ದುಬಾರಿ ಸಂಭಾವನೆ ಮೂಲಕ ದಾಖಲೆ ಬರೆದ ಶಿವಣ್ಣ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕ್ಕೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೀ ಕನ್ನಡ ವಾಹಿನಿ ಹಾಗೂ ಕಲರ್ಸ್ ಕನ್ನಡ ವಾಹಿನಿ ಕನ್ನಡ ಚಿತ್ರರಂಗದ ಕಿರುತೆರೆ ಕ್ಷೇತ್ರದಲ್ಲಿ ಲೀಡಿಂಗ್ ವಾಹಿನಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ಕೇವಲ ಧಾರವಾಹಿಗಳನ್ನು ಮಾತ್ರವಲ್ಲದೆ ಜನಪ್ರಿಯ ರಿಯಾಲಿಟಿ ಶೋಗಳನ್ನು ಕೂಡ ಈ ವಾಹಿನಿಗಳು ಪ್ರಸಾರ ಮಾಡುತ್ತದೆ. ಇನ್ನು ಪ್ರತಿಯೊಂದು ವಾಹಿನಿಗಳು ಕೂಡ ಇಂತಹ ಗುಣಮಟ್ಟದ ಹಾಗೂ ಕ್ವಾಲಿಟಿಯ ಕಾರ್ಯಕ್ರಮಗಳನ್ನು ಪ್ರೇಕ್ಷಕರ ಮುಂದೆ ತರುವಲ್ಲಿ ಸ್ಪರ್ಧೆಗೆ ಬಿದ್ದಿರುತ್ತವೆ. ಇದು ವಾಹಿನಿಗಳ ಪ್ರತಿಷ್ಠೆ ಹಾಗೂ ಆದಾಯದ ಪ್ರಶ್ನೆಯಾಗಿರುತ್ತದೆ. ಹೀಗಾಗಿ ಪ್ರತಿಯೊಂದು ವಾಹಿನಿಗಳು ಕೂಡ ಉತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಕಡೆಗೆ ಹಲವಾರು ಯೋಜನೆಗಳನ್ನು ಹೆಣೆದಿರುತ್ತವೆ.

ಇನ್ನೂ ಒಂದು ಕಾಲದಲ್ಲಿ ಸಿನಿಮಾರಂಗ ಎಂದರೆ ಧಾರವಾಹಿ ಹಾಗೂ ಕಿರುತೆರೆ ಲೋಕಕ್ಕಿಂತ ದೊಡ್ಡದಾದಂತಹ ಪ್ರಪಂಚ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ ಕಳೆದ ಎರಡರಿಂದ ಮೂರು ವರ್ಷಗಳಲ್ಲಿ ಕನ್ನಡ ಕಿರುತೆರೆ ಲೋಕ ದೊಡ್ಡಮಟ್ಟದಲ್ಲಿ ಬೆಳವಣಿಗೆಯನ್ನು ಕಂಡಿದೆ. ಸಿನಿಮಾ ಆದರೆ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಕೆಲಸ ಸಿಕ್ಕಿ ಅದರ ಆದಾಯ ಕೂಡ ಅಷ್ಟಕ್ಕೆ ಸೀಮಿತವಾಗಿರುತ್ತದೆ. ಆದರೆ ಧಾರವಾಹಿ ಅಥವಾ ರಿಯಾಲಿಟಿ ಶೋ ಕ್ಷೇತ್ರ ಅಂದರೆ ಕಿರುತೆರೆ ಎನ್ನುವುದು ಪ್ರತಿದಿನವೂ ಕೂಡ ಚಾಲ್ತಿಯಲ್ಲಿರುವಂತಹ ಕ್ಷೇತ್ರ. ಹೀಗಾಗಿ ಇಲ್ಲಿ ಪ್ರತಿದಿನವೂ ಕೂಡ ದುಡಿಮೆ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಲಾವಿದರಿಗಿಂತ ಹೆಚ್ಚಾಗಿ ಕಿರುತೆರೆಯ ಕಲಾವಿದರು ಅತ್ಯಂತ ಹೆಚ್ಚಿನ ಹಣವನ್ನು ಗಳಿಸುತ್ತಿದ್ದಾರೆ.

