ಇತ್ತೀಚಿಗೆ ಮದುವೆಯಾದ ಅಲಿಯಾ ಭಟ್ ಹಾಗೂ ರಣಬೀರ್ ಕಪೂರ್ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಮದುವೆ ಸತತವಾಗಿ ನಡೆದುಕೊಂಡು ಬಂದಿವೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಭಿಮಾನಿಗಳು ಈ ಕುರಿತಂತೆ ಮಾತನಾಡುತ್ತಲೇ ಇರುತ್ತಾರೆ. ಈಗ ಆ ಸಾಲಿಗೆ ಬಾಲಿವುಡ್ ಚಿತ್ರರಂಗದ ಫೇವರಿಟ್ ಜೋಡಿ ಗಳಾಗಿರುವ ಆಲಿಯಾ ಭಟ್ ಹಾಗೂ ರಣವೀರ್ ಕಪೂರ್ ಅವರು ಸೇರಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಇವರಿಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇವರಿಬ್ಬರು ಜೊತೆಗೆ ಇದ್ದರೂ ಕೂಡ ಇದರ ಕುರಿತಂತೆ ಎಲ್ಲೂ ಕೂಡ ಅಧಿಕೃತವಾಗಿ ಮಾತನಾಡಿ ಕೊಂಡಿರಲಿಲ್ಲ. ಆದರೆ ಇವರಿಬ್ಬರ ಪ್ರೇಮ ಪ್ರಕರಣ ಎನ್ನುವುದು ಅವಾರ್ಡ್ ಫಂಕ್ಷನ್ ಒಂದರಲ್ಲಿ ಜಗಜ್ಜಾಹೀರು ಆಗುತ್ತದೆ.

ಅಂದಿನಿಂದ ಇವರಿಬ್ಬರ ಪ್ರೇಮ ಕಥೆಯ ಕುರಿತಂತೆ ಒಂದೊಂದು ಕಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಗಾಳಿಸುದ್ದಿಯಾಗಿ ಹರಿದಾಡುತ್ತಿದ್ದವು. ಇವರಿಬ್ಬರ ಮದುವೆ ಕುರಿತಂತೆ ಹಲವಾರು ದಿನಾಂಕಗಳ ಗಾಳಿಸುದ್ದಿಗಳು ಕೂಡ ಹರಿದಾಡುತ್ತಿದ್ದವು. ಅದೆಲ್ಲ ಸುಳ್ಳು ಆಗಿದ್ದರೂ ಕೂಡ ಅವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಮಾತ್ರ ಸತ್ಯವಾಗಿತ್ತು. ಅದು ಕೊನೆಗೂ ಏಪ್ರಿಲ್ 14ರಂದು ಇವರಿಬ್ಬರು ಸಪ್ತಪದಿ ತುಳಿಯುವ ಮೂಲಕ ನಿಜವಾಗಿ ಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರು ಮದುವೆಯಾಗಿರುವ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

alia bhatt ranbir kapoor marriage 2 | ಇತ್ತೀಚಿಗೆ ಮದುವೆಯಾದ ಅಲಿಯಾ ಭಟ್ ಹಾಗೂ ರಣಬೀರ್ ಕಪೂರ್ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??
ಇತ್ತೀಚಿಗೆ ಮದುವೆಯಾದ ಅಲಿಯಾ ಭಟ್ ಹಾಗೂ ರಣಬೀರ್ ಕಪೂರ್ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? 2

ಮದುವೆಗೆ ಹೆಚ್ಚಿನ ಅತಿಥಿಗಳು ಬಂದಿಲ್ಲವಾದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರಿಗೆ ಶುಭ ಹಾರೈಸಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ರಣಬೀರ್ ಕಪೂರ್ ಅವರು ಹಲವಾರು ವರ್ಷಗಳಿಂದ ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಆಲಿಯಾ ಭಟ್ ರವರು ಕೆಲವು ವರ್ಷಗಳ ಹಿಂದಷ್ಟೇ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟವರು. ಇವರಿಬ್ಬರ ನಡುವೆ ವಯಸ್ಸಿನ ಅಂತರ ಎಷ್ಟಿರಬಹುದು ಎನ್ನುವುದಾಗಿ ಎಲ್ಲರಲ್ಲೂ ಕೂಡ ಕುತೂಹಲವಿದೆ. ಹೌದು ಗೆಳೆಯರೇ ಇವರಿಬ್ಬರ ನಡುವೆ ವಯಸ್ಸಿನ ಅಂತರವಿದ್ದರೂ ಕೂಡ ಅದು ಅವರ ಪ್ರೀತಿಗೆ ಅಡ್ಡಿಯಾಗಿಲ್ಲ ಎನ್ನುವುದು ವಿಶೇಷ. ಹೌದು ಇವರಿಬ್ಬರ ನಡುವೆ ಹತ್ತು ವರ್ಷದ ವಯಸ್ಸಿನ ಅಂತರವಿದೆ. ಆಲಿಯಾ ಭಟ್ ಅವರಿಗೆ 29ವರ್ಷ ವಯಸ್ಸಾದರೆ ಇತ್ತಾ ರಣಬೀರ್ ಕಪೂರ್ ಅವರಿಗೆ 39 ವರ್ಷ ವಯಸ್ಸಾಗಿದೆ. ಇವರಿಬ್ಬರು ನೂರುಕಾಲ ಜೊತೆಜೊತೆಯಾಗಿ ಬಾಳಲಿ ಎಂಬುದಾಗಿ ಹಾರೈಸೋಣ. ಇವರಿಬ್ಬರ ಮದುವೆ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.