ಹೆಣ್ಣುಮಕ್ಕಳ ಮನಸ್ಸಿನಲ್ಲಿ ಮದುವೆಯಾದ ಮೊದಲ ದಿನದ ಮುಂಜಾನೆ ಬರುವ ಆಲೋಚನೆಗಳೇನು ಗೊತ್ತೇ?? ಯಾವೆಲ್ಲ ವಿಷಯವನ್ನು ಆಲೋಚನೆ ಮಾಡಿರುತ್ತಾರೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮದುವೆ ಎನ್ನುವುದು ಪ್ರಮುಖವಾದ ಹಾಗೂ ಸಂತೋಷದಾಯಕ ಘಟ್ಟವಾಗಿರುತ್ತದೆ. ಈ ಕುರಿತಂತೆ ಪ್ರತಿಯೊಬ್ಬರು ಕೂಡ ಯೋಚಿಸಿ ನಿರ್ಧಾರ ತೆಗೆದುಕೊಂಡರಷ್ಟೇ ಅವರು ಜೀವನಪರ್ಯಂತ ಸಂತೋಷವಾಗಿ ತಮ್ಮ ಸಂಗಾತಿಯೊಂದಿಗೆ ಬಾಳಲು ಸಾಧ್ಯ. ಸಾಮಾನ್ಯವಾಗಿ ಮದುವೆಯಾದ ನಂತರ ಪ್ರತಿಯೊಬ್ಬರ ಜೀವನದಲ್ಲಿ ಕೂಡ ದೊಡ್ಡಮಟ್ಟದ ಬದಲಾವಣೆಗಳು ಕಂಡುಬರುತ್ತವೆ.

ಅದರಲ್ಲೂ ಮದುವೆಯಾದಮೇಲೆ ಹುಡುಗಿಯರ ಜೀವನದಲ್ಲಿ ಮದುವೆಯಾಗುವುದಕ್ಕಿಂತ ಮುಂಚೆ ಹೇಗೆ ಇದ್ದರೋ ಅದಕ್ಕೆ ತದ್ವಿರುದ್ಧವಾಗಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಮದುವೆಯೆನ್ನುವುದು ಸಾಕಷ್ಟು ಕಾರ್ಯಗಳನ್ನು ಹೊಂದಿರುವಂತಹ ಸಂತೋಷದ ಕಾರ್ಯಕ್ರಮವಾಗಿದೆ. ಈ ಸಂದರ್ಭದಲ್ಲಿ ಹುಡುಗಿಗೆ ಯೋಚಿಸುವುದಕ್ಕೆ ಯಾವುದೇ ಸಮಯ ಕೂಡ ಸಿಗುವುದಿಲ್ಲ. ಈ ಕಾರ್ಯಕ್ರಮ ಕೂಡ ಅವಳಿಗೆ ಸಾಕಷ್ಟು ಆಯಾಸದಾಯಕ ವಾಗಿರುತ್ತದೆ.

marriage coup wom 3 | ಹೆಣ್ಣುಮಕ್ಕಳ ಮನಸ್ಸಿನಲ್ಲಿ ಮದುವೆಯಾದ ಮೊದಲ ದಿನದ ಮುಂಜಾನೆ ಬರುವ ಆಲೋಚನೆಗಳೇನು ಗೊತ್ತೇ?? ಯಾವೆಲ್ಲ ವಿಷಯವನ್ನು ಆಲೋಚನೆ ಮಾಡಿರುತ್ತಾರೆ ಗೊತ್ತೇ?
ಹೆಣ್ಣುಮಕ್ಕಳ ಮನಸ್ಸಿನಲ್ಲಿ ಮದುವೆಯಾದ ಮೊದಲ ದಿನದ ಮುಂಜಾನೆ ಬರುವ ಆಲೋಚನೆಗಳೇನು ಗೊತ್ತೇ?? ಯಾವೆಲ್ಲ ವಿಷಯವನ್ನು ಆಲೋಚನೆ ಮಾಡಿರುತ್ತಾರೆ ಗೊತ್ತೇ? 3

