ಕೊನೆಗೂ ಅಭಿಮಾನಿಗಳು ಕಾಯುತಿದ್ದ ಕ್ಷಣ ಬಂದೆ ಬಿಡ್ತು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ರಾಯನ್ ಸರ್ಜಾ. ವಿಷಯ ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಿರು ಸರ್ಜಾ ರವರ ಮರಣದ ನಂತರ ಒಂಟಿಯಾಗಿದ್ದ ಮೇಘನಾ ರಾಜ್ ಅವರ ಬದುಕಿಗೆ ಬೆಳಕಾಗಿ ದ್ದು ಅವರ ಮಗ ರಾಯನ್ ರಾಜ್ ಸರ್ಜಾ. ಇದನ್ನು ಮೇಘನಾರಾಜ್ ರವರು ಕೂಡ ಹಲವಾರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮೇಘನಾ ರಾಜ್ ರವರು ಚಿರು ಸರ್ಜಾ ಅವರ ಅಗಲಿಕೆಯ ನಂತರ ಹಲವಾರು ಸಮಯಗಳ ಕಾಲ ಯಾವುದೇ ಕಾರ್ಯಕ್ರಮಗಳಲ್ಲಿ ಅಥವಾ ಹೊರಗೆ ಕಾಣಿಸಿಕೊಳ್ಳದೆ ಮನೆಯಲ್ಲಿಯೇ ಮೌನವಾಗಿದ್ದರು. ನಂತರ ಜೂನಿಯರ್ ಚಿರು ಸರ್ಜಾ ರವರ ಜನನದ ನಂತರ ಕಾಣಿಸಿಕೊಳ್ಳಲು ಆರಂಭಿಸಿದರು ಹಾಗೂ ಮತ್ತೆ ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ.

ತನ್ನ ಮಗನ ಸಂತೋಷವನ್ನು ಹೀಗೆ ಉಳಿಸಿಕೊಳ್ಳಲು ಮತ್ತೆ ದುಡಿಯಲು ಆರಂಭಿಸುತ್ತಾರೆ. ಆಗಾಗ ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಮಗನ ಫೋಟೋ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಜೂನಿಯರ್ ಚಿರು ಸರ್ಜಾ ರವರ ದರ್ಶನವನ್ನು ಮಾಡಿಸುತ್ತಿದ್ದರು. ಹೀಗೆ ಪೋಸ್ಟ್ ಮಾಡುವ ಮೂಲಕ ಈಗ ಜೂನಿಯರ್ ಚಿರು ಸರ್ಜಾಗೆ ಈಗಾಗಲೇ ದೊಡ್ಡಮಟ್ಟದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಇದ್ದಾರೆ. ಸದ್ಯಕ್ಕೆ ಮೇಘನಾ ರಾಜ್ ರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಾವು ಎಲ್ಲಿ ಹೊರಗಿದ್ದರೂ ಕೂಡ ಮೇಘನಾರಾಜ್ ಹದಿನೈದು ನಿಮಿಷಕ್ಕೊಮ್ಮೆ ಮನೆಗೆ ತಮ್ಮ ತಾಯಿಗೆ ಕರೆ ಮಾಡಿ ರಾಯನ್ ಹೇಗಿದ್ದಾನೆ ಎಂದು ಯೋಗಕ್ಷೇಮವನ್ನು ವಿಚಾರಿಸಿ ಕೊಳ್ಳುತ್ತಲೇ ಇರುತ್ತಾರೆ.

ryan sarja | ಕೊನೆಗೂ ಅಭಿಮಾನಿಗಳು ಕಾಯುತಿದ್ದ ಕ್ಷಣ ಬಂದೆ ಬಿಡ್ತು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ರಾಯನ್ ಸರ್ಜಾ. ವಿಷಯ ಏನು ಗೊತ್ತೇ?
ಕೊನೆಗೂ ಅಭಿಮಾನಿಗಳು ಕಾಯುತಿದ್ದ ಕ್ಷಣ ಬಂದೆ ಬಿಡ್ತು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ರಾಯನ್ ಸರ್ಜಾ. ವಿಷಯ ಏನು ಗೊತ್ತೇ? 2

ಸದ್ಯಕ್ಕೆ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಚಿರು ಸರ್ಜಾ ಮೇಘನಾ ರಾಜ್ ಹಾಗೂ ರಾಯನ್ ರಾಜ್ ಸರ್ಜಾ ಅಭಿಮಾನಿಗಳಿಗೆ ಒಂದು ಶುಭಸುದ್ದಿ ಅತಿಶೀಘ್ರದಲ್ಲಿ ಕೇಳಿಬರಲಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಿರು ಸರ್ಜಾ ರವರ ಕೊನೆಯ ಸಿನಿಮಾ ರಾಜಮಾರ್ತಾಂಡ. ರಾಜಮಾರ್ತಾಂಡ ಚಿತ್ರ ಅತಿಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ. ಇತ್ತೀಚಿಗಷ್ಟೆ ದೇವಸ್ಥಾನಕ್ಕೆ ಹೋಗಿ ಚಿರುಸರ್ಜ ರವರ ಹೆಸರಿನಲ್ಲಿ ಪೂಜೆಯನ್ನು ಕೂಡ ಮಾಡಿಸಲಾಗಿದೆ‌. ಸದ್ಯಕ್ಕೆ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಚಿರು ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ಗದಲ್ಲಿ ಅವರ ಮಗ ರಾಯನ್ ರಾಜ್ ಸರ್ಜಾ ಕೂಡ ಬಣ್ಣ ಹಚ್ಚಿದ್ದಾನೆ ಎಂಬುದಾಗಿ ಕೇಳಿಬಂದಿದೆ. ಖಂಡಿತವಾಗಿ ಇದು ಅಭಿಮಾನಿಗಳಿಗೆ ಸಂತೋಷದ ಸುದ್ದಿಯಾಗಿದ್ದು ಅಪ್ಪ-ಮಗ ಇಬ್ಬರನ್ನು ಒಂದೇ ಪರದೆ ಮೇಲೆ ನೋಡಲು ಎಲ್ಲರೂ ಕಾತರರಾಗಿದ್ದಾರೆ. ಖಂಡಿತವಾಗಿ ಇದು ಟೆಕ್ನಾಲಜಿಯನ್ನು ಬಳಸಿಕೊಂಡು ಈ ದೃಶ್ಯಗಳನ್ನು ಚಿತ್ರೀಕರಿಸಿರುವುದು ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದಾರೆ. ಇದನ್ನು ಚಿತ್ರ ಬಿಡುಗಡೆಯಾದ ಮೇಲೆ ನೋಡಬೇಕಾಗಿದೆ.

Comments are closed.