ರಣಬೀರ್ ಅವರ ಬಳಿ 11 ಕೋಟಿಗೆ ಬೇಡಿಕೆ ಇಟ್ಟ ಆಲಿಯಾ ಭಟ್ ಮನೆಯವರು, ಆದರೆ ರಣವೀರ್ ಕಪೂರ್ ಕೊಟ್ಟಿದ್ದು ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂತು-ಇಂತು ಬಾಲಿವುಡ್ ಚಿತ್ರರಂಗದ ಪ್ರೇಮ ಪಕ್ಷಿಗಳ ಆಗಿರುವ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಇಬ್ಬರು ಕೂಡ ಅವರನ್ನು ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಬರೋಬ್ಬರಿ ಐದು ವರ್ಷಗಳ ಡೇಟಿಂಗ್ ನಂತರ ಇವರಿಬ್ಬರು ಮದುವೆಯಾಗಿದ್ದಾರೆ. ಆಲಿಯಾ ಭಟ್ ರವರನ್ನು ಮದುವೆಯಾಗುವುದಕ್ಕಿಂತ ಮುಂಚೆ ರಣಬೀರ್ ಕಪೂರ್ ಅವರ ಹೆಸರು ಸೋನಮ್ ಕಪೂರ್ ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್ ಅವರೊಂದಿಗೆ ಕೇಳಿಬಂದಿತ್ತು. ಆದರೆ ರಣಬೀರ್ ಕಪೂರ್ ಅವರು ಇವರೊಂದಿಗೆ ಡೇಟಿಂಗ್ ಮಾಡಿದರೆ ವಿನಃ ಇವರ ನಡುವಿನ ಪ್ರೀತಿ ಮದುವೆ ತನಕ ಹೋಗಲೇ ಇಲ್ಲ.

ಇನ್ನು ಈ ಕಡೆ ಆಲಿಯಾ ಭಟ್ ಅವರ ಕುರಿತಂತೆ ಹೇಳುವುದಾದರೆ ಚಿಕ್ಕವಯಸ್ಸಿನಿಂದಲೂ ಕೂಡ ರಣಬೀರ್ ಕಪೂರ್ ಅವರು ಅವರ ಕ್ರಶ್ ಆಗಿದ್ದರು. ತಮ್ಮ ಮನಸ್ಸಿನ ಆಸೆಯಂತೆಯೇ ತಾವು ಪ್ರೀತಿಸಿದ ಹುಡುಗನನ್ನು ಆಲಿಯಾ ಭಟ್ ರವರು ಮದುವೆಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಇವರಿಬ್ಬರ ಮದುವೆ ರಣಬೀರ್ ಕಪೂರ್ ಅವರ ನಿವಾಸದಲ್ಲಿಯೇ ಸರಳವಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಯಾರೆಲ್ಲ ಬಂದಿದ್ದರು ಎನ್ನುವುದು ಇಲ್ಲಿವರೆಗೂ ಅಧಿಕೃತವಾಗಿ ಹೊರಬಂದಿಲ್ಲ. ಒಟ್ಟಾರೆಯಾಗಿ ಕುಟುಂಬ ಸದಸ್ಯರನ್ನು ಹೊರತುಪಡಿಸಿದರೆ ಕೆಲವೇ ಕೆಲವು ಪತಿ ಆಪ್ತರನ್ನು ಮಾತ್ರ ಈ ಮದುವೆಗೆ ಆಹ್ವಾನಿಸಲಾಗಿತ್ತು ಎಂಬುದಿಲ್ಲಿ ತಿಳಿದುಬಂದಿದೆ. ಇನ್ನು ಈ ಮದುವೆ ಸಂದರ್ಭದಲ್ಲಿ ಆಲಿಯಾ ಭಟ್ ಅವರ ಕಡೆಯವರು ರಣಬೀರ್ ಕಪೂರ್ ಅವರಿಗೆ 11 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದರು. ಅರೇ ಇದೇನು ವಧುದಕ್ಷಿಣೆಯೇ ಎಂಬುದಾಗಿ ನೀವು ಆಶ್ಚರ್ಯ ಪಡಬಹುದು. ಆದರೆ ಇಲ್ಲಿ ಸ್ಟೋರಿಯಲ್ಲಿ ಟ್ವಿಸ್ಟ್ ಬೇರೆನೆ ಇದೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ.

alia bhatt ranbir kapoor marriage 1 | ರಣಬೀರ್ ಅವರ ಬಳಿ 11 ಕೋಟಿಗೆ ಬೇಡಿಕೆ ಇಟ್ಟ ಆಲಿಯಾ ಭಟ್ ಮನೆಯವರು, ಆದರೆ ರಣವೀರ್ ಕಪೂರ್ ಕೊಟ್ಟಿದ್ದು ಎಷ್ಟು ಗೊತ್ತೇ??
ರಣಬೀರ್ ಅವರ ಬಳಿ 11 ಕೋಟಿಗೆ ಬೇಡಿಕೆ ಇಟ್ಟ ಆಲಿಯಾ ಭಟ್ ಮನೆಯವರು, ಆದರೆ ರಣವೀರ್ ಕಪೂರ್ ಕೊಟ್ಟಿದ್ದು ಎಷ್ಟು ಗೊತ್ತೇ?? 2

ಹೌದು ಗೆಳೆಯರೇ ಉತ್ತರಭಾರತದ ಮದುವೆ ಸಂಪ್ರದಾಯದಲ್ಲಿ ಹೆಣ್ಣಿನ ಕಡೆಯವರು ಮದುವೆ ಗಂಡಿನ ಚಪ್ಪಲಿಯನ್ನು ಮುಚ್ಚಿಟ್ಟು ನಂತರ ಆತನಿಂದ ಹಣ ಪಡೆದುಕೊಂಡು ಅದನ್ನು ವಾಪಸ್ ಮಾಡುವ ಪದ್ದತಿ ಇದೆ. ಇಲ್ಲಿ ಕೂಡ ರಣಬೀರ್ ಕಪೂರ್ ಅವರ ಚಪ್ಪಲಿಯನ್ನು ಮುಚ್ಚಿಟ್ಟು ಹೆಣ್ಣಿನ ಕಡೆಯವರು ರಣಬೀರ್ ಕಪೂರ್ ಅವರಿಂದ ಬರೋಬ್ಬರಿ 11 ಕೋಟಿ ರೂಪಾಯಿ ಬೇಡಿಕೆ ಇಡುತ್ತಾರೆ. ಆದರೆ ರಣಬೀರ್ ಕಪೂರ್ ಕೇವಲ ಒಂದು ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡು ಬಿಡುತ್ತಾರೆ. ಇಂತಹ ಸುಮಧುರ ಕ್ಷಣಗಳನ್ನು ಹೊಂದಿರುವ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ಕೊನೆಗೂ ಕೂಡ ಸಂಪೂರ್ಣ ಯಶಸ್ವಿಯಾಗಿದೆ. ಮದುವೆಯ ಫೋಟೋಗಳನ್ನು ಆಲಿಯಾ ಭಟ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನೀವು ಕೂಡ ಆ ಫೋಟೋಗಳನ್ನು ಅವರ ಸೋಶಿಯಲ್ ಮೀಡಿಯಾ ಖಾತೆಗೆ ಹೋಗಿ ನೋಡಬಹುದಾಗಿದೆ.

Comments are closed.