ಪ್ರೀತಿಗೆ ವಯಸ್ಸಿಲ್ಲ ಕಣ್ರೀ: ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿಗಳು ಮದುವೆಯಾದರೆ ಖಂಡಿತವಾಗಿ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ಚಿತ್ರರಂಗದ ಸ್ಟಾರ್ ನಟಿಯರು ತಮ್ಮ ವಯಸ್ಸಿಗಿಂತ ಅತ್ಯಂತ ಚಿಕ್ಕ ವಯಸ್ಸಿ ನವರನ್ನು ಮದುವೆಯಾಗಿರುವ ಕುರಿತಂತೆ. ಈ ಲಿಸ್ಟಿನಲ್ಲಿ ನೀವು ಆಶ್ಚರ್ಯ ಪಡುವಂತಹ ನಟಿಯರು ಕೂಡ ಇದ್ದಾರೆ. ಹಾಗಿದ್ದರೆ ಯಾರೆಲ್ಲ ಇದ್ದಾರೆ ಎಂಬುದನ್ನು ತಪ್ಪದೇ ಪ್ರಾರಂಭದಿಂದ ಕೊನೆಯವರೆಗೂ ತಿಳಿದುಕೊಳ್ಳೋಣ ಬನ್ನಿ. ವಿಶೇಷ ಸೂಚನೆ: ಈ ಲೇಖನದಲ್ಲಿ ಕೇವಲ ಮನರಂಜನೆಯ ಕುರಿತು ವಿಷಯ ಇದ್ದು, ಮತ್ತೊಬ್ಬರ ವೈಯಕ್ತಿಕ ನಿರ್ಧಾರವನ್ನು ಪ್ರಶ್ನಿಸುವ ಅಥವಾ ಪ್ರೀತಿಯನ್ನು ಪ್ರಶ್ನಿಸಿ ನೋವುಂಟು ಮಾಡುವ ಯಾವುದೇ ಉದ್ದೇಶ ಇರುವುದಿಲ್ಲ.

radhika pandith yash | ಪ್ರೀತಿಗೆ ವಯಸ್ಸಿಲ್ಲ ಕಣ್ರೀ: ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??
ಪ್ರೀತಿಗೆ ವಯಸ್ಸಿಲ್ಲ ಕಣ್ರೀ: ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ?? 4

ಕನ್ನಡ ಚಿತ್ರರಂಗದ ಸಿಂಡ್ರೆಲಾ ಎಂದು ಕರೆಯಲ್ಪಡುವ ರಾಧಿಕಾ ಪಂಡಿತ್ ರವರು ನಿಮಗೆಲ್ಲ ತಿಳಿದಿರುವಂತೆ ಕರಾವಳಿ ಮೂಲದವರು. ಕನ್ನಡ ಚಿತ್ರರಂಗಕ್ಕೆ ಯಾವುದೇ ಶಿಫಾರಸು ಇಲ್ಲದೆ ಬಂದು ತಮ್ಮ ಸ್ವಂತ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಕಿಂಗ್ ಸ್ಟಾರ್ ಯಶ್ ರವರನ್ನು ಇವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊಂದುವ ಮೂಲಕ ಚಿಕ್ಕ ಸಂಸಾರ ಚೊಕ್ಕ ಸಂಸಾರ ಎನ್ನುವ ಸಂದೇಶವನ್ನು ಸಾರಿದ್ದಾರೆ. ಮದುವೆಯಾದ ನಂತರ ಕುಟುಂಬಕ್ಕೆ ಸಂಪೂರ್ಣ ಸಮಯವನ್ನು ನೀಡುವ ಸಲುವಾಗಿ ಚಿತ್ರರಂಗದಿಂದ ಸಂಪೂರ್ಣವಾಗಿ ವಿರಾಮವನ್ನು ಕೂಡ ರಾಧಿಕಾ ಪಂಡಿತ್ ಪಡೆದುಕೊಂಡಿದ್ದಾರೆ. ಇನ್ನು ನೀವು ಆಶ್ಚರ್ಯ ಪಡಬೇಕಾದ ವಿಚಾರವೇನೆಂದರೆ ರಾಧಿಕಾ ಪಂಡಿತ್ ಅವರು ಯಶ್ ಅವರಿಗಿಂತ 2 ವರ್ಷ ದೊಡ್ಡವರು. ಆದರೂ ಕೂಡ ಇವರ ಪ್ರೀತಿಯ ದಾಂಪತ್ಯ ಜೀವನಕ್ಕೆ ಇವರ ವಯಸ್ಸಿನ ಅಡ್ಡಿ ಎದುರಾಗಿಲ್ಲ.

