ಇಂದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ಯಶ್, ಅಂದು ಚಿತ್ರರಂಗಕ್ಕೆ ಬಂದಾಗ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ಸಮಯದಲ್ಲಿ ಕನ್ನಡ ಚಿತ್ರರಂಗದಿಂದ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಪರಿಚಿತರಾಗಿರುವ ನಟರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಜಿಎಫ್ ಚಾಪ್ಟರ್ 1 ಚಿತ್ರದ ರಾಕಿಭಾಯ್ ಪಾತ್ರದ ಮೂಲಕ ಎಲ್ಲರೂ ಕೂಡ ಅವರನ್ನು ಗುರುತಿಸುತ್ತಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಕಿಂಗ್ ಸ್ಟಾರ್ ಯಶ್ ರವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ರಾಕಿಂಗ್ ಸ್ಟಾರ್ ಯಶ್ ರವರ ತಂದೆ ಅಂದಿನಿಂದ ಇಂದಿನವರೆಗೂ ಕೂಡ ಬಿಎಂಟಿಸಿ ಬಸ್ ನಲ್ಲಿ ಡ್ರೈವರ್ ಆಗಿದ್ದವರು. ಮಧ್ಯಮ ವರ್ಗ ದಿಂದ ಬಂದಂತಹ ರಾಕಿಂಗ್ ಸ್ಟಾರ್ ಯಶ್ ರವರಿಗೆ ಸಿನಿಮಾದಲ್ಲಿ ಸಾಧನೆ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ.

ಬೆಂಗಳೂರಿಗೆ ಬಂದು ಸಾಕಷ್ಟು ಕಷ್ಟಗಳನ್ನು ಅನುಭವಿಸಿದರು ಕೂಡ ಅವರಿಗೆ ಹೀರೋ ಆಗಬೇಕು ಅಥವಾ ಸ್ಟಾರ್ ನಟ ಆಗಬೇಕು ಎನ್ನುವ ಕನಸನ್ನು ಬಿಡುವ ಮನಸ್ಸು ಆಗಿರಲಿಲ್ಲ. ತಾವು ಅಂದುಕೊಂಡದ್ದನ್ನು ಸಾಧಿಸದೆ ಹಿಂದೆ ಹೋಗುವುದಿಲ್ಲ ಎನ್ನುವ ಛಲವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಂದು ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಖಂಡಿತವಾಗಿ ರಾಕಿಂಗ್ ಸ್ಟಾರ್ ಕನ್ನಡದ ಹೆಮ್ಮೆ ಎಂದರೆ ತಪ್ಪಾಗಲಾರದು. ಇನ್ನು ಈಗ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರ ಪ್ರಪಂಚದಾದ್ಯಂತ ಇದೆ ಏಪ್ರಿಲ್ 14ರಂದು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು ಮೊದಲು ಬಂದಾಗ ಪಡೆಯುತ್ತಿದ್ದ ಸಂಭಾವನೆ ಕುರಿತಂತೆ ಹೇಳಿದ್ದಾರೆ.

yash 1 | ಇಂದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ಯಶ್, ಅಂದು ಚಿತ್ರರಂಗಕ್ಕೆ ಬಂದಾಗ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ??
ಇಂದು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ಯಶ್, ಅಂದು ಚಿತ್ರರಂಗಕ್ಕೆ ಬಂದಾಗ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ?? 2

ಬೆಂಗಳೂರಿಗೆ ನಟನಾಗುವ ಆಸೆಯನ್ನು ಹೊತ್ತುಬಂದ ರಾಕಿಂಗ್ ಸ್ಟಾರ್ ಯಶ್ ರವರು ಮೊದಲು ಸೇರಿಕೊಂಡಿದ್ದು ಬೆನಕ ನಾಟಕ ಮಂಡಳಿಯನ್ನು. ಆ ಸಂದರ್ಭದಲ್ಲಿ ಅವರು 300 ರೂಪಾಯಿ ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದರು. ಬೆನಕ ನಾಟಕ ಮಂಡಳಿಯಲ್ಲಿ ಅವರಿಗೆ ದಿನಕ್ಕೆ 50 ರೂಪಾಯಿ ನೀಡುತ್ತಿದ್ದರು. ಅಂದಿನ ಸಮಯದಲ್ಲಿ ಹಣ ಕಡಿಮೆಯಾಗಿದ್ದರೂ ಕೂಡ ಅವರಲ್ಲಿರುವ ಚಲ ಅವರ ಗುರಿಯಿಂದ ಹಿಂದೆ ಬರಲು ಬಿಟ್ಟಿರಲಿಲ್ಲ. ನಂತರ ಕ್ರಮೇಣವಾಗಿ ನಾಟಕಗಳಲ್ಲಿ ನಟಿಸಿದ ನಂತರ ಧಾರವಾಹಿಗೆ ಕಾಲಿಡುತ್ತಾರೆ. ಧಾರಾವಾಹಿಗೆ ಬಂದ ನಂತರ ದಿನಕ್ಕೆ 500 ರೂಪಾಯಿ ಸಂಭಾವನೆಯನ್ನು ಪಡೆಯಲು ಆರಂಭಿಸುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ಅವ’ಮಾನಗಳನ್ನು ಸಹಿಸಿಕೊಂಡು ಇಂದು ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟರ ಲಿಸ್ಟಿನಲ್ಲಿ ಕಾಣಸಿಗುತ್ತಿದ್ದಾರೆ. ನಿಜಕ್ಕೂ ಕೂಡ ರಾಕಿಂಗ್ ಸ್ಟಾರ್ ಯಶ್ ರವರು ಇಂದಿನ ಯುವ ಜನತೆಗೆ ಒಬ್ಬ ಪರಿಪಕ್ವ ಸ್ಪೂರ್ತಿಯ ವ್ಯಕ್ತಿತ್ವ ಎಂದರೆ ತಪ್ಪಾಗದು.

Comments are closed.