ಒಂದು ವೇಳೆ ಹೆಂಡತಿ ಕೋಪಗೊಂಡಾಗ ಆಕೆಯನ್ನು ಮನವೊಲಿಸಲು ಏನು ಮಾಡಬೇಕು ಗೊತ್ತೇ?? ಏನೇನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ವಾದಂತಹ ಅಂಶವಾಗಿರುತ್ತದೆ. ಇನ್ನು ಗಂಡ ಹೆಂಡತಿಯ ಸಂಬಂಧ ಎನ್ನುವುದು ಜೀವನದಲ್ಲಿ ಅತ್ಯಂತ ಪವಿತ್ರ ಹಾಗೂ ಪ್ರೀತಿಯನ್ನು ಹೊಂದಿರುವಂತಹ ಸಂಬಂಧವಾಗಿರುತ್ತದೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ದಾಂಪತ್ಯ ಜೀವನದಲ್ಲಿ ಕೂಡ ಕೇವಲ ಸುಖ ಸಮರಸ ಮಾತ್ರವಲ್ಲದೆ ಆಗಾಗ ಜಗಳಗಳು ಕೂಡ ಸಣ್ಣಪುಟ್ಟ ನಡೆಯುತ್ತಲೇ ಇರುತ್ತದೆ.

ಸಂಸಾರ ಎಂದಮೇಲೆ ಪ್ರೀತಿ ಮಾತ್ರವಲ್ಲದೆ ಆಗಾಗ ಮನಸ್ಥಾಪಗಳು ಕೂಡ ಕಾಣಿಸಿಕೊಳ್ಳುತ್ತವೆ. ಆದರೆ ಅದನ್ನು ಇಬ್ಬರು ಸೇರಿಕೊಂಡು ಶಮನ ಮಾಡಿಕೊಂಡು ಹೋಗುವುದೇ ನಿಜವಾದ ಜೀವನ. ಆದರೆ ಕೆಲವೊಮ್ಮೆ ಸುಖಾಸುಮ್ಮನೆ ಕೂಡ ಹೆಂಡತಿಯರು ಗಂಡಂದಿರ ಮೇಲೆ ಕೋಪವನ್ನು ಮಾಡಿಕೊಳ್ಳುತ್ತಾರೆ. ಆಗ ಗಂಡಂದಿರು ಹೆಂಡತಿಯರನ್ನ ಶಾಂತ ಗೊಳಿಸುವುದು ಹೇಗೆ ಎನ್ನುವ ಯೋಚನೆಯಲ್ಲಿ ಇರುತ್ತಾರೆ. ಅಂತಹ ಗೊಂದಲದಲ್ಲಿ ಇರುವ ಗಂಡಂದಿರಿಗೆ ಹೆಂಡಂತಿಯರ ಕೋಪವನ್ನು ಶಮನಗೊಳಿಸಲು ಇರುವಂತಹ ವಿಧಾನವನ್ನು ವಿವರವಾಗಿ ಹೇಳಲು ಹೊರಟಿದ್ದೇವೆ. ತಪ್ಪದೇ ಈ ಲೇಖನಿಯನ್ನು ಸಂಪೂರ್ಣ ವಿವರವಾಗಿ ಕೊನೆಯವರೆಗೆ ಓದುವುದನ್ನು ಮಾತ್ರ ಮರೆಯಬೇಡಿ. ಇದಕ್ಕಾಗಿ ಗಂಡಂದಿರು ಏನೆಲ್ಲಾ ಮಾಡಬೇಕಾಗುತ್ತದೆ ಎಂಬುದನ್ನು ಕೂಡ ತಿಳಿಯೋಣ.

couple wom | ಒಂದು ವೇಳೆ ಹೆಂಡತಿ ಕೋಪಗೊಂಡಾಗ ಆಕೆಯನ್ನು ಮನವೊಲಿಸಲು ಏನು ಮಾಡಬೇಕು ಗೊತ್ತೇ?? ಏನೇನು ಮಾಡಬೇಕು ಗೊತ್ತೇ??
ಒಂದು ವೇಳೆ ಹೆಂಡತಿ ಕೋಪಗೊಂಡಾಗ ಆಕೆಯನ್ನು ಮನವೊಲಿಸಲು ಏನು ಮಾಡಬೇಕು ಗೊತ್ತೇ?? ಏನೇನು ಮಾಡಬೇಕು ಗೊತ್ತೇ?? 3