ಮಂಗಳೂರು ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಶಿಲ್ಪ ಶೆಟ್ಟಿ ಅವರು ಕೂಡ ಈ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಖ್ಯಾತ ಉದ್ಯಮಿ ರಾಜ್ ಕುಂದ್ರಾ ಅವರನ್ನು ಎರಡನೇ ಮದುವೆ ಆಗುತ್ತಾರೆ. ಇನ್ನು ಈ ದಂಪತಿಗಳಿಗೆ ಒಬ್ಬ ಮಗ ಕೂಡ ಇದ್ದಾನೆ. ವಯಸ್ಸಿನಲ್ಲಿ ಶಿಲ್ಪಶೆಟ್ಟಿ ತಮ್ಮ ಪತಿಗಿಂತ ಎರಡು ವರ್ಷ ದೊಡ್ಡವರು ಎನ್ನುವುದನ್ನು ಕೂಡ ನಾವಿಲ್ಲಿ ನೋಡಬೇಕಾಗಿದೆ. ಆದರೆ ಫಿಟ್ನೆಸ್ ಹಾಗೂ ಸೌಂದರ್ಯಕ್ಕೆ ಹೆಸರಾಗಿರುವ ಶಿಲ್ಪ ಶೆಟ್ಟಿ ಅವರನ್ನು ನೋಡಿದರೆ ಹೀಗೆ ಹೇಳಲು ಸಾಧ್ಯವೇ ಇಲ್ಲ.

chaya singh | ಪ್ರೀತಿಗೆ ವಯಸ್ಸಿಲ್ಲ ಕಣ್ರೀ: ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??
ಪ್ರೀತಿಗೆ ವಯಸ್ಸಿಲ್ಲ ಕಣ್ರೀ: ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ?? 5

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ಬಹುಭಾಷೆ ಸ್ಟಾರ್ ಆಗಿ ಮಿಂಚಿದ್ದ ಛಾಯಾಸಿಂಗ್ ರವರು ವಿವಾಹ ಆದ ಮೇಲೆ ಸಿನಿಮಾದಿಂದ ದೂರ ಉಳಿದಿದ್ದರು ಎಂದು ಹೇಳಬಹುದಾಗಿದೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಶಿವಣ್ಣ ಹಾಗೂ ಶ್ರೀಮುರಳಿ ನಟನೆಯ ಮುಫ್ತಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ತಮಿಳು ನಟ ಪ್ರಸನ್ನ ರವರನ್ನು ಛಾಯಾಸಿಂಗ್ ಮದುವೆಯಾಗಿದ್ದು ತಮ್ಮ ಗಂಡನಿಗಿಂತ ಎರಡು ವರ್ಷ ದೊಡ್ಡವರಾಗಿದ್ದಾರೆ.

ಮತ್ತೊಬ್ಬ ಮಂಗಳೂರು ಮೂಲದ ಬಾಲಿವುಡ್ ಬೆಡಗಿ ಯಾಗಿರುವ ಐಶ್ವರ್ಯ ರೈ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದ ಅಭಿಷೇಕ ದೊರೆ ಅಮಿತಾ ಬಚ್ಚನ್ ರವರ ಮಗ ಆಗಿರುವ ಅಭಿಷೇಕ್ ಬಚ್ಚನ್ ರವರನ್ನು ಮದುವೆಯಾಗುತ್ತಾರೆ. ಇವರಿಗೆ ಆರಾಧ್ಯ ಎಂಬ ಮುದ್ದಾದ ಮಗಳು ಕೂಡ ಇದ್ದಾಳೆ. ಭುವನಸುಂದರಿ ಆಗಿರುವ ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರಿಗಿಂತ ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವರು.

anu prabhakar | ಪ್ರೀತಿಗೆ ವಯಸ್ಸಿಲ್ಲ ಕಣ್ರೀ: ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??
ಪ್ರೀತಿಗೆ ವಯಸ್ಸಿಲ್ಲ ಕಣ್ರೀ: ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ?? 6

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದ ಅನು ಪ್ರಭಾಕರ್ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮಾಡೆಲ್ ಹಾಗೂ ಖ್ಯಾತ ನಟ ಆಗಿರುವ ರಘು ಮುಖರ್ಜಿ ಅವರನ್ನು ಎರಡನೇ ಮದುವೆಯಾಗಿದ್ದಾರೆ. ಇನ್ನು ಕೆಲವು ವರ್ಷಗಳ ಹಿಂದೆ ಇವರು ಹೆಣ್ಣು ಮಗುವಿಗೂ ಕೂಡ ಜನ್ಮ ನೀಡಿದ್ದಾರೆ. ಇನ್ನು ರಘು ಮುಖರ್ಜಿ ಅವರಿಗಿಂತ ಅನುಪ್ರಭಾಕರ್ ರವರು ವಯಸ್ಸಿನಲ್ಲಿ ಎರಡು ವರ್ಷ ದೊಡ್ಡವರು.

ನಟಿ ನಮ್ರತಾ ಶಿರೋಡ್ಕರ್ ಅವರ ಬಗ್ಗೆ ನಿಮಗೆಲ್ಲ ಗೊತ್ತಿರಬಹುದು. ಟಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ರವರ ಧರ್ಮಪತ್ನಿ ಇವರಾಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರು ಕೂಡ ಒಬ್ಬ ನಟಿಯಾಗಿ ಬಹುಭಾಷೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇವರಿಬ್ಬರ ಮದುವೆಯಾಗಿದ್ದು ಇಬ್ಬರಿಗೂ ಒಂದು ಗಂಡು ಹಾಗೂ ಒಂದು ಹೆಣ್ಣು ಮಗಳಿದ್ದಾಳೆ. ಮಹೇಶ್ ಬಾಬು ಅವರಿಗಿಂತ ವಯಸ್ಸಿನಲ್ಲಿ ನಮೃತ ಶಿರೊಡ್ಕರ್ ಎರಡು ವರ್ಷ ದೊಡ್ಡವರು. ಈ ನಟಿಯರಲ್ಲಿ ನಿಮ್ಮ ಫೇವರೆಟ್ ಯಾರು ಎನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.