | ಬಾಲಿವುಡ್ ನ ತಾರೆಯರಾದ ಆಲಿಯಾ ಭಟ್ ರಣಬೀರ್ ಕಪೂರ್ ಮದುವೆಗೆ ಕರ್ಚಾಗುತ್ತಿರುವ ಹಣ ಎಷ್ಟು ಕೋಟಿ ಗೊತ್ತೇ?? ಅಂತದ್ದು ಏನಿದೆ ಗೊತ್ತೆ ಮದುವೆಯಲ್ಲಿ??
ಬಾಲಿವುಡ್ ನ ತಾರೆಯರಾದ ಆಲಿಯಾ ಭಟ್ ರಣಬೀರ್ ಕಪೂರ್ ಮದುವೆಗೆ ಕರ್ಚಾಗುತ್ತಿರುವ ಹಣ ಎಷ್ಟು ಕೋಟಿ ಗೊತ್ತೇ?? ಅಂತದ್ದು ಏನಿದೆ ಗೊತ್ತೆ ಮದುವೆಯಲ್ಲಿ?? 2

ಹೌದು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರು ಕೂಡ ರಣವೀರ್ ಕಪೂರ್ ಅವರ ಕುಟುಂಬಸ್ಥರಿಗೆ ಸೇರಿರುವ ಆರ್ ಕೆ ಸ್ಟುಡಿಯೋದಲ್ಲಿ ಕುಟುಂಬ ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ. ಇವರಿಬ್ಬರ ಮದುವೆಗೆ ಬರುವ ಗಣ್ಯಾತಿಗಣ್ಯರ ಸಂಖ್ಯೆ ಕೂಡ ಹೆಚ್ಚಾಗಿದೆ ಹೀಗಾಗಿ ಅವರಿಗೆ ಈಗಾಗಲೇ ಉಳಿದುಕೊಳ್ಳುವ ವ್ಯವಸ್ಥೆ ಗಳನ್ನು ಕೂಡ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಮಾಡಲಾಗುತ್ತಿದೆ. ಬ್ಯಾಚುಲರ್ ಪಾರ್ಟಿ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗಾಗಿ ಜಾಗವನ್ನು ವಿಶೇಷವಾಗಿ ಸಿಂಗರಿಸಲಾಗುತ್ತದೆ. ಚಿನ್ನಾಭರಣಗಳನ್ನು ಕೂಡ ದುಬಾರಿಯಾಗಿ ಖರೀದಿಸಲಾಗುತ್ತಿದೆ. ಇಬ್ಬರಿಗೂ ಡ್ರೆಸ್ಸನ್ನು ಖ್ಯಾತ ಡಿಸೈನರ್ ಆಗಿರುವ ಮನೀಶ್ ಮಲ್ಹೋತ್ರ ರವರು ಡಿಸೈನ್ ಮಾಡಲಿದ್ದಾರೆ. ಇವರ ಮದುವೆಗೆ ಬರೋಬ್ಬರಿ 80 ರಿಂದ 100 ಕೋಟಿ ರೂಪಾಯಿ ಖರ್ಚು ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವುದಾಗಿ ಒಳ ಮೂಲಗಳು ಖಚಿತಪಡಿಸಿವೆ. ಈ ಪ್ರೇಮ ಪಕ್ಷಿಗಳು ಸಪ್ತಪದಿಯನ್ನು ತುಳಿದು ಸತಿಪತಿಗಳಾಗುವುದನ್ನು ನೋಡಲು ಇಡೀ ಭಾರತೀಯ ಚಿತ್ರರಂಗವೇ ಕಾದು ನಿಂತಿದೆ.

Comments are closed.