dkd shivanna | ದುಬಾರಿ ಸಂಭಾವನೆ ಮೂಲಕ ದಾಖಲೆ ಬರೆದ ಶಿವಣ್ಣ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕ್ಕೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ದುಬಾರಿ ಸಂಭಾವನೆ ಮೂಲಕ ದಾಖಲೆ ಬರೆದ ಶಿವಣ್ಣ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕ್ಕೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? 3

ನೀವು ಈಗಾಗಲೇ ಹಲವಾರು ಧಾರವಾಹಿಗಳಲ್ಲಿ ಕನ್ನಡ ಚಿತ್ರರಂಗದ ಹಲವಾರು ಜನ ಹಿರಿಯ ಕಲಾವಿದರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ನಟಿಸುತ್ತಿರುವುದು ಹಾಗೂ ಇದರಲ್ಲಿ ಯಶಸ್ವಿಯಾಗಿರುವುದನ್ನು ನೋಡಿರಬಹುದು. ಸಿನಿಮಾದಲ್ಲಿ ವಿಫಲರಾಗಿರುವ ಅಂತಹ ಅನಿರುದ್ಧ ರವರಂತಹ ನಟ ಕೂಡ ಜೊತೆ ಜೊತೆಯಲ್ಲಿ ಧಾರವಾಹಿ ಮೂಲಕ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವುದು ನೀವು ನೋಡಿದ್ದೀರಿ. ಕಿರುತೆರೆಯ ಸ್ಪೆಷಲ್ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಚಿತ್ರರಂಗದ ಸ್ಟಾರ್ ನಟರನ್ನು ತೀರ್ಪುಗಾರರನ್ನಾಗಿ ಕೂಡ ಆಯ್ಕೆ ಮಾಡುವುದನ್ನು ಈಗಾಗಲೇ ಹಲವಾರು ಕಾರ್ಯಕ್ರಮಗಳ ಮೂಲಕ ನೀವು ನೋಡಿ ಸಾಕ್ಷಿಯಾಗಿದ್ದೀರಿ.

ಇತ್ತೀಚಿಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಆರಂಭವಾಗಿದ್ದು ಇಲ್ಲಿ ತೀರ್ಪುಗಾರರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕಾಣಿಸಿಕೊಂಡಿದ್ದರು. ಈಗ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಮತ್ತೊಬ್ಬ ಕನ್ನಡದ ಸೂಪರ್ ಸ್ಟಾರ್ ನಟನ ಎಂಟ್ರಿ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸೆಂಚುರಿಸ್ಟಾರ್ ಶಿವಣ್ಣನವರು ಕಾಣಿಸಿಕೊಳ್ಳಲಿದ್ದಾರೆ. ಇದು ನಿಜಕ್ಕೂ ಕೂಡ ಡ್ಯಾನ್ಸ್ ಅಭಿಮಾನಿಗಳಿಗೆ ಅರ್ಥಪೂರ್ಣ ವಾದಂತಹ ಸಂದೇಶ ಎಂದರೆ ತಪ್ಪಾಗಲಾರದು. ಕನ್ನಡ ಚಿತ್ರರಂಗದ ಡ್ಯಾನ್ಸ್ ಐಕಾನ್ ಆಗಿರುವ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ತೀರ್ಪುಗಾರರಾಗಿ ಬರುತ್ತಿರುವುದು ನಿಜಕ್ಕೂ ಕೂಡ ಎಲ್ಲರಿಗೂ ಸಂತೋಷವನ್ನು ತರಿಸಿದೆ.