ಹೀಗಾಗಿ ಮದುವೆಯಲ್ಲಿ ಬಹುತೇಕ ಎಲ್ಲ ಸಮಯವನ್ನು ಆಯಾಸವಾಗಿ ಕಳೆಯುತ್ತಾಳೆ. ನಂತರ ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ಬೆಳಗ್ಗೆ ಎದ್ದು ಹಾಕಿ ಏನನ್ನು ಯೋಚಿಸುತ್ತಾಳೆ ಎನ್ನುವುದರ ಕುರಿತಂತೆ ಈ ಆರ್ಟಿಕಲ್ ನಲ್ಲಿ ನಾವು ತಿಳಿಯೋಣ ಬನ್ನಿ. ಬೆಳಗ್ಗೆ ಬೇಗ ಎದ್ದೇಳುವ ಚಿಂತೆ; ಮದುವೆ ಆದ ನಂತರ ಮೊದಲ ದಿನದ ಬೆಳಿಗ್ಗೆ ಎಲ್ಲರಿಗಿಂತ ಬೇಗ ಎದ್ದು ತಮ್ಮ ಅತ್ತೆಗೆ ಕಾಲಿಗೆ ನಮಸ್ಕರಿಸಿ ಚಹಾವನ್ನು ತಯಾರಿಸಿ ನೀಡುವ ಕುರಿತಂತೆ ಅವರು ಯೋಚನೆ ಮಾಡಿರುತ್ತಾರೆ.

ಯಾಕೆಂದರೆ ಮೊದಲ ದಿನವೇ ಅತ್ತೆಯನ್ನು ಬುಟ್ಟಿಗೆ ಹಾಕಿಕೊಂಡರೆ ಗಂಡನ ಮನೆಯಲ್ಲಿ ಸಲೀಸಾಗಿ ಇರಬಹುದು ಎನ್ನುವ ಯೋಚನೆ. ಮೊದಲ ದಿನವೇ ಅಪರಿಚಿತರ ಮನೆಯಲ್ಲಿ ಮನೆ ಕೆಲಸವನ್ನು ಮಾಡಿ ಮುಗಿಸುವುದು ಎಂದರೆ ಅಷ್ಟೊಂದು ಸುಲಭದ ಕೆಲಸವಲ್ಲ ಆದರೂ ಕೂಡ ಗಂಡನ ಮನೆಯಲ್ಲಿ ಎಲ್ಲರ ವಿಶ್ವಾಸವನ್ನು ಸಂಪಾದನೆ ಮಾಡುವುದು ಆಕೆಯ ಮೊದಲ ಗುರಿಯಾಗಿರುತ್ತದೆ ಇದಕ್ಕಾಗಿ ಆಕೆ ಮೊದಲ ದಿನ ಬೆಳಗ್ಗೆ ಬೇಗ ಏಳುವಂತಹ ವಿಚಾರವನ್ನು ಚಿಂತಿಸುತ್ತಿರುತ್ತಾಳೆ.

ಪತಿಯ ಕುರಿತಂತೆ ಹಲವು ಗೊಂದಲಗಳು; ಮದುವೆಗೂ ಮುನ್ನ ಗಂಡನ ಕುರಿತಂತೆ ಹುಡುಗಿಯರಿಗೆ ಹಲವಾರು ಗೊಂದಲಗಳು ಇರುತ್ತದೆ. ತಮ್ಮನ್ನು ಮದುವೆಯಾಗುವ ಹುಡುಗ ನಮ್ಮ ಆಸೆಗಳನ್ನು ಪೂರೈಸುತ್ತಾನೆಯೇ ನಮ್ಮ ಇಚ್ಛೆಗಳನ್ನು ಈಡೇರಿಸುತ್ತಾನೆಯೇ ಎನ್ನುವುದಾಗಿ ಯೋಚಿಸಲು ಆರಂಭಿಸುತ್ತಾರೆ. ಮದುವೆಯಾದ ನಂತರ ಮೊದಲ ಬೆಳಗ್ಗೆ ಎದ್ದ ತಕ್ಷಣ ಈತನನ್ನು ಮದುವೆಯಾಗಲು ನಾನು ತೆಗೆದುಕೊಂಡ ನಿರ್ಧಾರ ಸರಿಯೇ ತಪ್ಪೇ ಎನ್ನುವ ವಿಮರ್ಶೆಯನ್ನು ಕೂಡ ಮಾಡುತ್ತಾರೆ. ನಂತರ ತನ್ನ ತಂದೆ-ತಾಯಿ ತೆಗೆದುಕೊಂಡಿರುವ ನಿರ್ಧಾರ ಖಂಡಿತವಾಗಿ ಸರಿಯಾಗಿರುತ್ತದೆ ಎಂಬುದಾಗಿ ನಿರ್ಧಾರಕ್ಕೆ ಬರುತ್ತಾಳೆ.

