ತಮಿಳಿನಾಡಿನಲ್ಲಿಯೂ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾ ನೋಡಿ ರಜನಿಕಾಂತ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಏಪ್ರಿಲ್ 14ರಂದು 10000ಕ್ಕೂ ಅಧಿಕ ಪರದೆಗಳ ಮೇಲೆ ಬಿಡುಗಡೆ ಆಗಿರುವ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ ಚಾಪ್ಟರ್ 2 ಈಗ 10500 ಕ್ಕೂ ಅಧಿಕ ಪರದೆಗಳ ಮೇಲೆ ವಿಶ್ವಾದ್ಯಂತ ಪ್ರದರ್ಶನ ಕಾಣುತ್ತಿದೆ. ನಿಜಕ್ಕೂ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರತಂಡದಿಂದ ಕನ್ನಡ ಚಿತ್ರರಂಗದ ಮಾರುಕಟ್ಟೆ ಹಾಗೂ ಘನತೆ-ಗೌರವ ಎನ್ನುವುದು ಆಕಾಶವನ್ನು ತಲುಪಿದೆ ಎನ್ನುವುದರಲ್ಲಿ ಯಾವುದೇ ಆಶ್ಚರ್ಯ ಪಡುವ ಮಾತಿಲ್ಲ. ಯಾಕೆಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರ ಇದಕ್ಕೆ ಅರ್ಹವಾದದ್ದು ಎನ್ನುವುದು ಬಿಡುಗಡೆಗೂ ಮುನ್ನವೇ ಎಲ್ಲರೂ ನಿರೀಕ್ಷೆ ಮಾಡಿದ್ದರು.

ಈಗಾಗಲೇ ಪ್ರಪಂಚದಾದ್ಯಂತ 300 ಕೋಟಿಗೂ ಅಧಿಕ ಕಲೆಕ್ಷನ್ ಅನ್ನು ಕೇವಲ ಎರಡು ದಿನಗಳಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರ ಪೂರೈಸಿರುವುದು ನಿಜಕ್ಕೂ ಕೂಡ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ದಾಖಲೆಯಾಗಿದ್ದು ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಿಂದಿ ಪ್ರಾಂತ್ಯಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಮೊದಲ ದಿನವೇ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾವಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರ ಸಾಧನೆಯನ್ನು ಮಾಡಿದೆ. ತಮಿಳಿನ ವಿಜಯ್ ನಟನೆಯ ಬೀಸ್ಟ್ ಚಿತ್ರದ ಅಡೆತಡೆ ಇದ್ದರೂ ಕೂಡ ಅದನ್ನು ಸುಲಭವಾಗಿಯೇ ಹೊಸಕಿ ಹಾಕಿ ಈಗ ವಿದೇಶಗಳಲ್ಲಿ ಕೂಡ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡುತ್ತಿರುವ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ತಮಿಳಿನಲ್ಲಿ ಕೂಡ ಬೀಸ್ಟ್ ಚಿತ್ರಕ್ಕಿಂತ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಪ್ರೇಕ್ಷಕರಿಂದ ಬೇಡಿಕೆ ಹೆಚ್ಚಾಗಿದೆ. ಬೀಸ್ಟ್ ಚಿತ್ರದ ಪ್ರದರ್ಶನಗಳನ್ನು ತೆಗೆದು ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಸಾರವನ್ನು ಮಾಡುತ್ತಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಸೆಲೆಬ್ರಿಟಿಗಳು ಕೂಡ ಮೊದಲ ದಿನವೇ ನೋಡಿ ಚಿತ್ರದ ಫ್ಯಾನ್ಸ್ ಆಗಿಬಿಟ್ಟಿದ್ದಾರೆ.

rajanikanth kgf2 yash | ತಮಿಳಿನಾಡಿನಲ್ಲಿಯೂ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾ ನೋಡಿ ರಜನಿಕಾಂತ್ ಹೇಳಿದ್ದೇನು ಗೊತ್ತೇ??
ತಮಿಳಿನಾಡಿನಲ್ಲಿಯೂ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾ ನೋಡಿ ರಜನಿಕಾಂತ್ ಹೇಳಿದ್ದೇನು ಗೊತ್ತೇ?? 2

ಅದರ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಹಾಗೂ ಕನ್ನಡಿಗನಾಗಿರುವ ರಜನಿಕಾಂತ್ ರವರು ಕೂಡ ಮೊದಲ ದಿನದ ಚಿತ್ರವನ್ನು ನೋಡಿ ಚಿತ್ರತಂಡಕ್ಕೆ ನೀಡಿರುವ ಪ್ರತಿಕ್ರಿಯೆ ಏನು ಎಂಬುದು ಈಗ ತಿಳಿದುಬಂದಿದೆ. ಹೌದು ಗೆಳೆಯರೇ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಮೊದಲ ದಿನವೇ ನೋಡಿದ ನಂತರ ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದು ಚಿತ್ರದ ನಿರ್ಮಾಪಕರಾಗಿರುವ ವಿಜಯ್ ಕಿರಗಂದೂರು ರವರಿಗೆ ಕರೆ ಮಾಡಿ ಒಳ್ಳೆಯ ಸಿನಿಮಾವನ್ನು ಮಾಡಿದ್ದೀರಿ ಎನ್ನುವುದಾಗಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ತಲೈವಾ ಮೆಚ್ಚುಗೆಯನ್ನು ಸೂಚಿಸಿದ ನಂತರ ಇನ್ನೇನು ಬೇಕು ಹೇಳಿ. ಖಂಡಿತವಾಗಿ ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ರಾಕಿ ಭಾಯ್ ಸುವರ್ಣಾಕ್ಷರದಲ್ಲಿ ತನ್ನ ಅಧ್ಯಾಯವನ್ನು ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.