ಮನೆಕೆಲಸದಲ್ಲಿ ಹೆಂಡತಿಗೆ ಸಹಾಯ ಮಾಡುವುದು; ಒಂದು ವೇಳೆ ನಿಮಗೆ ನಿಮ್ಮ ಹೆಂಡತಿ ಕೋಪದಲ್ಲಿದ್ದಾರೆ ಎಂದು ಅನಿಸಿದರೆ ಅವರು ಮಾಡುವ ಕೆಲಸದಲ್ಲಿ ಅವರಿಗೆ ಆದಷ್ಟು ಸಹಾಯ ಮಾಡಿ. ಮನೆ ಕೆಲಸದಲ್ಲಿ ಗಂಡ ಸಹಾಯವನ್ನು ಮಾಡಿದರೆ ಹೆಂಡತಿಯರಿಗೂ ಕೂಡ ಸಂತೋಷ ಆಗುತ್ತದೆ. ಈ ಸಂದರ್ಭದಲ್ಲಿ ಯಾಕೆ ಕೊಪಗೊಂಡಿರುವುದು ಎನ್ನುವುದಾಗಿ ನೀವು ಕಾರಣವನ್ನು ಕೂಡ ಕೇಳಬಹುದಾಗಿದೆ. ಹೆಂಡತಿ ಕೆಲಸ ಮಾಡುವಾಗ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಂಡರೆ ಹೆಂಡತಿಯು ಕೂಡ ತಾನು ಯಾವ ಕಾರಣಕ್ಕಾಗಿ ಕೋಪಗೊಂಡಿದ್ದೇನು ಎನ್ನುವುದನ್ನು ನಿಮ್ಮ ಬಳಿ ಮುಕ್ತವಾಗಿ ಹೇಳಿಕೊಳ್ಳುತ್ತಾರೆ.

ಜಾಸ್ತಿ ಪ್ರೀತಿ ತೋರುವುದರಿಂದ; ಸಾಮಾನ್ಯವಾಗಿ ಗಂಡಂದಿರು ಪತ್ನಿಯರ ಕುರಿತಂತೆ ಪ್ರೀತಿಯನ್ನು ತಮ್ಮ ಮನಸ್ಸಿನ ಒಳಗೆ ಇಟ್ಟುಕೊಂಡಿರಬಹುದು. ಆದರೆ ಪತ್ನಿಯರಿಗೆ ಮನಬಿಚ್ಚಿ ಗಂಡಂದಿರು ಪ್ರೀತಿ ಮಾಡಿದಾಗಲೇ ಇಷ್ಟ ಆಗೋದು. ಈ ಸಂದರ್ಭದಲ್ಲಿ ನೀವೂ ಮನಬಿಚ್ಚಿ ಪ್ರೀತಿ ಮಾಡದೇ ಹೆಂಡತಿಗೆ ಕೋಪ ಬರುವಂತೆ ಮಾಡಬೇಡಿ. ನಿಮ್ಮ ಪತ್ನಿಯ ಕುರಿತಂತೆ ವಿಶೇಷವಾದ ಕೇರಿಂಗ್ ತೆಗೆದುಕೊಂಡು ಸ್ಪೆಷಲ್ ಫೀಲ್ ಆಗುವಂತೆ ಮಾಡಿ. ಮನೆಯಿಂದ ಹೊರಗೆ ವಿಶೇಷವಾದ ಸ್ಥಳಗಳಿಗೆ ಆಕೆಯನ್ನು ಒಬ್ಬರನ್ನೇ ಕರೆದುಕೊಂಡು ಹೋಗಿ. ಹೀಗೆ ಮಾಡುವುದರಿಂದ ಅವರು ನಿಮ್ಮ ಕುರಿತಂತೆ ವಿಶೇಷವಾದ ಕಾಳಜಿ ಹಾಗೂ ಪ್ರೀತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಪತ್ನಿಗೆ ಪ್ರಾಮುಖ್ಯತೆ ನೀಡುವುದು; ನಿಮ್ಮ ಜೀವನದ ವಿಶೇಷ ಮಹಿಳೆ ಆಗಿರುವ ನಿಮ್ಮ ಪತ್ನಿಗೆ ಆದಷ್ಟು ಪ್ರಾಥಮಿಕ ಕಾಳಜಿ ಹಾಗೂ ಗಮನವನ್ನು ನೀಡಿ. ನಿಮ್ಮ ಪತ್ನಿಗೆ ನಿಮ್ಮ ಜೀವನದಲ್ಲಿ ಮೊದಲ ಆದ್ಯತೆ ನೀಡದಿದ್ದರೆ ಖಂಡಿತವಾಗಿಯೂ ಅವರಿಗೆ ಮನಸ್ಸಿಗೆ ಬೇಸರವಾಗೋದಿಲ್ವೆ. ಹೀಗಾಗಿ ಮದುವೆಯಾದ ಹೊಸದರಲ್ಲಿ ಅವರನ್ನು ನೀವು ಚೆನ್ನಾಗಿ ನೋಡಿಕೊಳ್ಳುತ್ತಿರಬಹುದು. ಆದರೆ ಮದುವೆಯಾಗಿ ಕುಟುಂಬ ದೊಡ್ಡದಾದ ನಂತರ ಅವರನ್ನು ಪ್ರಾಮುಖ್ಯತೆ ದೃಷ್ಟಿಯಲ್ಲಿ ಅಷ್ಟೊಂದು ಗಮನ ನೀಡದಿರುವುದು ಅವರ ಮನಸ್ಸಿಗೆ ಬೇಸರವನ್ನು ಉಂಟುಮಾಡಬಹುದು. ಹೀಗಾಗಿ ತಪ್ಪದೇ ಅವರಿಗೆ ಯಾವುದೇ ಸಂದರ್ಭದಲ್ಲಿಯೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ನೀವು ಅವರ ಕಾಳಜಿಯನ್ನು ವಹಿಸಬೇಕು. ಅವರ ಕಷ್ಟ ಹಾಗೂ ಸುಖಗಳಲ್ಲಿ ಭಾಗಿಯಾಗಿರಬೇಕು.