ನಂತರ ಗಂಡನ ಇಷ್ಟ-ಕಷ್ಟಗಳನ್ನು ತಿಳಿದುಕೊಂಡು ಅದೇ ರೀತಿಯಲ್ಲಿ ನಡೆದುಕೊಳ್ಳುವ ಕುರಿತಂತೆ ವಿಚಾರ ವಿಮರ್ಶೆ ಮಾಡಲು ಆರಂಭಿಸುತ್ತಾಳೆ. ಈ ಕುರಿತಂತೆ ಸರಿಯಾಗಿ ತೆಗೆದುಕೊಳ್ಳಲು ಎಲ್ಲಾ ಪರಿಶ್ರಮವನ್ನು ಕೂಡ ಆಕೆ ಕೊಡುತ್ತಾಳೆ. ಯಾಕೆಂದರೆ ಮುಂದೆ ಸಂಸಾರದಲ್ಲಿ ಯಾವುದೇ ಸಮಸ್ಯೆಗಳು ತಲೆ ದೋರಬಾರದು ಎನ್ನುವ ಕಾರಣಕ್ಕಾಗಿ. ಗಂಡನ ಮನೆಯ ಪರಿಸ್ಥಿತಿ ಹೇಗಿರಬಹುದು; ಪ್ರತಿಯೊಬ್ಬ ಮಹಿಳೆ ಕೂಡಾ ಮದುವೆಯಾದ ನಂತರ ಗಂಡನ ಮನೆ ನನ್ನ ಇಷ್ಟದ ಪ್ರಕಾರ ಇರಬೇಕೆಂದುಕೊಳ್ಳುತ್ತಾರೆ. ಮದುವೆಯಾದ ನಂತರ ಹೊಸ ಮನೆಗೆ ಬಂದಾಗ ಹಲವಾರು ಚಾಲೆಂಜ್ ಗಳನ್ನು ಕೂಡ ಅವರು ಎದುರಿಸುತ್ತಾರೆ.

women | ಹೆಣ್ಣುಮಕ್ಕಳ ಮನಸ್ಸಿನಲ್ಲಿ ಮದುವೆಯಾದ ಮೊದಲ ದಿನದ ಮುಂಜಾನೆ ಬರುವ ಆಲೋಚನೆಗಳೇನು ಗೊತ್ತೇ?? ಯಾವೆಲ್ಲ ವಿಷಯವನ್ನು ಆಲೋಚನೆ ಮಾಡಿರುತ್ತಾರೆ ಗೊತ್ತೇ?
ಹೆಣ್ಣುಮಕ್ಕಳ ಮನಸ್ಸಿನಲ್ಲಿ ಮದುವೆಯಾದ ಮೊದಲ ದಿನದ ಮುಂಜಾನೆ ಬರುವ ಆಲೋಚನೆಗಳೇನು ಗೊತ್ತೇ?? ಯಾವೆಲ್ಲ ವಿಷಯವನ್ನು ಆಲೋಚನೆ ಮಾಡಿರುತ್ತಾರೆ ಗೊತ್ತೇ? 4

ಹಲವಾರು ಚಾಲೆಂಜ್ ಗಳನ್ನು ಎದುರಿಸಿದರು ಕೂಡ ಹೇಗೋ ಮಾಡಿ ಅವಳು ಗಂಡನ ಮನೆಯಲ್ಲಿ ಅಡ್ಜಸ್ಟ್ ಆಗುವಂತಹ ಪ್ರಯತ್ನವನ್ನು ಮಾಡುತ್ತಾರೆ. ಆದಷ್ಟು ಎಲ್ಲರೊಂದಿಗೆ ತಾನು ಕೂಡ ಒಬ್ಬಳಾಗಿ ಇರುವಂತಹ ಪ್ರಯತ್ನವನ್ನು ಆಕೆ ಮಾಡುತ್ತಾಳೆ. ಇದರ ನಡುವೆ ಹಲವಾರು ಯೋಚನೆಗಳು ಬಂದರೂ ಕೂಡ ಅದನ್ನು ಯಾರೊಂದಿಗೂ ಕೂಡ ಆಕೆ ಶೇರ್ ಮಾಡಿಕೊಳ್ಳುವುದಿಲ್ಲ. ಇವುಗಳೇ ಮದುವೆಯಾದ ನಂತರ ಮೊದಲ ದಿನದ ಬೆಳಿಗ್ಗೆ ಹೆಣ್ಣುಮಕ್ಕಳಿಗೆ ಮೂಡಿ ಬರುವಂತಹ ಯೋಚನೆಗಳು. ಇವುಗಳ ಕುರಿತಂತೆ ಇರುವಂತಹ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.