ಇತ್ತೀಚಿಗೆ ವಿಜಯರಾಘವೇಂದ್ರ ಹಾಗೂ ರಾಜೇಶ್ ಕೃಷ್ಣನ್ ರವರು ಜೀ ಕನ್ನಡ ವಾಹಿನಿಯಿಂದ ಕಲರ್ಸ್ ಕನ್ನಡ ವಾಹಿನಿಗೆ ಸ್ಥಳಾಂತರವನ್ನು ಮಾಡಿದ್ದರು ಕೂಡ ಜೀ ಕನ್ನಡ ವಾಹಿನಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ ರವರನ್ನು ವಾಹಿನಿಗೆ ಕರೆತಂದು ಸ್ಟಾರ್ ಕಳೆಯನ್ನು ನೀಡಿತ್ತು. ಆದರೆ ಈಗ ಮತ್ತೊಬ್ಬ ಕನ್ನಡದ ದೊಡ್ಡಮಟ್ಟದ ಸ್ಟಾರ್ ಆಗಿರುವ ಶಿವಣ್ಣನವರನ್ನು ಡ್ಯಾನ್ಸ್ ಕರ್ನಾಟಕ ಕಾರ್ಯಕ್ರಮಕ್ಕೆ ಕರೆಸಿಕೊಳ್ಳುವ ಮೂಲಕ ತನ್ನ ಪ್ರತಿಷ್ಠೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಸಾಮಾನ್ಯವಾಗಿ ಸ್ಟಾರ್ ನಟರನ್ನು ತೀರ್ಪುಗಾರರನ್ನಾಗಿ ಮಾಡುತ್ತಾರೆ ಎಂದರೆ ಖಂಡಿತವಾಗಿ ದೊಡ್ಡಮಟ್ಟದಲ್ಲಿ ಸಂಭಾವನೆಯನ್ನು ನೀಡಿಯೇ ನೀಡುತ್ತಾರೆ.

dkd shivanna 2 | ದುಬಾರಿ ಸಂಭಾವನೆ ಮೂಲಕ ದಾಖಲೆ ಬರೆದ ಶಿವಣ್ಣ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕ್ಕೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ದುಬಾರಿ ಸಂಭಾವನೆ ಮೂಲಕ ದಾಖಲೆ ಬರೆದ ಶಿವಣ್ಣ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕ್ಕೆ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? 4

ಸಾಮಾನ್ಯವಾಗಿ ತೀರ್ಪುಗಾರರಿಗೆ ಆಗಲಿ ಅಥವಾ ಸ್ಪರ್ಧಿಗಳಿಗೆ ಆಗಲಿ ವಾಹಿನಿಯವರು ವಾರದ ಸಂಭಾವನೆಯನ್ನು ನೀಡುತ್ತಾರೆ. ಆದರೆ ಶಿವಣ್ಣ ಇವರಿಗಿಂತ ಸ್ಪೆಷಲ್ ಹೀಗಾಗಿ ಶಿವಣ್ಣನವರಿಗೆ ನಾಲ್ಕು ತಿಂಗಳವರೆಗೆ ನಡೆಯಲಿರುವ ಪೂರ್ಣ ಕಾರ್ಯಕ್ರಮಕ್ಕೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆಯನ್ನು ನೀಡಿದ್ದಾರೆ. ಈ ಮೂಲಕ ಶಿವಣ್ಣ ಈ ಕಾರ್ಯಕ್ರಮದಲ್ಲಿ ಪೂರ್ಣಪ್ರಮಾಣದ ತೀರ್ಪುಗಾರರಾಗಿ ಪ್ರೇಕ್ಷಕರ ಮನವನ್ನು ಗೆಲ್ಲಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಶಿವಣ್ಣನವರ ನಾಯಕತ್ವದಲ್ಲಿ ಯಾವ ರೀತಿ ಟಿಆರ್ ಪಿ ರೇಟಿಂಗ್ ದಾಖಲೆಯನ್ನು ನಿರ್ಮಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.