marriage coup wom 1 | ಒಂದು ವೇಳೆ ಹೆಂಡತಿ ಕೋಪಗೊಂಡಾಗ ಆಕೆಯನ್ನು ಮನವೊಲಿಸಲು ಏನು ಮಾಡಬೇಕು ಗೊತ್ತೇ?? ಏನೇನು ಮಾಡಬೇಕು ಗೊತ್ತೇ??
ಒಂದು ವೇಳೆ ಹೆಂಡತಿ ಕೋಪಗೊಂಡಾಗ ಆಕೆಯನ್ನು ಮನವೊಲಿಸಲು ಏನು ಮಾಡಬೇಕು ಗೊತ್ತೇ?? ಏನೇನು ಮಾಡಬೇಕು ಗೊತ್ತೇ?? 4

ಎಲ್ಲಾ ವಿಚಾರಗಳನ್ನು ಶೇರ್ ಮಾಡಿಕೊಳ್ಳುವುದು; ಒಂದುವೇಳೆ ಯಾವುದೇ ವಿಚಾರಕ್ಕೆ ನಿಮ್ಮ ಕುರಿತಂತೆ ನಿಮ್ಮ ಪತ್ನಿ ಕೋಪ ತೋರುತ್ತಿದ್ದಾರೆ ಎಂದರೆ ಮಾತಿನ ಮೂಲಕ ಅದನ್ನು ಬಗೆಹರಿಸಲು ಪ್ರಯತ್ನಿಸಿ. ಕೇವಲ ಈ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಸಮಯದಲ್ಲಿ ಕೂಡ ನಿಮ್ಮ ಪತ್ನಿಯೊಂದಿಗೆ ಮಾತನಾಡುತ್ತ ದೈನಂದಿನ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರಿ. ಪರಸ್ಪರ ಮಾತನಾಡುವುದರಿಂದಲೇ ನಿಮ್ಮಿಬ್ಬರ ಇಷ್ಟ ಕಷ್ಟ ಗಳನ್ನು ಪರಸ್ಪರ ಅರಿತುಕೊಂಡು ಪರಸ್ಪರ ಒಬ್ಬರನ್ನೊಬ್ಬರನ್ನು ತಿಳಿದುಕೊಳ್ಳಲು ಸಾಧ್ಯ.

ನಿಮ್ಮ ಜೀವನದಲ್ಲಿ ದಿನನಿತ್ಯ ಏನು ನಡೆಯುತ್ತಿದೆ ಎಂಬುದನ್ನು ನಿಮ್ಮ ಪತ್ನಿಗೆ ತಿಳಿಸಿ. ನಿಮ್ಮ ಪತ್ನಿಯ ದಿನ ಹೇಗಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಪರಸ್ಪರ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತದೆ. ಪ್ರತಿಯೊಬ್ಬ ದಂಪತಿಗಳು ದಾಂಪತ್ಯ ಜೀವನದಲ್ಲಿ ಯಶಸ್ವಿಯಾಗಿ ದೀರ್ಘ ಕಾಲದವರೆಗೆ ಪರಸ್ಪರ ಜೊತೆಯಾಗಿ ಸಾಗಬೇಕು ಎಂಬ ಹಂಬಲವನ್ನು ಹೊಂದಿದ್ದರೆ ಈ ಮೇಲೆ ಉಲ್ಲೇಖಿಸಲಾಗಿರುವ ಅಂಶಗಳನ್ನು ತಪ್ಪದೇ ನಿಮ್ಮ ನಿಜಜೀವನದಲ್ಲಿ ಪಾಲಿಸಿ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.